ಹೈದರಾಬಾದ್ (ತೆಲಂಗಾಣ):ಪೊಲೀಸ್ ಠಾಣೆಯೆಂದರೆ ಅದಕ್ಕೊಬ್ಬ ಅಧಿಕಾರಿ, ಇಂತಿಷ್ಟು ಸಿಬ್ಬಂದಿ ಒಂದು ಕಟ್ಟಡ ಮತ್ತು ಕೈದಿಗಳನ್ನು ಹಾಕಲು ಸೆಲ್ಗಳಿರುತ್ತವೆ. ಆದರೆ, ಇಲ್ಲಿರುವ ಪೊಲೀಸ್ ಠಾಣೆ ಇವ್ಯಾವನ್ನೂ ಒಳಗೊಳ್ಳದೇ ಕೆಲಸ ಮಾಡುತ್ತಿದೆ.
ಹೌದು, ಅಮೆರಿಕದ ಫ್ಲೋರಿಡಾ ಸಮೀಪದಲ್ಲಿರುವ ಕ್ಯಾರಬೆಲ್ ನಗರದಲ್ಲಿರುವ ಈ ಪೊಲೀಸ್ ಠಾಣೆಯೇ ವಿಶ್ವದಲ್ಲಿಯೇ ಅತ್ಯಂತ ಚಿಕ್ಕ ಠಾಣೆಯಾಗಿ ಗುರುತಿಸಿಕೊಂಡಿದೆ. ಇದರಲ್ಲಿರೋದು ಕೇವಲ ಒಂದು ಫೋನ್ ಮಾತ್ರ. ವಾಸ್ತವವಾಗಿ ಇದು ಟೆಲಿಫೋನ್ ಬೂತ್‌ನ ಮಾದರಿಯಲ್ಲಿ ನಿರ್ಮಿಸಲಾಗಿದೆ.
ವಿಶೇಷತೆ ಏನು?:1963 ರಲ್ಲಿ ಕ್ಯಾರಬೆಲ್ ನಗರದ ರಾಷ್ಟ್ರೀಯ ಹೆದ್ದಾರಿ 98 ರಲ್ಲಿ ಪೊಲೀಸರಿಗೆ ಸೇರಿದ ಫೋನ್ ಅನ್ನು ಕಟ್ಟಡದ ಗೋಡೆಯಲ್ಲಿ ಇಡಲಾಗಿತ್ತು. ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಆ ಫೋನ್ ಬಳಸುತ್ತಿದ್ದರು. ರಸ್ತೆ ಪಕ್ಕದಲ್ಲೇ ಈ ಫೋನ್ ಇದ್ದುದರಿಂದ ಪೊಲೀಸ್ ಅಧಿಕಾರಿ ಇಲ್ಲದ ವೇಳೆ ಪುಂಡ ಪೋಕರಿಗಳು ಅದನ್ನು ಬಳಕೆ ಮಾಡುತ್ತಿದ್ದರು.
ಈ ಸಮಸ್ಯೆಯನ್ನು ಸರಿಪಡಿಸಲು ಆ ಪ್ರದೇಶದ ಬೀಟ್ ಪೊಲೀಸ್ ಅಧಿಕಾರಿ ಚಿಕ್ಕದೊಂದು ಟೆಲಿಫೋನ್ ಬೂತ್ ರೂಪಿಸಿ ಅದರಲ್ಲಿ ಫೋನ್ ಇಟ್ಟಿದ್ದರು. ಅದೇ ಈಗ ಪೊಲೀಸ್ ಠಾಣೆಯಾಗಿ ಮಾರ್ಪಟ್ಟಿದೆ. ಇದು ವಿಶ್ವದ ಅತ್ಯಂತ ಚಿಕ್ಕ ಪೊಲೀಸ್ ಠಾಣೆ ಎಂದು ಹೆಸರುವಾಸಿಯಾಗಿದೆ.
1963 ರಲ್ಲಿ ಸ್ಥಾಪಿಸಲಾಗಿದ್ದ ಚಿಕ್ಕ ಪೊಲೀಸ್ ಠಾಣೆಯ ಟೆಲಿಫೋನ್ ಬೂತ್ ಮಾದರಿಯ ಕೊಠಡಿಯನ್ನು ಪ್ರದರ್ಶನಕ್ಕಿಡಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಪ್ರವಾಸಿಗರಿಗೆ ಇದನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತದೆ. ನಗರಕ್ಕೆ ಬರುವ ಪ್ರವಾಸಿಗರು ಈ ಚಿಕ್ಕ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಾರೆ.
ಚಿಕ್ಕ ಪೊಲೀಸ್ ಠಾಣೆಯನ್ನು ಕೆಲವು ಟಿವಿ ಕಾರ್ಯಕ್ರಮಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ಬಳಸಿಕೊಳ್ಳಲಾಗಿದೆ. ಈ ಛೋಟಾ ಪೊಲೀಸ್ ಠಾಣೆಯಲ್ಲಿ ಈಗಲೂ ಸ್ಥಿರ ದೂರವಾಣಿ ಇದೆ. ಇದು ಕೆಲ ದಿನಗಳ ಹಿಂದಿನವರೆಗೂ ಕೆಲಸ ಮಾಡುತ್ತಿತ್ತು. ಇದೀಗ ಸಂಪರ್ಕ ಕಳೆದುಕೊಂಡಿದೆ.
ಓದಿ:ದಿನಕ್ಕೆ ಮನುಷ್ಯ ಉಸಿರಾಡುವ ಗಾಳಿಯ ಪ್ರಮಾಣ ಎಷ್ಟು ಗೊತ್ತೇ?