ಕರ್ನಾಟಕ

karnataka

ETV Bharat / jagte-raho

ಊರು ಬಿಟ್ಟು ಬಂದ್ರೂ ಆಕೆಯನ್ನ ಬಿಡದ ಲವರ್​​​​​​... ಪತ್ನಿ ಮುಂದೇನೆ ನಡೆಯಿತು ಮರ್ಡರ್​​​! - ಮರ್ಡರ್

ಮದುವೆಯಾಗಿ ಎರಡು ಮಕ್ಕಳಿದ್ದರೂ ಆಕೆ ಮತ್ತೊಬ್ಬನ ಜೊತೆ ಲವ್ವಿ-ಡವ್ವಿ ಆಟ ನಡೆಸುತ್ತಿದ್ದಳು. ಇದನ್ನರಿತು ಹೆಂಡ್ತಿ ಜೊತೆ ಊರು ಬಿಟ್ಟ ಬಂದ್ರೂ ಅವನ ಕಾಟ ತಪ್ಪಿರಲಿಲ್ಲ. ಕೊನೆಗೂ ಈ ಸಮಸ್ಯೆ ಕೊಲೆಯಲ್ಲೇ ಅಂತ್ಯ ಕಂಡಿದೆ.

ಸಾಂದರ್ಭಿಕ ಚಿತ್ರ

By

Published : Jun 6, 2019, 1:37 PM IST

ರಾಯದುರ್ಗ: ಮದುವೆಯಾಗಿ ಇಬ್ಬರು ಮಕ್ಕಳಿದ್ದರು ಹೆಂಡ್ತಿಯ ವಿವಾಹೇತರ ಸಂಬಂಧಕ್ಕೆ ಗಂಡ ಬೇಸತ್ತಿದ್ದ. ಹೆಂಡ್ತಿ ಮತ್ತು ಆಕೆಯ ಲವರ್​ಗೆ ಎಷ್ಟೇ ಬುದ್ಧಿ ಮಾತು ಹೇಳಿದ್ರೂ ಅವರಿಬ್ಬರು ತಮ್ಮ ಆಟ ಮುಂದುವರಿಸಿದ್ದರು. ಕೊನೆಗೂ ಸ್ವಂತ ಊರು ಬಿಟ್ಟು ಬಂದ್ರೂ ಉಪಯೋಗವಾಗಿಲ್ಲ. ಕೊನೆಗೂ ಈ ಸಮಸ್ಯೆ ಕೊಲೆಯಲ್ಲೇ ಅಂತ್ಯವಾಗಿದೆ.

ಈ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗದಲ್ಲಿ ನಡೆದಿದೆ. ಮಹಾಬೂಬಾಬಾದ್​ನ ರೆಕುಲ ತಾಂಡದ ರಮೇಶ್ (32), ಪತ್ನಿ ಶಾಂತಿ (27) ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಶಾಂತಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಗ ರಾಮು (28) ಜೊತೆ ಸ್ನೇಹವಾಗಿ ಲವ್​ ಆಗಿದ್ದು, ಇಬ್ಬರ ಮಧ್ಯೆ ವಿವಾಹೇತರ ಸಂಬಂಧಕ್ಕೆ ನಡೆದಿದೆ.

ಇನ್ನು ಈ ಸುದ್ದಿ ಗಂಡ ರಮೇಶ್​ ಜೊತೆ ಗ್ರಾಮಕ್ಕೂ ತಿಳಿದಿದೆ. ಪಂಚಾಯಿತಿ ಮುಖ್ಯಸ್ಥರು ಮೂವರಿಗೂ ಬುದ್ಧಿ ಮಾತು ಹೇಳಿದ್ದಾರೆ. ಬಳಿಕ ರಮೇಶ್​ ಮತ್ತು ಶಾಂತಿ ಗ್ರಾಮವನ್ನು ಬಿಟ್ಟು ರಾಯದುರ್ಗಕ್ಕೆ ಬಂದು ನೆಲಸಿದ್ದಾರೆ. ನಗರದಲ್ಲಿ ರಮೇಶ್​ ವಾಚ್​ಮನ್​ ಕೆಲಸ ಗಿಟ್ಟಿಸಿಕೊಂಡು ಸುಖವಾಗಿ ಸಂಸಾರ ನಡೆಸುತ್ತಿದ್ದ. ಆದ್ರೆ ರಾಮು ಕೆಲ ದಿನಗಳ ಹಿಂದೆ ನಗರಕ್ಕೆ ಬಂದು ಇವರನ್ನು ಪತ್ತೆ ಹಚ್ಚಿದ್ದಾನೆ.

ಬುಧವಾರ ರಾತ್ರಿ 8 ಗಂಟೆಗೆ ಬಿರಿಯಾನಿ ತರಲು ರಮೇಶ್​ ಹೋಟೆಲ್​ಗೆ ಹೋಗಿದ್ದಾರೆ. ಇದೇ ಸಮಯಕ್ಕೆ ಕಾಯುತ್ತಿದ್ದ ರಾಮು ನೇರ ಮನೆಗೆ ನುಗ್ಗಿದ್ದಾನೆ. ಇನ್ನು ರಮೇಶ್​ ಹೋಟೆಲ್​ನಿಂದ ಮನಗೆ ಬಂದಾಗ ರಾಮು ಮತ್ತು ಶಾಂತಿ ಒಟ್ಟಿಗೆ ಇರುವುದನ್ನು ನೋಡಿದ್ದಾನೆ. ಇದರಿಂದ ತಾಳ್ಮೆ ಕಳೆದುಕೊಂಡು ರಮೇಶ್,​ ಪತ್ನಿ ಶಾಂತಿ ಮುಂದೆನೇ ರಾಮುವನ್ನು ಚಾಕುವಿನಿಂದ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ. ಬಳಿಕ ಪೊಲೀಸರಿಗೆ ರಮೇಶ್​ ಶರಣಾಗಿದ್ದಾನೆ.

ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details