ಕರ್ನಾಟಕ

karnataka

ETV Bharat / international

ಭಾರತೀಯರ ನಿಂದಿಸಿದ ಮೆಕ್ಸಿಕನ್​ ಮಹಿಳೆ ವಿರುದ್ಧ ಕ್ರಮಕ್ಕೆ ಆಗ್ರಹ

ಭಾರತೀಯ ಮೂಲದ ಮಹಿಳೆಯರನ್ನು ನಿಂದಿಸಿದ್ದ ಮೆಕ್ಸಿಕೋ ಮೂಲದ ಮಹಿಳೆಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅಮೆರಿಕ ಭಾರತೀಯರ ಒಕ್ಕೂಟ ಆಗ್ರಹಿಸಿದೆ.

urges-for-action-against-mexican-woman-abused-by-indians
ಭಾರತೀಯರ ನಿಂದಿಸಿದ ಮೆಕ್ಸಿಕನ್​ ಮಹಿಳೆ ವಿರುದ್ಧ ಕ್ರಮಕ್ಕೆ ಆಗ್ರಹ

By

Published : Aug 29, 2022, 1:37 PM IST

ವಾಷಿಂಗ್ಟನ್:ಕೆಲ ದಿನಗಳ ಹಿಂದೆ ಟೆಕ್ಸಾಸ್‌ನಲ್ಲಿ ಮಹಿಳೆಯೊಬ್ಬರು ನಾಲ್ವರು ಭಾರತೀಯ ಮೂಲದ ಮಹಿಳೆಯರನ್ನು ಅಮೆರಿಕ ಬಿಟ್ಟು ತೊಲಗುವಂತೆ ನಿಂದಿಸಿ, ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಅಮೆರಿಕನ್ ಒಕ್ಕೂಟದ ಸದಸ್ಯ ರಾಜಾ ಕೃಷ್ಣಮೂರ್ತಿ ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.

ವರ್ಣಭೇದ ನೀತಿ, ದ್ವೇಷ, ಮತ್ಸರ, ಮತಾಂಧ ದಾಳಿಗಳು ಭಯ ಮತ್ತು ಅಪಾಯದ ವಾತಾವರಣ ಸೃಷ್ಟಿಸುತ್ತವೆ. ಈ ಮೂಲಕ ವಿಶಾಲ ಸಮುದಾಯಗಳನ್ನು ಬಲಿಪಶು ಮಾಡುತ್ತವೆ ಎಂದು ಕೃಷ್ಣಮೂರ್ತಿ ಟೀಕಿಸಿದರು.

ಟೆಕ್ಸಾಸ್‌ನಲ್ಲಿ ಅಮೆರಿಕನ್​ ಮಹಿಳೆಯೊಬ್ಬರು ನಡೆದು ಹೋಗುತ್ತಿದ್ದ ನಾಲ್ವರು ಭಾರತೀಯ ಮಹಿಳೆಯರನ್ನು ನಿಲ್ಲಿಸಿ, ಎಲ್ಲಿ ನೋಡಿದರೂ ನೀವೇ ಕಾಣುತ್ತೀರಾ, ನೀವಿಲ್ಲಿಗೆ ಬಂದು ದೇಶವನ್ನು ಹಾಳು ಮಾಡುತ್ತಿದ್ದೀರಿ. ಇಲ್ಲಿ ಯಾಕೆ ಬಂದಿದ್ದೀರಿ ಎಂದೆಲ್ಲಾ ನಿಂದಿಸಿದ್ದರು. ಘಟನೆಯನ್ನು ತಮ್ಮ ಮೊಬೈಲ್​ನಲ್ಲಿ ಚಿತ್ರಿಸುತ್ತಿದ್ದ ಮಹಿಳೆ ಕಪಾಳಕ್ಕೂ ಹೊಡೆದಿದ್ದರು. ಬಳಿಕ ಆರೋಪಿಯನ್ನ ಜನಾಂಗೀಯ ನಿಂದನೆ ಮತ್ತು ದೈಹಿಕ ಹಲ್ಲೆ ಆರೋಪದ ಮೇಲೆ ಬಂಧಿಸಲಾಗಿದೆ.

ಈ ಘಟನೆಯು ಭಾರತೀಯ ಮತ್ತು ಅಮೆರಿಕನ್ ಸಮುದಾಯದಲ್ಲಿ ಆಘಾತವನ್ನುಂಟು ಮಾಡಿದೆ. ಭಾರತೀಯ ಮೂಲದ ನಾಲ್ವರು ಮಹಿಳೆಯರ ಮೇಲೆ ದ್ವೇಷ ಪ್ರೇರಿತ ಕಿರುಕುಳ ಮತ್ತು ಹಲ್ಲೆಯ ದೃಶ್ಯಾವಳಿಗಳಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ. ಹೀಗಾಗಿ ಮಹಿಳೆಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.

ಓದಿ:ಹಿಂದೂ ದೇಗುಲಗಳ ಮೇಲೆ ಕಮ್ಯೂನಿಸ್ಟ್​ ಸರ್ಕಾರಗಳ ಹಿಡಿತ: ನಿವೃತ್ತ ನ್ಯಾ. ಇಂದು ಮಲ್ಹೋತ್ರಾ

ABOUT THE AUTHOR

...view details