ಕೇಪ್ ವರ್ಡೆ, ಆಫ್ರಿಕಾ: ಸೆನೆಗಲ್‌ನಿಂದ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಪಶ್ಚಿಮ ಆಫ್ರಿಕಾದ ಕೇಪ್ ವರ್ಡೆ ದ್ವೀಪಗಳ ಕರಾವಳಿಯಲ್ಲಿ ದುರುಂತಕ್ಕಿಡಾಗಿದೆ. ಈ ದುರಂತದಲ್ಲಿಲ ಸುಮಾರು 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಬಹಿರಂಗಪಡಿಸಿವೆ. ಅಷ್ಟೇ ಅಲ್ಲ ಈ ಮಾಹಿತಿಯನ್ನು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ಬುಧವಾರ ಖಚಿತ ಪಡಿಸಿದೆ.
ದೋಣಿ ದುರಂತದ ಬಗ್ಗೆ ಮಾಹಿತಿ ಖಚಿತ ಪಡಿಸಿದ ಐಒಎಂ ವಕ್ತಾರ: ಮಾಧ್ಯಮಗಳೊಂದಿಗೆ ಮಾತನಾಡಿದ IOM ವಕ್ತಾರ ಸಫಾ ಮಸೆಹ್ಲಿ, ಅಪಘಾತದಲ್ಲಿ 63 ಜನರು ಸಾವನ್ನಪ್ಪಿರುವ ಭಯವಿದ್ದು, 38 ಜನರನ್ನು ರಕ್ಷಿಸಲಾಗಿದೆ. ರಕ್ಷಿಸಿದ 38 ಜನರಲ್ಲಿ ನಾಲ್ವರು ಮಕ್ಕಳು ಸಹ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸ್ಪ್ಯಾನಿಷ್ ಮೀನುಗಾರಿಕಾ ಹಡಗಿನಿಂದ ಮಾಹಿತಿ ರವಾನೆ:ಕೇಪ್ ವರ್ಡೆ ದ್ವೀಪಗಳಿಂದ ಸುಮಾರು 150 ನಾಟಿಕಲ್ ಮೈಲಿ (277 ಕಿಮೀ) ದೂರದಲ್ಲಿರುವ ಅಟ್ಲಾಂಟಿಕ್ ಸಾಗರದಲ್ಲಿ ಮೀನುಗಾರಿಕಾ ದೋಣಿಯೊಂದು ದುರಂತಕ್ಕಿಡಾಗಿರುವುದು ಸೋಮವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲಿಗೆ ಈ ದುರಂತಕ್ಕಿಡಾಗಿದ್ದ ದೋಣಿಯನ್ನು ಸ್ಪ್ಯಾನಿಷ್ ಮೀನುಗಾರಿಕಾ ಹಡಗಿನ ಸಿಬ್ಬಂದಿ ಗುರುತಿಸಿದ್ದರು. ನಂತರ ಈ ಮಾಹಿತಿಯನ್ನು ಅವರು ಕೇಪ್ ವರ್ಡಿಯನ್ ಅಧಿಕಾರಿಗಳಿಗೆ ರವಾನಿಸಿದರು.