ಕರ್ನಾಟಕ

karnataka

ETV Bharat / international

ಅಮೆರಿಕಾದಲ್ಲಿ ಶೇ. 70ರಷ್ಟು ಮಂದಿಗೆ ಕೋವಿಡ್: ಅಧ್ಯಕ್ಷ ಜೋ ಬೈಡನ್​ಗೂ ತಗುಲಿದ ಸೋಂಕು - ಅಮೆರಿಕಾ ಅಧ್ಯಕ್ಷ ಜೋ ಬೈಡನ್

ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟಿಸಿದ ಕೋವಿಡ್-19 ಸೋಂಕಿನಿಂದ ಅಮೆರಿಕಾ ನಲುಗಿ ಹೋಗಿದೆ. ದೇಶದಲ್ಲಿ ಶೇ.70ರಷ್ಟು ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಜನ ಸಾಂಕ್ರಾಮಿಕಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.

US President Joe Biden
ಅಮೆರಿಕಾ ಅಧ್ಯಕ್ಷ ಜೋ ಬೈಡನ್

By

Published : Jul 22, 2022, 10:10 AM IST

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಜೋ ಬೈಡನ್​​ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅವರ ಆರೋಗ್ಯ ಸ್ಥಿತಿ ಬಗ್ಗೆ ಶ್ವೇತಭವನ ವಿಡಿಯೋ ಬಿಡುಗಡೆ ಮಾಡಿದೆ. 79 ವರ್ಷದ ಬೈಡನ್ ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಸೌಮ್ಯ ಲಕ್ಷಣಗಳಷ್ಟೇ ಪತ್ತೆಯಾಗಿವೆ. ಅವರ ಉಸಿರಾಟದ ಪ್ರಮಾಣವೂ ಉತ್ತಮವಾಗಿದೆ. ಸದ್ಯ ಆರೋಗ್ಯ ಸ್ಥಿರವಾಗಿದ್ದು, ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಮಾಹಿತಿ ನೀಡಿದ್ದಾರೆ.

ಸಿಡಿಸಿ ಮಾರ್ಗಸೂಚಿಗಳಿಗೆ ಅನುಗುಣವಾಗಿ, ಬೈಡನ್ ಈಗಾಗಲೇ ಎರಡೂ ಡೋಸ್ ಹಾಗೂ ಎರಡು ಬೂಸ್ಟರ್ ಡೋಸ್ ತೆಗೆದುಕೊಂಡಿದ್ದಾರೆ. ಅವರ ಆರೋಗ್ಯದ ಕುರಿತು ವೈದ್ಯರು ತೀವ್ರ ನಿಗಾವಹಿಸಿದ್ದಾರೆ. ಸೋಂಕು ಇತರರಿಗೆ ಹರಡದಂತೆ ಎಚ್ಚರವಹಿಸಲು ಶ್ವೇತಭವನದಲ್ಲಿ ಪ್ರತ್ಯೇಕವಾಗಿರುತ್ತಾರೆ ಮತ್ತು ಆ ಸಮಯದಲ್ಲಿ ಅವರ ಎಲ್ಲಾ ಕರ್ತವ್ಯಗಳನ್ನು ಸಂಪೂರ್ಣವಾಗಿ ನಿರ್ವಹಿಸುವುದನ್ನು ಮುಂದುವರಿಸುತ್ತಾರೆ ಎಂದು ವೈಟ್ ಹೌಸ್ ಸಂಯೋಜಕ ಆಶಿಶ್ ಜಾ ತಿಳಿಸಿದ್ದಾರೆ.

ಕೋವಿಡ್‌ ಸೋಂಕಿಗೆ ತುತ್ತಾದ ವಿಶ್ವ ನಾಯಕರು:ಏಪ್ರಿಲ್‌ನಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ಅವರಿಗೆ ಕೋವಿಡ್​ ಸೋಂಕು ದೃಢಪಟ್ಟಿತ್ತು. 2020ರ ಆರಂಭದಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಕೋವಿಡ್‌ಗೆ ತುತ್ತಾದ ಇತರ ವಿಶ್ವ ನಾಯಕರ ಪಟ್ಟಿಗೆ ಬೈಡನ್ ಸೇರಿದ್ದಾರೆ. ಅವರಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಬ್ರೆಜಿಲ್‌ನ ಅಧ್ಯಕ್ಷ ಜೈರ್ ಬೋಲ್ಸನಾರೊ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಮೊನಾಕೊ ರಾಜಕುಮಾರ ಆಲ್ಬರ್ಟ್ II ಸೇರಿದ್ದಾರೆ. ಎಲ್ಲರೂ ಚೇತರಿಸಿಕೊಂಡಿದ್ದಾರೆ.

ಶೇ.70ರಷ್ಟು ಮಂದಿಗೆ ಕೋವಿಡ್: ಕಳೆದ ಎರಡೂವರೆ ವರ್ಷದಿಂದ ಅಮೆರಿಕ ಕೋವಿಡ್‌ಗೆ ತತ್ತರಿಸಿದೆ. ಇದೀಗ ಮತ್ತೆ ಏರಿಕೆಯತ್ತ ಸಾಗಿದೆ. ಸಿಡಿಸಿ ಅಂಕಿ-ಅಂಶಗಳ ಪ್ರಕಾರ, ಶೇ.70ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ವೈಟ್ ಹೌಸ್ ಸಂಯೋಜಕ ಆಶಿಶ್ ಜಾ ತಿಳಿಸಿದ್ದಾರೆ. ಇತ್ತ ದೇಶದಲ್ಲಿ ಓಮಿಕ್ರಾನ್ ರೂಪಾಂತರಿ ತಳಿಗಳು ಪತ್ತೆಯಾಗಿವೆ. ಏಪ್ರಿಲ್ ತಿಂಗಳಲ್ಲಿ ಪ್ರತಿದಿನ ಸರಾಸರಿ 8 ಸಾವಿರ ಕೇಸ್ ಪತ್ತೆಯಾಗುತ್ತಿತ್ತು. ಆದರೆ ಇದೀಗ ಪ್ರತಿ ದಿನದ ಕೊರೋನಾ ಪ್ರಕರಣಗಳ ಸಂಖ್ಯೆ ಲಕ್ಷ ದಾಟಿದೆ. ಇದು ಮತ್ತೆ ಆತಂಕದ ವಾತಾವರಣ ಉಂಟುಮಾಡಿದೆ.

ಇದನ್ನೂ ಓದಿ:ಕೋವಿಡ್​ ಸೋಂಕಿಗೊಳಗಾದ ರಾಹುಲ್, ಗಾಯಗೊಂಡಿರುವ ಜಡೇಜಾ ವೆಸ್ಟ್​ ಇಂಡೀಸ್​ ಸರಣಿಯಿಂದ ಔಟ್!?​​

ABOUT THE AUTHOR

...view details