ಇಸ್ಲಾಮಾಬಾದ್:ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ದೇಶವನ್ನುದ್ದೇಶಿಸಿ ಅವರು ಮಾತನಾಡಿದರು. ನನ್ನ ದೇಶದ ಜನರು ಯಾರ ಮುಂದೆಯೂ ತಲೆಬಾಗಲು ನಾನು ಬಿಡಲ್ಲ. ಪಾಕಿಸ್ತಾನದಲ್ಲಿ ಸದ್ಯ ಹೇಳಲಾರದ ಸ್ಥಿತಿ ನಿರ್ಮಾಣಗೊಂಡಿದೆ. ನನ್ನ ಮನದ ಮಾತು ಪಾಕಿಸ್ತಾನದ ಜನತೆ ಮುಂದಿಡುವ ಉದ್ದೇಶದಿಂದ ಭಾಷಣ ಮಾಡುತ್ತಿದ್ದೇನೆ. ಇಲ್ಲಿನ ಜನರ ಸೇವೆ ಮಾಡುವ ಕಾರಣಕ್ಕಾಗಿ ನಾನು ರಾಜಕಾರಣಕ್ಕೆ ಬಂದಿದ್ದು, ಅನೇಕ ರೀತಿಯ ಏರಿಳಿತ ಕಂಡಿದ್ದೇನೆ ಎಂದರು.
ಇತರೆ ರಾಷ್ಟ್ರಗಳ ಎದುರು ನಾವು ಇರುವೆಗಳಂತೆ ಸಾಗುತ್ತಿದ್ದೇವೆ. ನಮ್ಮ ವಿದೇಶಾಂಗ ನೀತಿ ಸ್ವಾತಂತ್ರ್ಯ ಬಯಸುತ್ತಿದ್ದು, ಭಾರತವನ್ನ ನಾವು ಯಾವುದೇ ವಿಷಯದಲ್ಲೂ ವಿರೋಧ ಮಾಡಿಲ್ಲ. 9/11 ದಾಳಿಯಲ್ಲಿ ಪಾಕಿಸ್ತಾನದ ನಾಗರಿಕರು ಭಾಗಿಯಾಗಿರಲಿಲ್ಲ ಎಂದಿರುವ ಇಮ್ರಾನ್ ಖಾನ್, ಹಳೆ ಜಿಹಾದಿ ಸಂಘಟನೆಗಳು ಪಾಕ್ ವಿರುದ್ಧ ಒಂದಾಗಿ ಈ ಕೆಲಸ ಮಾಡ್ತಿವೆ. ಕಾಶ್ಮೀರ್ ವಿಚಾರದಲ್ಲಿ ನನಗೆ ಭಾರತದೊಂದಿಗೆ ಯಾವುದೇ ರೀತಿಯ ಭಿನ್ನಾಬಿಪ್ರಾಯವಿಲ್ಲ ಎಂದಿರುವ ಅವರು, ಆರ್ಟಿಕಲ್ 370 ರದ್ದುಗೊಳಿಸುವ ಮುನ್ನ ಅದರ ವಿರುದ್ಧ ನಾನು ಮಾತನಾಡಿಲ್ಲ ಎಂದಿದ್ದಾರೆ. ಪ್ರಧಾನಿ ಹುದ್ದೆಗೆ ನಾನು ರಾಜೀನಾಮೆ ನೀಡಲ್ಲ. ಪಾಕಿಸ್ತಾನದಲ್ಲಿ ಉಂಟಾಗಿರುವ ಅಸ್ಥಿರತೆಗೆ ಅಮೆರಿಕ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.