ಮೆಡ್ಚಲ್(ತೆಲಂಗಾಣ):ಮಗಳನ್ನು ಚೆನ್ನಾಗಿ ಬೆಳೆಸಿ, ಓದಿಸಿ ಮದುವೆ ಮಾಡಬೇಕಾಗಿದ್ದ ತಂದೆ ಮಗಳ ಜೀವನಕ್ಕೆ ವಿಲನ್ ಆಗಿದ್ದಾನೆ. ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಮೆಡ್ಚಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆರೋಪಿಗೆ ಎರಡು ಮದುವೆಯಾಗಿದ್ದವು. ಮೊದಲನೇ ಹೆಂಡತಿ ಮೃತಪಟ್ಟಿದ್ದಳು. ತಾಯಿ ಇಲ್ಲದ ತಬ್ಬಲಿಯನ್ನು ಚೆನ್ನಾಗಿ ನೋಡಕೊಳ್ಳಬೇಕಾಗಿದ್ದ ತಂದೆ ಮಗಳ ಮೇಲೆಯೇ ಕಣ್ಣು ಹಾಕಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಉಪಯೋಗಿಸಿಕೊಂಡು ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಅಷ್ಟೇ ಅಲ್ಲದೇ, ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಾಲಕಿಯ ಮುಖವನ್ನು ವಿರೂಪಗೊಳಿಸಿ ಕಣ್ಣುಗಳನ್ನು ಕಿತ್ತು ಹಾಕಿ ಗೋಣಿಚೀಲದಲ್ಲಿ ತುಂಬಿದ್ದಾನೆ. ಬಳಿಕ ಜನನಿಬಿಡ ಪ್ರದೇಶದಲ್ಲಿ ಆ ಗೋಣಿಚೀಲವನ್ನು ಎಸೆದು ಏನೂ ಅರಿಯದಂತೆ ನಾಟಕವಾಡಿದ್ದ.
ಗೋಣಿಚೀಲದಲ್ಲಿ ಬಾಲಕಿಯ ಮೃತದೇಹವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಈ ಕೇಸ್ ಪತ್ತೆಹಚ್ಚೋದು ತಲೆನೋವಾಗಿತ್ತು. ಡಾಗ್ ಸ್ಕ್ವಾಡ್ನಿಂದಲೂ ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ಪೊಲೀಸರು ತಮ್ಮದೇ ಸ್ಟೈಲ್ನಲ್ಲಿ ಮೃತ ಬಾಲಕಿಯ ತಂದೆಯನ್ನು ವಿಚಾರಿಸಿದಾಗ ಸತ್ಯ ಹೊರಬಂದಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.