ಇಲ್ಲಿನ ಅಯೋಧ್ಯಾ ನಗರದ ನಿವಾಸಿ ಅಟ್ಲೂರಿ ವೆಂಕಟರಮಣ (49) ಹೈದರಾಬಾದ್ನಲ್ಲಿ ಕಟ್ಟಡ ನಿರ್ಮಾಣ ಮಾಡಿಸುವ ಕೆಲಸ. ಇವರಿಗೆ ವಿಜಯವಾಡ ನಿವಾಸಿ ಕೋನರಾಜು ಹೇಮಲತಾ (43) ಜೊತೆ 18 ವರ್ಷಗಳ ಹಿಂದೆ ಮದುವೆಯಾಗಿತ್ತು.
ಕೊಥ ಕೊಥ ಕುದಿಯುವ ನೀರನ್ನೇ ಗಂಡನ ಮೇಲೆ ಎರಚಿದ ಪತ್ನಿ! - ಎರಚಿದ ಪತ್ನಿ
ವಿಜಯವಾಡ: ಆಸ್ತಿಗೋಸ್ಕರ ನಡೆದ ಕಲಹದಲ್ಲಿ ಕೊಥ ಕೊಥ ಕುದಿಯುತ್ತಿರುವ ನೀರನ್ನು ಗಂಡನ ಮೇಲೆ ಎರಚಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ವಾಂಬೆ ಕಾಲೊನಿಯ ನಗರಪಾಲಕ ಸಂಸ್ಥೆಯ ಶಾಲೆಯಲ್ಲಿ ಹೇಮಲತಾ ಹಿಂದಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ಗಂಡ-ಹೆಂಡ್ತಿ ಮಧ್ಯೆ ಕಲಹಗಳು ನಡೆಯುತ್ತಲೇ ಇದ್ದವು. ಗಂಡನ ಮೇಲಿರುವ ಆಸ್ತಿ ಮಕ್ಕಳಿಗೆ ಮತ್ತು ಹೆಂಡ್ತಿ ಹೆಸರಿಗೆ ಮಾಡುವಂತೆ ಹೇಮಲತಾ ಕೇಳಿಕೊಂಡಿದ್ದರು. ಆದ್ರೆ, ಹೆಂಡ್ತಿ ಮಾತಿಗೆ ಕ್ಯಾರೇ ಎನ್ನುತ್ತಿರಲಿಲ್ಲ. ಸೋಮವಾರ ರಾತ್ರಿ ಇಬ್ಬರು ಮತ್ತೆ ಕಿತ್ತಾಡಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಸ್ನಾನ ಮಾಡಲಿ ಎಂದು ವೆಂಕಟರಮಣ ಸ್ಟೌವ್ ಮೇಲೆ ನೀರು ಕಾಯಿಸಲು ಇಟ್ಟಿದ್ದಾರೆ. ಇದೇ ಸಮಯವನ್ನ ನೋಡಿಕೊಂಡ ಹೆಂಡತಿ ಸಿಟ್ಟಿನ ಭರದಲ್ಲಿ ಕೊಥ ಕೊಥ ಕುದಿಯುತ್ತಿರುವ ನೀರನ್ನೇ ತೆಗೆದುಕೊಂಡು ಗಂಡನ ಮೇಲೆ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುದಿಯುತ್ತಿರುವ ನೀರು ಮೈಮೇಲೆ ಬಿದ್ದ ಕಾರಣ ವೆಂಕಟರಮಣನ ಬೆನ್ನು ಮತ್ತು ಕುತ್ತಿಗೆ ಭಾಗ ಸುಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಈ ಘಟನೆ ಕುರಿತು ಹೆಂಡ್ತಿ ಹೇಮಲತಾ ಮೇಲೆ ಗಂಡ ವೆಂಕಟರಮಣ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಅಜಿತ್ಸಿಂಗ್ ನಗರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.