ಲಾಹೋರ್ (ಪಾಕಿಸ್ತಾನ್) : ಪಾಕಿಸ್ತಾನ ಡೆಮಾಕ್ರಟಿಕ್ ಮೂವ್‌ಮೆಂಟ್ (ಪಿಡಿಎಂ) ಮತ್ತು ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ನಡುವಿನ ತಿಕ್ಕಾಟವು ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತ ಹೇರಲು ಕಾರಣವಾಗಬಹುದು ಎಂದು ಪಾಕಿಸ್ತಾನ ಜಮಾತ್-ಎ-ಇಸ್ಲಾಮಿ (ಜೆಐ) ಮುಖ್ಯಸ್ಥ ಸಿರಾಜುಲ್ ಹಕ್ ಹೇಳಿದ್ದಾರೆ. ಪ್ರಸ್ತುತ ಪಿಡಿಎಂ ಸರ್ಕಾರವು ರಾಷ್ಟ್ರದ ಮೇಲೆ ಹೊರೆಯಾಗಿದೆ ಎಂದು ಅವರು ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದರು.
ರಾಷ್ಟ್ರವ್ಯಾಪಿ ಚುನಾವಣೆಯನ್ನು ಪ್ರಸ್ತಾಪಿಸಿದ ಸಿರಾಜ್, ಪ್ರತಿಭಟನೆಗಳನ್ನು ನಿಗ್ರಹಿಸುವ ಸರ್ಕಾರದ ಪ್ರಯತ್ನಗಳನ್ನು ಖಂಡಿಸಿದರು. ಶಾಂತಿಯುತ ಪ್ರದರ್ಶನಗಳು ಪ್ರತಿ ರಾಜಕೀಯ ಪಕ್ಷಗಳ ಸಾಂವಿಧಾನಿಕ ಹಕ್ಕು ಎಂದು ಹೇಳಿದರು. ಪಾಕಿಸ್ತಾನ ಸರ್ಕಾರ ಮತ್ತು ಚುನಾವಣಾ ಆಯೋಗ (ಇಸಿಪಿ) ಚುನಾವಣೆಯಿಂದ ದೂರ ಹೋಗುವ ಮೂಲಕ ಸಂವಿಧಾನ ಮತ್ತು ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಉಲ್ಲಂಘಿಸುತ್ತಿವೆ ಎಂದು ಸಿರಾಜ್ ವಾಗ್ದಾಳಿ ನಡೆಸಿದ್ದಾರೆ.
ಹಂಗಾಮಿ ಪಂಜಾಬ್ ಪ್ರಾಂತೀಯ ಸರ್ಕಾರವು ಪಿಡಿಎಂನ ಒಂದು ಭಾಗವಾಗಿದೆ ಎಂದು ಸಿರಾಜ್ ಹೇಳಿದರು. ಉಸ್ತುವಾರಿ ಸರ್ಕಾರದ ಹೇಳಿಕೆಗಳನ್ನು ನೋಡಿದರೆ ಅವರು ದೀರ್ಘಕಾಲ ಅಧಿಕಾರದಲ್ಲಿ ಉಳಿಯಲಿದ್ದಾರೆ ಎಂದು ತೋರುತ್ತದೆ. ಈ ದೇಶವು ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೂಲಕ ಅಸ್ತಿತ್ವಕ್ಕೆ ಬಂದಿದೆ ಮತ್ತು ಪ್ರಜಾಪ್ರಭುತ್ವದ ಕ್ರಮದಿಂದ ಮಾತ್ರ ಉಳಿಯಲು ಸಾಧ್ಯ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಯಾವುದೇ ಸಂದರ್ಭದಲ್ಲಿ ಸಂವಿಧಾನ ವಿರೋಧಿ ಕ್ರಮಗಳನ್ನು ತಪ್ಪಿಸಬೇಕು ಎಂದು ಅವರು ಹೇಳಿದರು.
ಸಂವಿಧಾನವನ್ನು ದುರ್ಬಲಗೊಳಿಸುವವರನ್ನು ವಿರೋಧಿಸುವುದಾಗಿ ಘೋಷಿಸಿದ ಅವರು ಇಂಥ ಪ್ರಯತ್ನಗಳ ವಿರುದ್ಧ ಗಂಭೀರ ಪರಿಣಾಮಗಳ ಎಚ್ಚರಿಕೆ ನೀಡಿದರು. ಆಡಳಿತಾರೂಢ ಮೈತ್ರಿಕೂಟದ ದ್ವಂದ್ವವನ್ನು ಎತ್ತಿ ತೋರಿಸಿದ ಜೆಐ ಮುಖ್ಯಸ್ಥ, ಪಿಪಿಪಿ ಮತ್ತು ಪಿಎಂಎಲ್-ಎನ್ ಸೇರಿದಂತೆ ಈ ಪಕ್ಷಗಳು ತಾವು ಅಧಿಕಾರಕ್ಕೆ ಬರುವ ಮೊದಲು ಹಣದುಬ್ಬರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವು ಎಂದು ಹೇಳಿದರು.
