ಕರ್ನಾಟಕ

karnataka

ETV Bharat / jagte-raho

‘Fast & Furious 9’ ಚಿತ್ರೀಕರಣದ ವೇಳೆ ಅವಘಡ... ಕೋಮಾದಲ್ಲಿ ಸ್ಟಂಟ್​ಮ್ಯಾನ್​! - ಸ್ಟಂಟ್​ಮ್ಯಾನ್

ಕೆಲವು ದಿನಗಳ ಹಿಂದೆ Fast and Furious 9 ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ. ಸ್ಟಂಟ್​ಮ್ಯಾನ್​ವೊಬ್ಬ ಮೇಲಿಂದ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಆತ ಕೋಮಾಗೆ ತೆರಳಿದ್ದಾರೆ.

ಕೃಪೆ : Twitter

By

Published : Jul 25, 2019, 10:57 AM IST

ಹರ್ಟ್‌ಫೋರ್ಡ್ಶೈರ್:ರಾಕ್​ ಮತ್ತು ವಿನ್​ ಡೀಸೆಲ್​ ಅಭಿನಯದ Fast and Furious 9 ಟ್ರೇಲರ್​ ಎಲ್ಲರ ಮನಗೆದ್ದಿದ್ದು, ಅಭಿಮಾನಿಗಳು ಈ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಆದ್ರೆ ಚಿತ್ರೀಕರಣದ ವೇಳೆ ಸ್ಟಂಟ್​ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ ಸ್ಟಂಟ್​ ಮ್ಯಾನ್​.

ಕೃಪೆ : Twitter

ವಿನ್​ ಡೀಸೆಲ್​ ಅವರ ಡೂಪ್​ ​ಜೋ ವಾಟ್ಸ್​ ಫೈಟಿಂಗ್​ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಈ ಶೂಟಿಂಗ್​ ದಕ್ಷಿಣ ಇಂಗ್ಲೆಂಡ್​ನ ಲೀವ್ಸ್‌ಡೆನ್‌ನಲ್ಲಿರುವ ವಾರ್ನರ್ ಬ್ರದರ್ಸ್ ಸ್ಟುಡಿಯೋಸ್​ನಲ್ಲಿ ನಡೆಯಿತ್ತಿತ್ತು. ಫೈಟಿಂಗ್​ ಶೂಟಿಂಗ್​ ವೇಳೆ ಜೋ ವಾಟ್ಸ್​ ಸ್ಟಂಟ್​ ಮಾಡಲು ಹೋಗಿ 30 ಅಡಿಗಳ ಎತ್ತರದಿಂದ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು.

ಇನ್ನು ಜೋ ವಾಟ್ಸ್ ಅವರ​ನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಅವರು ಕೋಮಾಗೆ ತೆರಳಿದ್ದಾರೆ ಎಂದು ವೈದ್ಯರು ದೃಢೀಕರಿಸಿದ್ದಾರೆ. ಜೋ ವಾಟ್ಸ್​ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಸ್ಟಂಟ್​ ಮ್ಯಾನ್​ ಜೋ ವಾಟ್ಸ್​ ಆದಷ್ಟು ಬೇಗ ಗುಣಮುಖರಾಗಲಿ ಎಂದು ಚಿತ್ರರಂಗ ಸೇರಿದಂತೆ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.

ABOUT THE AUTHOR

...view details