ಪುಣೆ:ಮಹಾರಾಷ್ಟ್ರದ ಪುಣೆಯ ಯೆರವಾಡಾ ಕೇಂದ್ರ ಕಾರಾಗೃಹದಲ್ಲಿ ಸ್ಥಾಪಿಸಲಾಗಿದ್ದ ತಾತ್ಕಾಲಿಕ ಜೈಲಿನ ಕಿಟಕಿಗಳನ್ನು ಮುರಿದು ಐವರು ಕೈದಿಗಳು ಬುಧವಾರ ಮಧ್ಯರಾತ್ರಿ ಪರಾರಿಯಾಗಿದ್ದಾರೆ.
ಜೈಲಿನ ಕಿಟಕಿಗಳನ್ನು ಮುರಿದು ಕೈದಿಗಳು ಎಸ್ಕೇಪ್..! - ಜೈಲಿನ ಕಿಟಕಿಗಳನ್ನು ಮುರಿದು ಕೈದಿಗಳು ಎಸ್ಕೇಪ್
ಜೈಲಿನ ಕಿಟಕಿಗಳನ್ನು ಮುರಿದು ಐವರು ಕೈದಿಗಳು ಪರಾರಿಯಾಗಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಯೆರಾವಾಡಾ ಕೇಂದ್ರ ಕಾರಾಗೃಹ
ಕೊರೊನಾ ಭೀತಿಯಿಂದಾಗಿ ಕೈದಿಗಳ ಪ್ರಮಾಣ ಕಡಿಮೆ ಮಾಡುವ ಸಲುವಾಗಿ ರಾಜ್ಯ ಕಾರಾಗೃಹ ಇಲಾಖೆಯು ತಾತ್ಕಾಲಿಕ ಜೈಲುಗಳನ್ನು ಸ್ಥಾಪಿಸಿ, ಅಲ್ಲಿ ಹೊಸ ಕೈದಿಗಳನ್ನು ಇರಿಸಿತ್ತು.
ಅಜಿಂಕ್ಯ ಕಾಂಬಳೆ, ಗಣೇಶ್ ಚವಾಣ್, ಅಕ್ಷಯ್ ಚವಾಣ್, ದೇವಗನ್ ಚವಾಣ್ ಮತ್ತು ಸನ್ನಿ ಪಿಂಟೊ ಜೈಲಿನಿಂದ ತಪ್ಪಿಸಿಕೊಂಡಿರುವ ಕೈದಿಗಳು. ಇವರಲ್ಲಿ ಮೂವರು ದೌಂಡ್ ತಾಲೂಕಿನವರಾಗಿದ್ದರು, ಇನ್ನಿಬ್ಬರು ಪುಣೆ ಮತ್ತು ಹವೇಲಿಯವರಾಗಿದ್ದಾರೆ.