ಪಶ್ಚಿಮ ಗೋದಾವರಿ: ಹರಿತವಾದ ಆಯುದ್ಧದಿಂದ ಹೆಂಡ್ತಿ ಮತ್ತು ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗೋಪಾಲಪುರಂನ ದೊಂಡಪೂಡಿಯಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಕಾಂತಾರಾವು ತನ್ನ ಹೆಂಡ್ತಿ ಪುಷ್ಪಲತಾ ಜತೆ ನಿತ್ಯ ಕಿತ್ತಾಡಿಕೊಳ್ಳುತ್ತಿದ್ದರು. ಇವರ ಜಗಳ ವಿಕೋಪಕ್ಕೆ ತಿರುಗಿದ್ದು, ಕೋಪಗೊಂಡ ಕಾಂತಾರಾವು ಹೆಂಡ್ತಿ ಪುಷ್ಪಲತಾಳನ್ನು ಕೊಯ್ತಾದಿಂದ ಕೊಲೆ ಮಾಡಿದ್ದಾನೆ. ಬಳಿಕ ಮಗಳ ಸಹಾಯಕ್ಕೆ ಬಂದ ಅತ್ತೆ ಲಕ್ಷ್ಮಿಯನ್ನು ಅದೇ ಕೊಯ್ತಾದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.