ಕರ್ನಾಟಕ

karnataka

ETV Bharat / international

Sudan conflict: ಆರು ತಿಂಗಳ ಅವಧಿಯಲ್ಲಿ ಯುದ್ಧದಿಂದ 9 ಸಾವಿರ ಜನರು ಸಾವು.. ವಿಶ್ವಸಂಸ್ಥೆ ಮಾಹಿತಿ - ಸುಡಾನ್‌ನ ಮಿಲಿಟರಿ

''ಸುಡಾನ್‌ನಲ್ಲಿ ಆರು ತಿಂಗಳ ಅವಧಿಯಲ್ಲಿ ಯುದ್ಧದಿಂದ 9 ಸಾವಿರ ಜನರ ಸಾವು ಮೃಪಟ್ಟಿದ್ದಾರೆ. ಈ ಸಂಘರ್ಷದಿಂದ ಸಮುದಾಯಗಳು ಛಿದ್ರವಾಗಲು ಕಾರಣವಾಗಿದೆ'' ಎಂದು ಯುಎನ್ ನೆರವು ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ತಿಳಿಸಿದ್ದಾರೆ.

UN aid chief
ವಿಶ್ವಸಂಸ್ಥೆ

By PTI

Published : Oct 16, 2023, 9:26 AM IST

ಕೈರೋ (ಈಜಿಪ್ಟ್): ''ಸುಡಾನ್‌ನ ಮಿಲಿಟರಿ ಮತ್ತು ಪ್ರಬಲ ಅರೆಸೇನಾ ಗುಂಪಿನ ನಡುವಿನ ಆರು ತಿಂಗಳ ಯುದ್ಧದಲ್ಲಿ 9 ಸಾವಿರ ಜನರು ಮೃತಪಟ್ಟಿದ್ದಾರೆ. ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಮಾನವೀಯ ದುಃಸ್ವಪ್ನಗಳಲ್ಲಿ ಇದು ಒಂದಾಗಿದೆ" ಎಂದು ವಿಶ್ವಸಂಸ್ಥೆಯ ನೆರವು ಮುಖ್ಯಸ್ಥ ಭಾನುವಾರ ಹೇಳಿದ್ದಾರೆ.

ಸೇನಾ ಮುಖ್ಯಸ್ಥ ಜನರಲ್ ಅಬ್ದೆಲ್ ಫತ್ತಾಹ್ ಬುರ್ಹಾನ್ ಮತ್ತು ಅರೆಸೇನಾ ಕ್ಷಿಪ್ರ ಪಡೆಗಳ ಕಮಾಂಡರ್ ಜನರಲ್ ಮೊಹಮದ್ ಹಮ್ದಾನ್ ದಗಾಲೊ ನಡುವಿನ ಉದ್ವಿಗ್ನತೆಗಳಿಂದ ಸುಡಾನ್ ಏಪ್ರಿಲ್ ಮಧ್ಯದಲ್ಲಿ ಯುದ್ಧ ಆರಂಭವಾಯಿತು. ಆರು ತಿಂಗಳಿನಿಂದ ನಾಗರಿಕರಿಗೆ ರಕ್ತಪಾತ ಮತ್ತು ಭಯೋತ್ಪಾದನೆಯಿಂದ ಯಾವುದೇ ವಿರಾಮ ಲಭಿಸಿಲ್ಲ ಎಂದು ಯುದ್ಧವು ಆರು ತಿಂಗಳನ್ನು ಪೊರೈಸಿದ್ದನ್ನು ಗುರುತಿಸಿದ ಯುಎನ್ ಅಂಡರ್ ಸೆಕ್ರೆಟರಿ-ಜನರಲ್ ಮಾರ್ಟಿನ್ ಗ್ರಿಫಿತ್ಸ್ ಅವರು ಹೇಳಿಕೆ ನೀಡಿದ್ದಾರೆ.

ಯುದ್ಧದಿಂದ ಸಮುದಾಯಗಳು ಛಿದ್ರ:"ಅತ್ಯಾಚಾರ ಮತ್ತು ಲೈಂಗಿಕ ಹಿಂಸೆಯ ಭಯಾನಕ ವರದಿಗಳು ಬರುತ್ತಲೇ ಇವೆ. ಹೋರಾಟವು ಆರಂಭದಲ್ಲಿ ಖಾರ್ಟೌಮ್‌ನಲ್ಲಿ ಕೇಂದ್ರೀಕೃತವಾಗಿತ್ತು. ಆದರೆ, ಪೂರ್ವ ಆಫ್ರಿಕನ್ ರಾಷ್ಟ್ರದಾದ್ಯಂತ ಈಗಾಗಲೇ ಸಂಘರ್ಷ ಭುಗಿಲೆದ್ದಿದೆ. ಪಶ್ಚಿಮ ಡಾರ್ಫರ್ ಪ್ರದೇಶವನ್ನು ಒಳಗೊಂಡಂತೆ ಇತರ ಪ್ರದೇಶಗಳಿಗೆ ಈ ಸಂಘರ್ಷವು ತ್ವರಿತವಾಗಿ ಹರಡಿದೆ. ಈ ಸಂಘರ್ಷಕ್ಕೆ ಸುಮಾರು 9,000 ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರನ್ನು ತಮ್ಮ ಮನೆಗಳಿಂದ ಸುಡಾನ್ ಅಥವಾ ನೆರೆಯ ದೇಶಗಳಲ್ಲಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು'' ಎಂದು ಗ್ರಿಫಿತ್ಸ್ ಹೇಳಿದರು. ''ಈ ಸಂಘರ್ಷದಿಂದ ಸಮುದಾಯಗಳು ಛಿದ್ರವಾಗಲು ಕಾರಣವಾಯಿತು. ಇದರಿಂದ ನೆರೆಯ ದೇಶಗಳಿಗೆ ಲಕ್ಷಾಂತರ ಜನರು ಪಲಾಯನ ಮಾಡಿದ್ದಾರೆ. ನೆರೆಯ ದೇಶಗಳಲ್ಲಿ ಅಗತ್ಯ ನೆರವುಗಳನ್ನು ಪಡೆದುಕೊಂಡಿದ್ದಾರೆ'' ಎಂದು ಅವರು ಹೇಳಿದರು.