ಉಚಿತ ಗೋಧಿ ಹಿಟ್ಟಿನ ಅಂಗಡಿಗಳು ಸಾವುಗಳನ್ನು ಮಾರಾಟ ಮಾಡುತ್ತಿವೆ. ಮೂಲಭೂತ ಅವಶ್ಯಕತೆಗಳನ್ನು ಸಂಗ್ರಹಿಸುವ ಭರದಲ್ಲಿ ಈಗಾಗಲೇ ಐವರು ಬಡವರು ಹುತಾತ್ಮರಾಗಿದ್ದಾರೆ ಎಂದು ಸಿರಾಜ್ ಹೇಳಿದರು. ಪಿಪಿಪಿ, ಪಿಎಂಎಲ್-ಎನ್ ಮತ್ತು ಪಿಟಿಐ ಸೇರಿದಂತೆ ಈ ಪಕ್ಷಗಳು ತಮ್ಮ ಪ್ರೋಟೋಕಾಲ್‌ಗಳು, ಸವಲತ್ತುಗಳು, ಐಷಾರಾಮಿ ಕಾರುಗಳು ಮತ್ತು ಮಹಲುಗಳನ್ನು ಬಿಡಲು ಸಿದ್ಧರಿಲ್ಲ ಎಂದು ಸಿರಾಜ್ ಆರೋಪಿಸಿದರು.
ಲಾಹೋರ್ನಲ್ಲಿ ಇಮ್ರಾನ್ ಖಾನ್ ರ್ಯಾಲಿ: ಭಯೋತ್ಪಾದಕರ ದಾಳಿ ನಡೆಯುವ ಸಾಧ್ಯತೆಗಳಿವೆ ಎಂಬ ಮಧ್ಯಂತರ ಪಂಜಾಬ್ ಸರ್ಕಾರದ ಬೆದರಿಕೆ ಹಾಗೂ ಎಚ್ಚರಿಕೆಗಳ ನಡುವೆಯೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಲಾಹೋರ್‌ನ ಸ್ಮಾರಕವಾದ ಮಿನಾರ್-ಎ-ಪಾಕಿಸ್ತಾನ ಮೈದಾನದಲ್ಲಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ನ ರ್ಯಾಲಿ ನಡೆಸಿದ್ದಾರೆ. ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ರ್ಯಾಲಿ ಸ್ಥಳಕ್ಕೆ ಆಗಮಿಸಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ತನಗೆ ಜೀವ ಬೆದರಿಕೆ ಇದೆ ಎಂದು ಹೇಳಿರುವ ಇಮ್ರಾನ್ ಖಾನ್, ಬುಲೆಟ್ ಪ್ರೂಫ್ ಗ್ಲಾಸ್‌ನಿಂದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಮಿನಾರ್-ಎ-ಪಾಕಿಸ್ತಾನಕ್ಕೆ ಹೋಗುವ ಎಲ್ಲಾ ಪ್ರಮುಖ ರಸ್ತೆಗಳನ್ನು ಕಂಟೈನರ್‌ಗಳು ಮತ್ತು ಬ್ಯಾರಿಕೇಡ್‌ಗಳಿಂದ ಪೊಲೀಸರು ನಿರ್ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಅಡೆತಡೆಗಳಿಂದಾಗಿ ಪಿಟಿಐ ಬೆಂಬಲಿಗರು ಕಾಲ್ನಡಿಗೆಯಲ್ಲಿ ಬಹಳ ದೂರ ಕ್ರಮಿಸುವ ಮೂಲಕ ಸ್ಥಳವನ್ನು ತಲುಪಿದರು.
ಇದನ್ನೂ ಓದಿ : ಪಾಕಿಸ್ತಾನಕ್ಕೆ ಸೋಲು: 11 ವರ್ಷಗಳ ನಂತರ ಮುಖಾಮುಖಿಯಲ್ಲಿ ಅಫ್ಘಾನ್ಗೆ ಐತಿಹಾಸಿಕ ಗೆಲುವು