ಇಸ್ಲಾಮಾಬಾದ್ (ಪಾಕಿಸ್ತಾನ):ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಕಹಿ ಸುದ್ದಿ ಬಂದಿದೆ. ಯುನೈಟೆಡ್ ನೇಷನ್ಸ್ ಇನ್ಸ್ಟಿಟ್ಯೂಟ್ ಫಾರ್ ವಾಟರ್, ಎನ್ವಿರಾನ್ಮೆಂಟ್ ಮತ್ತು ಹೆಲ್ತ್ ಪ್ರಕಟಿಸಿದ ವರದಿಯಲ್ಲಿ ಪಾಕಿಸ್ತಾನ ಮತ್ತು ಇತರ 22 ದೇಶಗಳನ್ನು ನೀರಿನ ಅಸುರಕ್ಷಿತ ವಿಭಾಗದಲ್ಲಿ ಹೆಸರಿಸಲಾಗಿದೆ.
ವಿಶ್ವಸಂಸ್ಥೆಯ ವಿಶ್ವವಿದ್ಯಾನಿಲಯವು ಗುರುವಾರ ಜಾಗತಿಕ ಜಲ ಭದ್ರತೆ(ಗ್ಲೋಬಲ್ ವಾಟರ್ ಸೆಕ್ಯುರಿಟಿ) 2023 ಮೌಲ್ಯಮಾಪನ ವರದಿ ಬಿಡುಗಡೆ ಮಾಡಿದೆ. ಇದು ಮೂರು ವಿಭಿನ್ನ ಭೌಗೋಳಿಕ ಪ್ರದೇಶಗಳ ಒಟ್ಟು 33 ದೇಶಗಳು ಉನ್ನತ ಮಟ್ಟದ ನೀರಿನ ಸುರಕ್ಷತೆಯನ್ನು ಹೊಂದಿವೆ. ಆದರೆ ಉಳಿದಂತೆ ಎಲ್ಲಾ ಪ್ರದೇಶಗಳು ಕಡಿಮೆ ಮಟ್ಟದ ನೀರಿನ ಸುರಕ್ಷತೆಯನ್ನು ಹೊಂದಿರುವ ದೇಶಗಳನ್ನು ಒಳಗೊಂಡಿದೆ ಎಂದು ಹೇಳಿದೆ.
ವರದಿಯಲ್ಲಿ ಏನಿದೆ?: ವಿಶ್ವಸಂಸ್ಥೆಯ ಜಲ ತಜ್ಞರು ವಿಶ್ವದ ನೀರಿನ ಸಂಪನ್ಮೂಲಗಳ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯದ ಪ್ರದೇಶವನ್ನು ಜಾಗತಿಕ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಹೊಂದಿಲ್ಲ ಎಂದು ತಿಳಿಸಿದೆ. ಶೇ.70ಕ್ಕಿಂತ ಹೆಚ್ಚು, ಅಥವಾ 5.5 ಶತಕೋಟಿಗಿಂತ ಹೆಚ್ಚು ಜನರು ಸುರಕ್ಷಿತ ನೀರಿನ ಸೌಲಭ್ಯ ಹೊಂದಿಲ್ಲ. ಆಫ್ರಿಕಾ ಜನಸಂಖ್ಯೆಯ ಕೇವಲ 15 ಪ್ರತಿಶತವನ್ನು ಮಾತ್ರ ಹೊಂದಿದೆ ಎಂದು ವಿವರಿಸಿದೆ.
