ಕರ್ನಾಟಕ

karnataka

ETV Bharat / jagte-raho

ರಾಜ್ಯವನ್ನೇ ಬಿಟ್ಟು ಬಂದ್ರೂ  ನಿಲ್ಲದ ಕಲಹ... ಮುದ್ದಾದ ಹೆಂಡ್ತಿ, ಮಗುವನ್ನು ಕೊಂದ ಕಿರಾತಕ! - ಕೊಂದ ಕಿರಾತಕ

ಅವರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ದುಡಿಯಲು ವಲಸೆ ಬಂದಿದ್ದರು. ವಲಸೆಗೆ ಬರುವ ಮುನ್ನವೇ ಗಂಡ-ಹೆಂಡ್ತಿ ಮಧ್ಯೆ ಜಗಳವೂ ನಡೆದಿತ್ತು. ಹಿರಿಯರ ಸಂಧಾನದಿಂದಾಗಿ ಒಂದಾಗಿದ್ದರು. ಆದ್ರೆ ಕಿರಾತಕ ಗಂಡನೇ ಹೆಂಡ್ತಿ ಮತ್ತು ಮಗವನ್ನು ಕೊಲೆ ಮಾಡಿ ಬಿಟ್ಟಿದ್ದಾನೆ

ರಾಜ್ಯದಿಂದ ರಾಜ್ಯಕ್ಕೆ

By

Published : May 27, 2019, 4:24 PM IST

ಹೈದರಾಬಾದ್​: ಕೌಟುಂಬಿಕ ಕಲಹಕ್ಕೆ ಗಂಡನೊಬ್ಬ ತನ್ನ ಹೆಂಡ್ತಿ ಮತ್ತು ಮಗುವನ್ನು ಕೊಲೆ ಮಾಡಿರುವ ಘಟನೆ ಹೈದರಾಬಾದ್​ನಲ್ಲಿ ಸಂಚಲನ ಮೂಡಿಸಿದೆ.

ಹೌದು, ಉತ್ತರಪ್ರದೇಶದ ದೇವಾರಿಯಾ ಗ್ರಾಮದ ರಾಜೇಶ್​, ಉರ್ಮಿಳಾ ಮತ್ತು ಮಗ ಕಿಶನ್​ (4) ಈ ತಿಂಗಳು 12 ರಂದು ಹೈದರಾಬಾದ್​ಗೆ ವಲಸೆಗೆ ಬಂದಿದ್ದರು. 25 ದಿನಗಳ ಹಿಂದೆ ದಂಪತಿ ಮಧ್ಯೆ ಜಗಳವಾಗಿತ್ತು. ಹಿರಿಯರು ಮಧ್ಯೆ ಪ್ರವೇಶಿಸಿ ದಂಪತಿಗೆ ಬುದ್ಧಿಮಾತುಗಳನ್ನು ಹೇಳಿದ್ದರು. ಈ ದಂಪತಿ ದೀಪಕ್​ ಕುಟುಂಬದ ಜತೆ ಹೈದರಾಬಾದ್​ನ ಮನೆಯೊಂದರಲ್ಲಿ ಒಟ್ಟಿಗೆ ವಾಸವಾಗಿದ್ದರು.

ಇನ್ನು ಹೈದರಾಬಾದ್​ಗೆ ಬಂದ ಕೆಲವೇ ದಿನಗಳಲ್ಲಿ ಮತ್ತೆ ಇವರ ಮಧ್ಯೆ ಕಲಹಗಳು ಶುರುವಾಗಿದ್ದವು. ಭಾನುವಾರ ಬೆಳಗ್ಗೆ 9 ಗಂಟೆಗೆ ದೀಪಕ್​ ದಂಪತಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಅವರು ಬಂದಾಗ ಮನೆಗೆ ಬೀಗ ಹಾಕಿತ್ತು. ಈ ಹಿನ್ನೆಲೆಯಲ್ಲಿ ದೀಪಕ್, ರಾಜೇಶ್​ಗೆ​ ಫೋನ್​ ಮಾಡಿದ್ದಾನೆ. ಆದ್ರೆ ರಾಜೇಶ್​ ಫೋನ್​ ರಿಸೀವ್​ ಮಾಡಲಿಲ್ಲ.

ಎರಡು ಗಂಟೆಗಳ ಬಳಿಕ ದೀಪಕ್​ ಮನೆ ಬೀಗ ಮುರಿದು ಒಳಗೆ ಹೋಗಿದ್ದಾನೆ. ಈ ವೇಳೆ ಉರ್ಮಿಳಾ ಶವ ನೋಡಿ ದೀಪಕ್​ ಗಾಬರಿಗೊಂಡಿದ್ದಾನೆ. ಬಳಿಕ ಮಗವನ್ನು ಸಹ ಹುಡುಕಾಟ ನಡೆಸಿದ್ದಾರೆ. ಕಿಶನ್​ ಬಾತ್​ರೂಂನಲ್ಲಿ ಶವವಾಗಿ ಕಂಡಿದ್ದಾನೆ. ದೀಪಕ್​ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ರಾಜೇಶ್​ ತನ್ನ ಹೆಂಡ್ತಿ ಮತ್ತು ಮಗವನ್ನು ಕೊಲೆ ಮಾಡಿ ಪರಾರಿಯಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details