ಕರ್ನಾಟಕ

karnataka

ETV Bharat / jagte-raho

ಗರ್ಭಿಣಿ ಅಕ್ಕನನ್ನು ಗುಂಡಿಟ್ಟು ಸಾಯಿಸಿದ ದಾಯಾದಿಗಳು! ಒಂದೇ ಸಾರಿ ಇಬ್ಬರನ್ನೂ ಕಳೆದುಕೊಂಡ ಗಂಡ! - ಗಂಡ

ತುಂಬು ಗರ್ಭಿಣಿ ಸಹೋದರಿಯನ್ನು ಆಕೆಯೇ ಸಹೋದರರೇ ಗುಂಡಿಟ್ಟು ಕೊಲೆ ಮಾಡಿದ್ದಾರೆ. ಒಂದೇ ಬಾರಿ ಮಗು ಮತ್ತು ಹೆಂಡ್ತಿಯನ್ನು ಕಳೆದುಕೊಂಡ ಪತಿಯ ರೋಧನೆ ಮುಗಿಲು ಮುಟ್ಟಿತ್ತು.

ಗರ್ಭಿಣಿ ಅಕ್ಕನನ್ನು ಗುಂಡಿಟ್ಟು ಹೊಡೆದ ದಾಯಾದಿಗಳು

By

Published : Jun 23, 2019, 1:10 PM IST

Updated : Jun 23, 2019, 1:55 PM IST

ಇಂದೋರ್‌(ಮಧ್ಯಪ್ರದೇಶ): 9 ತಿಂಗಳ ಗರ್ಭಿಣಿಯನ್ನು ಆಕೆಯ ಸಹೋದರರೇ ಗುಂಡಿಟ್ಟು ಕೊಲೆಗೈದ ಪೈಶಾಚಿಕ ಕೃತ್ಯ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಪೋಷಕರನ್ನು ಎದುರು ಹಾಕಿಕೊಂಡ ಯುವತಿ ಪ್ರೀತಿಸಿ ಮದುವೆಯಾಗಿದ್ದಳು. ಈ ಮದುವೆಯನ್ನು ವಿರೋಧಿಸಿದ ಪೋಷಕರು ಮಗಳ ಮನವೊಲಿಸುವಲ್ಲಿ ವಿಫಲರಾಗಿ ಕೊನೆಗೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದ್ರೆ, ಅವರ ಪ್ರಯತ್ನ ಅಲ್ಲೂ ಕೈಗೂಡಲಿಲ್ಲ ಎನ್ನಲಾಗಿದೆ. ಹೀಗೆ ತನ್ನಿಷ್ಟದ ವ್ಯಕ್ತಿಯ ಜೊತೆ ಸುಖ ಸಂಸಾರ ನಡೆಸುತ್ತಿದ್ದ ಯುವತಿ 9 ತಿಂಗಳ ತುಂಬು ಗರ್ಭಿಣಿಯಾಗಿದ್ದಳು. ಅತ್ತೆ, ಗಂಡನ ಜೊತೆ ಅನ್ಯೂನ್ಯತೆಯಿಂದ ಕಾಲ ಕಳೆಯುತ್ತಿದ್ದು, ಕರುಳ ಬಳ್ಳಿಯ ಆಗಮನದ ಖುಷಿ ಅವಳಲ್ಲಿತ್ತು. ಆದ್ರೆ...

ಮಗಳ ಮೇಲಿನ ಕೋಪ ಆಕೆಯ ಕುಟುಂಬಸ್ಥರಿಗಾಗಲೀ, ಸಹೋದರರಿಗಾಗಲೀ ಕಡಿಮೆಯಾಗಿರಲಿಲ್ಲ. ಇತ್ತೀಚೆಗೆ ದಿಢೀರನೇ ಯುವತಿಯ ಮನೆಗೆ ನುಗ್ಗಿದ ಇಬ್ಬರು ಸಹೋದರರು ಅತ್ತೆಯ ಮುಂದೆನೇ ಒಡಹುಟ್ಟಿದ ಸಹೋದರಿಯ ತಲೆಗೆ ಪಿಸ್ತೂಲ್‌ನಿಂದ ಗುಂಡಿನ ಮಳೆಗರೆದು ಅಮನುಷವಾಗಿ ಹತ್ಯೆ ಮಾಡಿದ್ದಾರೆ.

ಪತಿ ಒಂದೇ ಬಾರಿಗೆ ತಾಯಿ-ಮಗುವನ್ನು ಕಳೆದುಕೊಂಡು ಬಿಕ್ಕಿಬಿಕ್ಕಿ ಅಳುತ್ತಿರುವ ದೃಶ್ಯ ಅಲ್ಲಿ ನೆರೆದಿದ್ದವರ ಕರುಳು ಹಿಂಡುತ್ತಿತ್ತು.

ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಅಂತರ್ಜಾತಿ ವಿವಾಹವೇ ಕಾರಣ ಎನ್ನಲಾಗ್ತಿದೆ.

Last Updated : Jun 23, 2019, 1:55 PM IST

ABOUT THE AUTHOR

...view details