ಇಲ್ಲಿನ ಪಂಜಾಗುಟ್ಟ ನಗರದ ಪ್ರಮುಖ ರಸ್ತೆಯಲ್ಲೇ ಸ್ನೇಹಿತನನ್ನು ಬರ್ಬರವಾಗಿ ಕೊಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಅನ್ವರ್ (32) ಮತ್ತು ರಿಯಾಸತ್ ಅಲಿ (35) ಇಬ್ಬರು ಸ್ನೇಹಿತರು. ಆಟೋ ಡ್ರೈವರ್ ಆಗಿ ಇಬ್ಬರು ಕೆಲಸ ಮಾಡುತ್ತಿದ್ದರು. ಇವರು ಮಹಿಳೆಯೊಬ್ಬಳ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರು ಎನ್ನಲಾಗ್ತಿದೆ.
ಆಕೆಗಾಗಿ ಸ್ನೇಹಿತರ ನಡುವೆ ಬಿರುಕು... ಎಲ್ಲರ ಕಣ್ಣೆದುರೇ ಆಟೋ ಡ್ರೈವರ್ ಬರ್ಬರ ಹತ್ಯೆ! - ಬರ್ಬರ ಹತ್ಯೆ
ಮಹಿಳೆ ಜೊತೆ ಸಂಬಂಧ ಹೊಂದಿದ ಸ್ನೇಹಿತನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್ ನಗರವನ್ನೇ ಬೆಚ್ಚಿ ಬೀಳಿಸಿದೆ.
ವಿವಾಹೇತರ ಸಂಬಂಧದ ಬಗ್ಗೆ ಇಬ್ಬರ ಮಧ್ಯೆ ಘರ್ಷಣೆ ನಡೆದಿದೆ. ಅನ್ವರ್ನನ್ನು ಕೊಲೆ ಮಾಡಲು ರಿಯಾಸತ್ ಅಲಿ ಸ್ಕೆಚ್ ಹಾಕಿದ್ದ. ಪಂಜಾಗುಟ್ಟಾ ಆಟೋ ಸ್ಟ್ಯಾಂಡ್ ಬಳಿ ಮತ್ತೆ ಇಬ್ಬರ ಮಧ್ಯೆ ಜಗಳವಾಗಿದೆ. ರಿಯಾಸತ್ ಅಲಿ ತಾನು ತಂದಿದ್ದ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವ ಆಗುತ್ತಿದ್ದರೂ ಹಲ್ಲೆಗೊಳಗಾದ ಅನ್ವರ್ ನೇರವಾಗಿ ಪಕ್ಕದ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಪೊಲೀಸರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಿಸದೇ ಅನ್ವರ್ ಮೃತಪಟ್ಟಿದ್ದಾನೆ.
ಇನ್ನು ರಿಯಾಸತ್ ಅಲಿ ಕೊಲೆ ಮಾಡಿ ನೇರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.