ಕರ್ನಾಟಕ

karnataka

ETV Bharat / jagte-raho

ಆಂಧ್ರ ಸಚಿವರ ಬೆಂಗಾವಲು ವಾಹನ ಪಲ್ಟಿ: ಓರ್ವ ಪೊಲೀಸ್​ ಸಾವು - ಹೈದರಾಬಾದ್ ಅಪಘಾತ ಸುದ್ದಿ

ಹೈದರಾಬಾದ್ ಬಳಿ ಆಂಧ್ರ ಪ್ರದೇಶದ ಇಂಧನ ಸಚಿವರ ಬೆಂಗಾವಲು ವಾಹನ ಪಲ್ಟಿಯಾಗಿ, ಓರ್ವ ಪೊಲೀಸ್ ಸಿಬ್ಬಂದಿ​ ಮೃತಪಟ್ಟಿದ್ದು, ಇಬ್ಬರು ಕಾನ್ಸ್​​ಟೇಬಲ್​ಗಳು ಗಾಯಗೊಂಡಿದ್ದಾರೆ. ಆದರೆ ಸಚಿವರು ಅಪಾಯದಿಂದ ಪಾರಾಗಿದ್ದಾರೆ.

minister's escort vehicle overturns
ಆಂಧ್ರ ಸಚಿವರ ಬೆಂಗಾವಲು ವಾಹನ ಪಲ್ಟಿ

By

Published : Jul 7, 2020, 6:00 PM IST

ಹೈದರಾಬಾದ್: ತೆಲಂಗಾಣದ ಹೈದರಾಬಾದ್ ಬಳಿ ಆಂಧ್ರ ಪ್ರದೇಶದ ಇಂಧನ ಸಚಿವ ಬಿ ಶ್ರೀನಿವಾಸ ರೆಡ್ಡಿ ಅವರ ಬೆಂಗಾವಲು ವಾಹನ ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ​ ಮೃತಪಟ್ಟಿದ್ದು, ಇಬ್ಬರು ಕಾನ್ಸ್​ಟೇಬಲ್​ಗಳು ಗಾಯಗೊಂಡಿದ್ದಾರೆ.

ಆಂಧ್ರಪ್ರದೇಶದ ಹೆಡ್ ಕಾನ್ಸ್​​ಟೇಬಲ್ ಪಾಪಾ ರಾವ್ ಮೃತ ಪೊಲೀಸ್​ ಸಿಬ್ಬಂದಿ. ಇಬ್ಬರು ಕಾನ್ಸ್​ಟೇಬಲ್‌ಗಳ ಜೊತೆ ವಾಹನ ಚಾಲಕ ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೈದರಾಬಾದ್​ನ ಹಯತ್‌ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೈದರಾಬಾದ್‌ನಿಂದ ವಿಜಯವಾಡಕ್ಕೆ ಮರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಸಚಿವರು ಅಪಾಯದಿಂದ ಪಾರಾಗಿದ್ದಾರೆ. ಬೆಂಗಾವಲು ವಾಹನ ಟೈರ್ ಸ್ಫೋಟದಿಂದಾಗಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಾವಲು ವಾಹನಕ್ಕೆ ಸಚಿವರಿದ್ದ ಕಾರು ಡಿಕ್ಕಿ ಹೊಡೆಯುವುದನ್ನು ಚಾಲಕ ತಕ್ಷಣ ಬ್ರೇಕ್ ಹಾಕಿ ತಡೆದಿದ್ದರಿಂದ ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಡ್ ಕಾನ್ಸ್​ಟೇಬಲ್ ಅವರ ನಿಧನಕ್ಕೆ ಸಚಿವರು ಸಂತಾಪ ಸೂಚಿಸಿದ್ದು, ಅವರ ಕುಟುಂಬಕ್ಕೆ ನೆರವಿನ ಭರವಸೆ ನೀಡಿದ್ದಾರೆ.

ABOUT THE AUTHOR

...view details