ಕರ್ನಾಟಕ

karnataka

ETV Bharat / international

ನೀರೊಳಗೆ ಕೇಕ್ ಕತ್ತರಿಸಿ ಕೊಹ್ಲಿಗೆ ಶುಭಾಶಯ ಕೋರಿದ ಸಬೀರ್ ತಂಡ - ಅಂತರಾಷ್ಟ್ರೀಯ ಸ್ಕೂಬಾ ಡೈವರ್ ಸಬೀರ್ ಬಕ್ಸ್ ತಂಡ

ಸ್ಕೂಬಾ ಡೈವರ್ ಸಬೀರ್ ಬಕ್ಸ್ ಮತ್ತು ತಂಡವು ವಿರಾಟ್ ಕೊಹ್ಲಿಗೆ ವಿಶೇಷ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಸ್ಟಾರ್ ಬ್ಯಾಟ್ಸ್‌ಮನ್ ಚಿತ್ರವಿರುವ ಕೇಕ್ ನೀರೊಳಗೆ ಕತ್ತರಿಸುವ ಮೂಲಕ ವಿರಾಟ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

special birthday wishes from underwater in cuttack
ನೀರೋಳಗೆ ಕೇಕ್ ಕತ್ತರಿಸಿ ಕೊಹ್ಲಿಗೆ ಶುಭಾಶಯ ಕೋರಿದ ಸಬೀರ್ ತಂಡ

By

Published : Nov 5, 2022, 5:26 PM IST

Updated : Nov 5, 2022, 5:42 PM IST

ಕಟಕ್: ಸ್ಕೂಬಾ ಡೈವರ್ ಸಬೀರ್ ಬಕ್ಸ್ ಮತ್ತು ತಂಡವು ನೀರೊಳಗಿನಿಂದ ವಿರಾಟ್ ಕೊಹ್ಲಿಗೆ ವಿಶೇಷ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸಿದ್ದಾರೆ. ಇಂದು ವಿರಾಟ್ 34 ನೇ ವರ್ಷಕ್ಕೆ ಕಾಲಿಟ್ಟಿದ್ದು, ವಿಶ್ವದಾದ್ಯಂತ ಹುಟ್ಟುಹಬ್ಬದ ಶುಭಾಶಯಗಳು ಹರಿದು ಬರುತ್ತಿವೆ.

ಅಂತಾರಾಷ್ಟ್ರೀಯ ಸ್ಕೂಬಾ ಡೈವರ್ ಸಬೀರ್ ಬಕ್ಸ್ ತಂಡ ವಿಶೇಷವಾಗಿ ವಿಷ್ ಮಾಡಿದೆ. ಕಟಕ್ ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಲು ವಿಶಿಷ್ಠವಾದ ಆಲೋಚನೆ ಮಾಡಿದ್ದಾರೆ. ಸ್ಟಾರ್ ಬ್ಯಾಟ್ಸ್‌ಮನ್ ಚಿತ್ರವಿರುವ ಕೇಕ್ ಅನ್ನು ನೀರೊಳಗೆ ಕತ್ತರಿಸುವ ಮೂಲಕ ವಿರಾಟ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ನೀರೊಳಗೆ ಕೇಕ್ ಕತ್ತರಿಸಿ ಕೊಹ್ಲಿಗೆ ಶುಭಾಶಯ ಕೋರಿದ ಸಬೀರ್ ತಂಡ

'ಟಿ 20 ವಿಶ್ವಕಪ್ ನಡೆಯುತ್ತಿದೆ. ವಿರಾಟ್ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಂಡಕ್ಕೆ ಪಂದ್ಯಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ಆರೋಗ್ಯಕ್ಕಾಗಿ ನಾವು ಪ್ರಾರ್ಥಿಸುತ್ತೇವೆ.' ಎಂದು ಸಬೀರ್ ಹೇಳಿದ್ದಾರೆ.

ಇದನ್ನೂ ಓದಿ:ವಿರಾಟ್​ ಹುಟ್ಟುಹಬ್ಬ: ವಿಶೇಷವಾಗಿ ಶುಭಕೋರಿದ ಅನುಷ್ಕಾ... ಪುತ್ರಿಯ ಫೋಟೋ ಶೇರ್

Last Updated : Nov 5, 2022, 5:42 PM IST

ABOUT THE AUTHOR

...view details