ಕರ್ನಾಟಕ

karnataka

ETV Bharat / jagte-raho

ಅಮ್ಮ ನೀ ಇಲ್ಲದ ಬದುಕು ಬೇಡ ಎಂದ ಕಂದ... ತಾಯಿ ಜೊತೆ ಪ್ರಾಣವನ್ನೇ ಬಿಟ್ಟ ಮಗ! - ಪ್ರಾಣಬಿಟ್ಟ ಮಗ

ಅಮ್ಮ ಇಲ್ಲದ ಜೀವನ ನನಗೆ ಬೇಡವೆಂದ ಮಗನೊಬ್ಬ ತಾಯಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಲ್ಲರ ಮನಕಲುಕುವಂತೆ ಮಾಡಿದೆ.

ತಾಯಿ ಜೊತೆನೇ ಪ್ರಾಣಬಿಟ್ಟ ಮಗ

By

Published : May 11, 2019, 3:20 PM IST

ಶ್ರೀಶೈಲ( ಆಂಧ್ರಪ್ರದೇಶ):ಮಕ್ಕಳು ಎಂದ ಮೇಲೆ ತಾಯಿ ಜೊತೆ ಹೆಚ್ಚು ಪ್ರೀತಿ ಹಂಚಿಕೊಂಡಿರುವುದು ಸರ್ವೇ ಸಾಮಾನ್ಯ. ಆದ್ರೆ ಇಲ್ಲೊಬ್ಬ ಮಗ ತನ್ನ ತಾಯಿಯೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಾಯಿ-ಮಗ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೂ ಇದೆ.

ತೆಲಂಗಾಣದ ಸೂರ್ಯಪೇಟ್​ ನಿವಾಸಿ ತಾಯಿ ಮಾಧವಿ (34) ಎರಡು ವರ್ಷದಿಂದ ಕ್ಯಾನ್ಸರ್​ ರೋಗದಿಂದ ಬಳುಲುತ್ತಿದ್ದರು. ಹೈದರಾಬಾದ್​ನಲ್ಲಿ ಚಿಕಿತ್ಸೆ ತೆಗೆದುಕೊಂಡಿದ್ದರು. ಆದ್ರೆ, ರೋಗ ವಾಸಿಯಾಗುವುದಿಲ್ಲ ಎಂದು ತಿಳಿದ ಮಾಧವಿ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ತಾಯಿ ಮಾಧವಿ ಆತ್ಮಹತ್ಯೆ ಮಾಡಿಕೊಳ್ಳವ ನಿರ್ಧಾರ ಮಗ ಕಾರ್ತಿಕ್​ಗೆ (18) ತಿಳಿದಿದ್ದು, ‘ನೀ ಇಲ್ಲದೇ ಪ್ರಪಂಚ ನನಗೂ ಬೇಡ. ನಾನೂ ಸಹ ನಿನ್ನೊಂದಿಗೆ ಬರುತ್ತೇನೆ’ ಎಂದು ಕಾರ್ತಿಕ ತಾಯಿ ಮಾಧವಿಗೆ ಕೇಳಿಕೊಂಡಿದ್ದಾನೆ ಎನ್ನಲಾಗಿದೆ.

ಇನ್ನು ತಾಯಿ-ಮಗ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ. ಆರು ದಿನದ ಹಿಂದೆ ಇಬ್ಬರೂ ಸೇರಿ ಆಂಧ್ರಪ್ರದೇಶದ ಶ್ರೀಶೈಲಕ್ಕೆ ತೆರಳಿದ್ದಾರೆ. ತಾಯಿ-ಮಗ ಇಬ್ಬರೂ ಸಾಕ್ಷಿ ಗಣಪತಿ ದೇವಾಲಯದ ಬಳಿ ಅರಣ್ಯಕ್ಕೆ ತೆರಳಿ ಕೀಟನಾಶಕ ಮತ್ತು ಕೆಲ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಾಯಿ ಮಾಧವಿ ಮತ್ತು ಮಗ ಕಾರ್ತಿಕ್​ ಕಾಣದ ಹಿನ್ನೆಲೆ ಸಂಬಂಧಿಕರು ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಮೊಬೈಲ್​ ಮೂಲಕ ಪೊಲೀಸರು ತಾಯಿ-ಮಗನನ್ನು ಪತ್ತೆ ಹಚ್ಚಿದ್ದರು. ಆದ್ರೆ ಅರಣ್ಯ ಪ್ರದೇಶವಾಗಿರುವುದರಿಂದ ಮೃತದೇಹಗಳನ್ನ ಪ್ರಾಣಿಗಳು ಛಿದ್ರಗೊಳಿಸಿದ್ದವು. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ತಾಯಿ-ಮಗನ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ABOUT THE AUTHOR

...view details