ಕೀವ್:ಉಕ್ರೇನ್ ಮೇಲೆ ಯುದ್ಧ ಘೋಷಿಸಿ ಒಂದು ತಿಂಗಳಿನಿಂದ ಸತತವಾಗಿ ಬಾಂಬ್ಗಳ ಸುರಿಮಳೆಗೈದು ಉಕ್ರೇನ್ ನಗರಗಳನ್ನು ಧ್ವಂಸ ಮಾಡಿ, ಸಾವಿರಾರು ಜನರ ಪ್ರಾಣಹಾನಿಗೆ ಕಾರಣವಾಗಿರುವ ರಷ್ಯಾ ಸೇನೆ ಮೇ 9 ರಂದು ಯುದ್ಧ ಕೊನೆಗೊಳಿಸಲು ಬಯಸಿದೆ ಎಂದು ಉಕ್ರೇನ್ ಸೇನೆ ತಿಳಿಸಿದೆ. ಕೀವ್ ಇಂಡಿಪೆಂಡೆಂಟ್‌ನ ವರದಿಯ ಪ್ರಕಾರ, ಮೇ 9 ರೊಳಗೆ ಯುದ್ಧ ಕೊನೆಗೊಳ್ಳಬೇಕು ಎಂದು ರಷ್ಯಾ ತನ್ನ ಸೇನೆಗೆ ತಾಕೀತು ಮಾಡಿದೆ ಎಂದು ತಿಳಿದುಬಂದಿದೆ.
ಯುದ್ಧ ಮುಕ್ತಾಯಗೊಳ್ಳುವ ಆ ದಿನದಂದು ರಷ್ಯಾದಲ್ಲಿ 'ನಾಜಿ ಜರ್ಮನಿ ವಿಜಯೋತ್ಸವ' ಆಚರಿಸಲಾಗುತ್ತಿದೆ. ಅಷ್ಟೊತ್ತಿಗಾಗಲೇ ಕದನ ಕೊನೆಗೊಳಿಸಬೇಕು ಎಂದು ರಷ್ಯಾ ಚಿಂತಿಸಿದೆ. ಈ ವಿಚಾರವನ್ನು ಉಕ್ರೇನ್ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್‌ನ ಗುಪ್ತಚರ ಮೂಲಗಳು ಹೇಳಿವೆ. ಇದೇ ವೇಳೆ ಉಕ್ರೇನ್, ರಷ್ಯಾ ವಿರುದ್ಧ ಗಂಭೀರ ಆರೋಪ ಸರಣಿಯನ್ನು ಮುಂದುವರೆಸಿದೆ.