ಕರ್ನಾಟಕ

karnataka

ETV Bharat / jagte-raho

ಕಾಮಿಡಿ ಶೋ ಪಾತ್ರಧಾರಿ ಮೇಲೆ ದಾಳಿ... ಕಾರಣವೇನು ಗೊತ್ತಾ!? - ದಾಳಿ

ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿ ನಗಿಸುತ್ತಿರುವ ಕಾಮಿಡಿ ಶೋ ಪಾತ್ರಧಾರಿ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ ಘಟನೆ ಮುತ್ತಿನ ನಗರಿಯಲ್ಲಿ ನಡೆದಿದೆ.

ಕಾಮಿಡಿ ಶೋ ಪಾತ್ರಧಾರಿ ಮೇಲೆ ದಾಳಿ

By

Published : Jul 20, 2019, 4:39 PM IST

ಹೈದರಾಬಾದ್​: ಪ್ರೇಕ್ಷರನ್ನು ನಗಿಸುತ್ತಿರುವ ‘ಜಬರ್ದಸ್ತ್​’ ಟಿವಿ ಶೋ ನಟನ ಮೇಲೆ ದಾಳಿ ನಡೆದಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

30 ಗಜಗಳ ಜಾಗದಲ್ಲಿ ಗೋಡೆ ನಿರ್ಮಿಸುವ ವಿವಾದವೇ ಈ ಹಲ್ಲೆಗೆ ಕಾರಣವಾಗಿದೆ. ಮನೆ ಯಜಮಾನಿಬೇಕಂತಲೇ ಮನೆಗೆ ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಜಬರ್ದಸ್ತ್​ ಟಿವಿ ಶೋ ನಟ ವಿನೋದ್​ ಹೇಳಿದ್ದಾರೆ.

ಇನ್ನು ವಿನೋದ್​ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ನನ್ನ ಮೇಲೆ ಪ್ರೇಮಿಳಾ, ಅಭಿಷೇಕ್​, ಸಾಯಿಚಂದರ್​ ಹತ್ಯೆ ಯತ್ನ ನಡೆಸಿದ್ದಾರೆ ಎಂದು ವಿನೋದ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details