ಬೀದರ್: ಆರು ತಿಂಗಳಿಂದ ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವತಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಭಾಲ್ಕಿ ತಾಲೂಕಿನ ಸಿದ್ದಾಪುರದ ವಾಡಿ ಗ್ರಾಮದ ಸ್ನೇಹಾ ಸಂಜೀವ ಕುಮಾರ್ (18) ಮೃತ ಯುವತಿ.

ಪಿಯುಸಿ ಓದುತ್ತಿದ್ದ ಸ್ನೇಹಾ, ಕಳೆದ ಕೆಲ ತಿಂಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳಂತೆ. ಇದಕ್ಕಾಗಿ ಖಾಸಗಿ ಆಸ್ಪತ್ರೆಯಲ್ಲಿ ಸಾಕಷ್ಟು ಬಾರಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸಾವಿನ ಹಾದಿ ತುಳಿದಿದ್ದಾಳೆ ಎಂದು ಪೋಷಕರು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಭಾಲ್ಕಿ ಗ್ರಾಮೀಣ ಸಿಪಿಐ ವಿಜಯಕುಮಾರ್ ಪರಿಶೀಲನೆ ನಡೆಸಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.