ವಾಷಿಂಗ್ಟನ್ ಡಿಸಿ(ಅಮೆರಿಕ): 'ಆಫ್ರಿಕಾ'ವನ್ನು ಜಿ 20ಗೆ ಖಾಯಂ ಸದಸ್ಯರನ್ನಾಗಿ ಸೇರಿಸುವ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
"ಜಿ 20 ಅಧ್ಯಕ್ಷತೆಯಲ್ಲಿ ನಾವು 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ'ಕ್ಕೆ ಶಕ್ತಿ ನೀಡುತ್ತಿದ್ದೇವೆ ಮತ್ತು ಜಾಗತಿಕವಾಗಿ ದಕ್ಷಿಣದ ಪರ ಧ್ವನಿ ಎತ್ತುತ್ತಿದ್ದೇವೆ. ಆಫ್ರಿಕಾವನ್ನು ಶಾಶ್ವತ ಜಿ 20 ಸದಸ್ಯರನ್ನಾಗಿ ಮಾಡುವ ನನ್ನ ಪ್ರಸ್ತಾಪಕ್ಕೆ ಬೆಂಬಲವನ್ನು ನೀಡಿದ್ದಕ್ಕಾಗಿ ನಾನು ಅಧ್ಯಕ್ಷ ಬೈಡನ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವಗಳು (ಭಾರತ ಮತ್ತು ಅಮೆರಿಕ) ಇಡೀ ಪ್ರಪಂಚದ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಸಾಧ್ಯವಾಗುತ್ತದೆ" ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ಪಿಎಂ ಮೋದಿ ಹೇಳಿದರು.
ಇದನ್ನೂ ಓದಿ:ಭಾರತ- ಅಮೆರಿಕ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿವೆ: ಪ್ರಧಾನಿ ನರೇಂದ್ರ ಮೋದಿ
ಈ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಿ 20 ಸದಸ್ಯರ ಗುಂಪಿನಲ್ಲಿ ತಮ್ಮ ಸಹವರ್ತಿಗಳಿಗೆ ಪತ್ರ ಬರೆದಿದ್ದರು. ಆಫ್ರಿಕನ್ ಯೂನಿಯನ್‌ಗೆ ಗುಂಪಿನ ಸಂಪೂರ್ಣ ಸದಸ್ಯತ್ವ ನೀಡುವಂತೆ ಅವರು ಕರೆ ನೀಡಿದ್ದಾರೆ. ಆಫ್ರಿಕಾದ ಖಂಡದ 55 ದೇಶಗಳನ್ನು ಒಳಗೊಂಡಿರುವ ಒಕ್ಕೂಟದ ಮನವಿಗೆ ಅನುಗುಣವಾಗಿ ಈ ಪ್ರಸ್ತಾಪವನ್ನು ಮಾಡಲಾಗಿದೆ. ಇದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಆಫ್ರಿಕಾದ ಪರ ಧ್ವನಿ ಎತ್ತುವ ಮತ್ತು ನಮ್ಮ ಭವಿಷ್ಯವನ್ನು ರೂಪಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ:ಅಮೆರಿಕ-ಭಾರತ ದೇಶಗಳದ್ದು 21ನೇ ಶತಮಾನದ ಅತ್ಯಂತ ನಿರ್ಣಾಯಕ ಬಾಂಧವ್ಯ- ಜೋ ಬೈಡನ್
ಪ್ರಧಾನಿ ಮೋದಿ ಅವರು ಆಫ್ರಿಕನ್ ಕಾರಣವನ್ನು ದೃಢವಾಗಿ ಪ್ರತಿಪಾದಿಸುತ್ತಾರೆ ಮತ್ತು ಬೆಂಬಲಿಸುತ್ತಾರೆ. ಈ ವಿಷಯದಲ್ಲಿ ಮುಂದಾಳತ್ವ ವಹಿಸಿದ್ದಾರೆ. ಭಾರತದ ಜಿ 20 ಪ್ರೆಸಿಡೆನ್ಸಿ ಭಾಗವಾಗಿ ಅವರು ಜಿ 20 ಕಾರ್ಯಸೂಚಿಯಲ್ಲಿ ಆಫ್ರಿಕನ್ ದೇಶಗಳ ಆದ್ಯತೆಗಳನ್ನು ಸೇರಿಸುವುದರ ಮೇಲೆ ವಿಶೇಷವಾಗಿ ಗಮನಹರಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಜಿ 20 ಶೃಂಗಸಭೆ: ಏಷ್ಯಾದ ಆರ್ಥಿಕ ಬಿಕ್ಕಟ್ಟಿನ ನಂತರ 1999ರಲ್ಲಿ ಸ್ಥಾಪನೆಯಾದ ಜಿ 20 ಶೃಂಗಸಭೆ, 20 ದೊಡ್ಡ ಆರ್ಥಿಕತೆಗಳನ್ನು ಒಳಗೊಂಡಿದೆ. ಗುಂಪಿನ ಸದಸ್ಯರು ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಯುಎಸ್ ಮತ್ತು ಯುರೋಪಿಯನ್ ಯೂನಿಯನ್ . ಭಾರತವು ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ಜಿ 20 ಶೃಂಗಸಭೆಯನ್ನು ಆಯೋಜಿಸಲಿದೆ.
ಇದನ್ನೂ ಓದಿ:ಶ್ವೇತಭವನದಲ್ಲಿ ಪ್ರಧಾನಿ ಮೋದಿ: ಬೈಡನ್ ದಂಪತಿಯಿಂದ ಆತ್ಮೀಯ ಸ್ವಾಗತ
ಭಾರತದಲ್ಲಿ ದೂತಾವಾಸ ಕಚೇರಿ: ಅಮೆರಿಕ ಭಾರತದ ಅಹಮದಾಬಾದ್ ಮತ್ತು ಬೆಂಗಳೂರಿನಲ್ಲಿ ತನ್ನ ಕಾನ್ಸುಲೇಟ್‌ಗಳನ್ನು ತೆರೆಯುತ್ತದೆ. ಅದೇ ರೀತಿ ಸಿಯಾಟಲ್‌ನಲ್ಲಿ ಭಾರತ ತನ್ನ ದೂತಾವಾಸ ಕಚೇರಿಯನ್ನು ತೆರೆಯುತ್ತದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. "ವೈಟ್‌ಹೌಸ್‌ನಲ್ಲಿ ಸೇರಿರುವ ಅಪಾರ ಜನಸಮೂಹವು ಭಾರತೀಯ ಅಮೆರಿಕನ್ನರ ಸಂಬಂಧದ ನಿಜವಾದ ಶಕ್ತಿಯನ್ನು ತೋರಿಸುತ್ತಿದೆ. ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಕಾನ್ಸುಲೇಟ್‌ಗಳನ್ನು ತೆರೆಯುವ ಅಮೆರಿಕದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ . ಅಂತೆಯೇ ನಾವು ಸಿಯಾಟಲ್‌ನಲ್ಲಿ ಹೊಸ ದೂತಾವಾಸವನ್ನು ತೆರೆಯುತ್ತೇವೆ" ಎಂದು ಮೋದಿ ಇದೇ ವೇಳೆ ಭರವಸೆ ನೀಡಿದರು.