4.5 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸ್ಥಳಾಂತರ:ಯುಎನ್​ ವಲಸೆ ಸಂಸ್ಥೆಯ ಪ್ರಕಾರ, ಸುಡಾನ್‌ ಒಳಗೆ 4.5 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಆದರೆ, 1.2 ಮಿಲಿಯನ್‌ಗಿಂತಲೂ ಹೆಚ್ಚು ಜನರು ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಹೋರಾಟವು ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು 25 ಮಿಲಿಯನ್ ಜನರು ಮಾನವೀಯ ನೆರವಿನ ಅಗತ್ಯವನ್ನು ಹೊಂದಿವೆ ಎಂದು ಗ್ರಿಫಿತ್ಸ್ ತಿಳಿಸಿದ್ದಾರೆ.

ಜನನಿಬಿಡ ಪ್ರದೇಶಗಳಲ್ಲಿ ವಾಯುದಾಳಿ, ಬಾಂಬ್​ಗಳ ಸುರಿಮಳೆ:ಯುದ್ಧದ ದುರಂತದ ಜೊತೆಗೆ, ರಾಜಧಾನಿ ಮತ್ತು ದೇಶದ ಇತರ ಪ್ರದೇಶಗಳಲ್ಲಿ ಕಾಲರಾ ಏಕಾಏಕಿ ವರದಿಯಾಗಿದೆ. 1,000 ಕ್ಕೂ ಹೆಚ್ಚು ಶಂಕಿತ ಪ್ರಕರಣಗಳು ಖಾರ್ಟೌಮ್‌ ಮತ್ತು ಕೊರ್ಡೋಫಾನ್ ಮತ್ತು ಖಾದರಿಫ್ ಪ್ರಾಂತ್ಯಗಳಲ್ಲಿ ಪತ್ತೆಯಾಗಿವೆ. ಗ್ರೇಟರ್ ಖಾರ್ಟೌಮ್‌ ಪ್ರದೇಶವು ಖಾರ್ಟೌಮ್‌, ಒಮ್ದುರ್ಮನ್ ಮತ್ತು ಖಾರ್ಟೌಮ್‌ ಉತ್ತರ ನಗರಗಳು ಯುದ್ಧಭೂಮಿಯಾಗಿ ಮಾರ್ಪಟ್ಟಿವೆ. ಜನನಿಬಿಡ ಪ್ರದೇಶಗಳಲ್ಲಿ ವಾಯುದಾಳಿ ಮತ್ತು ಶೆಲ್ ದಾಳಿಗಳು ಮುಂದುವರಿದಿವೆ.

ಖಾರ್ಟೌಮ್‌ ಮತ್ತು ಡಾರ್ಫುರ್‌ನಲ್ಲಿ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಕ್ಷಿಪ್ರ ಪಡೆಗಳ ಮೇಲೆ ಹೆಚ್ಚು ಆರೋಪ ಕೇಳಿಬಂದಿದೆ. ಆರ್‌ಎಸ್‌ಎಫ್ ಮತ್ತು ಅದರ ಮಿತ್ರ ಅರಬ್ ಸೇನಾಪಡೆಗಳು ಡಾರ್ಫೂರ್‌ನಲ್ಲಿ ದೌರ್ಜನ್ಯವೆಸಗಿವೆ ಎಂದು ಯುಎನ್ ಮತ್ತು ಅಂತಾರಾಷ್ಟ್ರೀಯ ಹಕ್ಕುಗಳ ಸಂಸ್ಥೆಗಳು ಆರೋಪಿಸಿವೆ. ಇಂಟರ್​ನ್ಯಾಷನಲ್ ಕ್ರಿಮಿನಲ್ ಕೋರ್ಟ್‌ನ ಪ್ರಾಸಿಕ್ಯೂಟರ್ ಅವರು, ಯುದ್ಧ ಅಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ತನಿಖೆ ಮಾಡುವುದಾಗಿ ಘೋಷಿಸಿದ್ದರು.

ಇದನ್ನೂ ಓದಿ:ಸಂಘರ್ಷ ಕೊನೆಗೊಳಿಸಲು ರಷ್ಯಾ ಮಧ್ಯಸ್ಥಿಕೆಗೆ ಬೇಡಿಕೆ ಇಟ್ಟ ಹಮಾಸ್

ABOUT THE AUTHOR

...view details