ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಸಂಬಂಧ ಬಂಧಿತರಾಗಿ ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ನಟಿ ಸಂಜನಾರನ್ನು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಖುದ್ದು ವಿಚಾರಣೆ ನಡೆಸುತ್ತಿದ್ದಾರೆ.
ಖುದ್ದು ಸಂದೀಪ್ ಪಾಟೀಲ್ರಿಂದ ನಟಿಯರ ವಿಚಾರಣೆ: ಸದ್ಯದಲ್ಲೇ ನ್ಯಾಯಾಧೀಶರ ಎದುರು ಹಾಜರು - ಸಂಜನಾ ಗಲ್ರಾನಿ
ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಅವರನ್ನು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಖುದ್ದು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರನ್ನೂ ಸದ್ಯದಲ್ಲೇ ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ.
ಸಂದೀಪ್ ಪಾಟೀಲ್ರಿಂದ ಖುದ್ದು ನಟಿಯರ ವಿಚಾರಣೆ
ಇಂದು ಬೆಳಗ್ಗೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸಿಸಿಬಿ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ನಟಿಯರಿಬ್ಬರೂ ತಮಗೇನು ಗೊತ್ತಿಲ್ಲ.. ಎಂದು ಹೇಳುತ್ತಿರುವುದರಿಂದ ಸಂದೀಪ್ ಪಾಟೀಲ್ ಪ್ರತ್ಯೇಕವಾಗಿ ನಟಿಯರ ವಿಚಾರಣೆ ನಡೆಸುತ್ತಿದ್ದಾರೆ.
ಇಂದು ರಾಗಿಣಿ ಕಸ್ಟಡಿ ಅಂತ್ಯವಾಗಲಿದ್ದು, ನಾಳೆ ಸಂಜನಾ ಕಸ್ಟಡಿ ಮುಗಿಯಲಿದೆ. ನಾಳೆ ಎರಡನೇ ಶನಿವಾರ ಆಗಿರುವುದರಿಂದ ಇಬ್ಬರನ್ನೂ ಇಂದು ಮಧ್ಯಾಹ್ನ 2 ಗಂಟೆಗೆ ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ.