ವಾಷಿಂಗ್ಟನ್ (ಅಮೆರಿಕ):ಅಮೆರಿಕವು ಗುರುತಿಸಲಾಗದ ಹಾರುವ ವಸ್ತುಗಳು (Unidentified Aerial Phenomena - UFO) ಕುರಿತು ದೀರ್ಘಕಾಲದ ಕಾರ್ಯಕ್ರಮವನ್ನು ಮರೆಮಾಚುತ್ತಿದೆ ಎಂದು ಮಾಜಿ ವಾಯುಪಡೆಯ ಗುಪ್ತಚರ ಅಧಿಕಾರಿಯೊಬ್ಬರು ಬುಧವಾರ ಅಮೆರಿಕ ಸಂಸತ್ತಿನ ಕಾಂಗ್ರೆಸ್‌ಗೆ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವು ಪುರಾವೆಗಳನ್ನು ಅವರು ಒದಗಿಸಿದ್ದಾರೆ. ಆದರೆ, ಇದನ್ನು ಪೆಂಟಗನ್ ಕಚೇರಿ ತಳ್ಳಿ ಹಾಕಿದೆ.
ಗುರುತಿಸಲಾಗದ ಹಾರುವ ವಸ್ತುಗಳನ್ನು ಗುರುತಿಸಲಾಗದ ವೈಮಾನಿಕ ವಿದ್ಯಮಾನಗಳು (Unidentified Aerial Phenomena - UFO) ಎಂದು ಕರೆಯಲಾಗುತ್ತದೆ. ಇವುಗಳನ್ನು ಅಮೆರಿಕ ಸರ್ಕಾರವು ಗುರುತಿಸಲಾದ ಅಸಂಗತ ವಿದ್ಯಮಾನ (Unidentified flying object - UAP)ಗಳೆಂದು ತನ್ನ ಅಧಿಕೃತ ಪದದೊಂದಿಗೆ ಬಳಸುತ್ತದೆ. ಇದೀಗ ಅಮೆರಿಕದ ವಾಯುಪಡೆಯ ಮಾಜಿ ಗುಪ್ತಚರ ಅಧಿಕಾರಿ ಡೇವಿಡ್ ಗ್ರಶ್, ಯುಎಫ್ಒಗಳ ಬಗ್ಗೆ ಕೆಲವು ವಿಷಯಗಳನ್ನು ಅಮೆರಿಕ ಮರೆ ಮಾಚುತ್ತಿದೆ ಎಂದು ಹೇಳಿದ್ದಾರೆ.
2019ರಲ್ಲಿ ಟಾಸ್ಕ್‌ಫೋರ್ಸ್ ಮಿಷನ್‌ಗಾಗಿ ಹೆಚ್ಚು ವರ್ಗೀಕರಿಸಿದ ಕಾರ್ಯಕ್ರಮಗಳನ್ನು ಗುರುತಿಸಲು ಯುಎಪಿಗಳ ಬಗ್ಗೆ ಸರ್ಕಾರದ ಕಾರ್ಯಪಡೆಯ ಮುಖ್ಯಸ್ಥರು ಕೇಳಿದ್ದಾರೆ. ಇದೇ ಸಮಯದಲ್ಲಿ ಈ ವಿಷಯವನ್ನು ಅಮೆರಿಕದ ಬೇಹುಗಾರಿಕಾ ಉಪಗ್ರಹಗಳನ್ನು ನಿರ್ವಹಿಸುವ ರಾಷ್ಟ್ರೀಯ ವಿಚಕ್ಷಣಾ ಕಚೇರಿ (National Reconnaissance Office)ಗೆ ವಿವರಿಸಲಾಗಿದೆ ಎಂದು ಡೇವಿಡ್ ಗ್ರಶ್ ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತದ ಅಕ್ಕಿ ರಫ್ತು ನಿಷೇಧದಿಂದ ಅಮೆರಿಕದಲ್ಲಿ ಎಫೆಕ್ಟ್: 'ಕುಟುಂಬಕ್ಕೊಂದೇ ಅಕ್ಕಿ ಚೀಲ'