ನಾಲ್ವರಲ್ಲಿಮೂರು ಜನ ಜಲ-ಅಸುರಕ್ಷಿತ ದೇಶಗಳಲ್ಲಿ ವಾಸ:ನಾಲ್ಕು ಜನರಲ್ಲಿ ಮೂವರು ಪ್ರಸ್ತುತ ಜಲ-ಅಸುರಕ್ಷಿತ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ನೀರು-ಸಂಬಂಧಿತ ವಿಪತ್ತುಗಳಿಂದ ಹೆಚ್ಚು ಜನರು ಸುರಕ್ಷಿತ ಕುಡಿಯುವ ನೀರು, ನೈರ್ಮಲ್ಯ ಸೇವೆಗಳ ಕೊರತೆಯಿಂದ ಸಾಯುತ್ತಿದ್ದಾರೆ. ಪಾಕಿಸ್ತಾನ ಮೂಲದ ಇಂಗ್ಲಿಷ್ ದೈನಿಕವೊಂದರ ಪ್ರಕಾರ "ವಿಶ್ವದ ಜನಸಂಖ್ಯೆಯ ಬಹುಪಾಲು ಜನರು ಪ್ರಸ್ತುತ ಜಲ-ಅಸುರಕ್ಷಿತ ದೇಶಗಳಾದ ಸೊಲೊಮನ್ ದ್ವೀಪಗಳು, ಎರಿಟ್ರಿಯಾ, ಸುಡಾನ್, ಇಥಿಯೋಪಿಯಾ, ವನವಾಟು, ಅಫ್ಘಾನಿಸ್ತಾನ್, ಜಿಬೌಟಿ, ಹೈಟಿ, ಪಪುವಾ ನ್ಯೂ ಗಿನಿಯಾ, ಸೊಮಾಲಿಯಾ, ಲೈಬೀರಿಯಾ, ಸೇಂಟ್ ಕಿಟ್ಸ್ ಮತ್ತು ನೆವಿಸ್, ಲಿಬಿಯಾ, ಮಡಗಾಸ್ಕರ್, ದಕ್ಷಿಣ ಸುಡಾನ್, ಮೈಕ್ರೋನೇಷಿಯಾ, ನೈಜರ್, ಸಿಯೆರಾ ಲಿಯೋನ್, ಯೆಮೆನ್, ಚಾಡ್, ಕೊಮೊರೊಸ್ ಮತ್ತು ಶ್ರೀಲಂಕಾದಲ್ಲಿ ವಾಸಿಸುತ್ತಿದ್ದಾರೆ" ಎಂದು ತಜ್ಞರು ಹೇಳಿದ್ದಾರೆ. ಇದು ಕಳವಳಕ್ಕೆ ಕಾರಣವಾಗಿದೆ. ಏಕೆಂದರೆ ನೀರಿನ ಭದ್ರತೆಯು ಅಭಿವೃದ್ಧಿಗೆ ಮೂಲವಾಗಿದೆ.
ಜಲ ಸುರಕ್ಷಿತ ದೇಶಗಳಿವು: ವರದಿಯ ಪ್ರಕಾರ, ಯುರೋಪಿಯನ್ ರಾಷ್ಟ್ರಗಳಾದ "ಸ್ವೀಡನ್, ಡೆನ್ಮಾರ್ಕ್, ಲಕ್ಸೆಂಬರ್ಗ್, ಆಸ್ಟ್ರಿಯಾ, ನಾರ್ವೆ, ಸ್ವಿಟ್ಜರ್ಲೆಂಡ್, ಫಿನ್ಲ್ಯಾಂಡ್ ಮತ್ತು ಐಸ್ಲ್ಯಾಂಡ್, ಐರ್ಲೆಂಡ್, ಫ್ರಾನ್ಸ್, ಲಿಥುವೇನಿಯಾ, ಗ್ರೀಸ್, ಜರ್ಮನಿ, ಯುಕೆ, ಎಸ್ಟೋನಿಯಾ, ಇಟಲಿ ಸೇರಿದಂತೆ ಇತರ ಯುರೋಪಿಯನ್ ದೇಶಗಳು" ಹೆಚ್ಚು ಜಲ ಸುರಕ್ಷಿತ ದೇಶವಾಗಿದೆ. ಏಷ್ಯಾ ಪೆಸಿಫಿಕ್‌ನಲ್ಲಿ ಜಲ ಸುರಕ್ಷಿತ ರಾಷ್ಟ್ರಗಳೆಂದರೆ ನ್ಯೂಜಿಲೆಂಡ್, ಸೈಪ್ರಸ್, ಆಸ್ಟ್ರೇಲಿಯಾ, ಜಪಾನ್, ಇಸ್ರೇಲ್, ಕುವೈತ್ ಮತ್ತು ಮಲೇಷ್ಯಾ ಸೇರಿವೆ. ಕೆನಡಾ ಮತ್ತು ಯುಎಸ್‌ಎ ಮಾತ್ರ ಅಮೆರಿಕದಲ್ಲಿ ಜಲ ಸುರಕ್ಷಿತ ಗುಂಪಿನಲ್ಲಿ ಸ್ಥಾನ ಪಡೆದಿವೆ.