ಕರ್ನಾಟಕ

karnataka

ಬೈಕ್​- ಬುಲೆರೋ ನಡುವೆ ಡಿಕ್ಕಿ: ಸ್ಥದಲ್ಲೇ ಇಬ್ಬರ ಸಾವು, ಓರ್ವನಿಗೆ ಗಾಯ

By

Published : Sep 22, 2020, 4:22 AM IST

ಕಲಬುರಗಿ ಹೊರವಲಯದ ಭೋಸಗಾ ಕ್ರಾಸ್ ಬಳಿ ಬೈಕ್ ಮತ್ತು ಬುಲೆರೋ ಪಿಕಪ್ ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ಆಳಂದ ತಾಲೂಕಿನ ಕುಡಕಿ ಗ್ರಾಮದ ಶರಣು (28) ಮತ್ತು ಮಾಳಪ್ಪ (30) ಮೃತ ಬೈಕ್ ಸವಾರರು ಎಂದು ಗುರುತಿಸಲಾಗಿದೆ.

Accident
ಅಪಘಾತ

ಕಲಬುರಗಿ: ಬೈಕ್ ಮತ್ತು ಬುಲೆರೋ ಪಿಕಪ್ ಮಧ್ಯೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.

ನಗರದ ಹೊರವಲಯದ ಭೋಸಗಾ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ಆಳಂದ ತಾಲೂಕಿನ ಕುಡಕಿ ಗ್ರಾಮದ ಶರಣು (28) ಮತ್ತು ಮಾಳಪ್ಪ (30) ಮೃತ ಬೈಕ್ ಸವಾರರು ಎಂದು ಗುರುತಿಸಲಾಗಿದೆ.

ಬೈಕ್ ಮೇಲೆ ಮೂವರು ಕುಳಿತು ಕುಡಕಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಎದುರಿಗೆ ಬಂದ ಬುಲೆರೋ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಓರ್ವನಿಗೆ ಗಂಭೀರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಪಘಾತದ ನಂತರ ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details