ಕರ್ನಾಟಕ

karnataka

By

Published : Apr 2, 2022, 3:55 PM IST

ETV Bharat / international

ಅವಿಶ್ವಾಸ ಗೊತ್ತುವಳಿ ತಪ್ಪಿಸಿಕೊಳ್ಳಲು ಅಂತಾರಾಷ್ಟ್ರೀಯ ಷಡಂತ್ರ್ಯದ ನಾಟಕ: ಇಮ್ರಾನ್​ ವಿರುದ್ಧ ಷರೀಫ್​​​​​ ಆಕ್ರೋಶ

ಅವಿಶ್ವಾಸ ನಿರ್ಣಯ ಸಂಬಂಧ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಷರೀಫ್​. ಭಾನುವಾರ ನಿಮ್ಮ ಸೋಲು ಸನ್ನಿಹಿತವಾಗಿದೆ. ಇದು ಗೋಡೆ ಮೇಲಿನ ಬರಹದಷ್ಟೇ ಸತ್ಯ. ಹಾಗಾಗಿಯೇ ನೀವು ಇದನ್ನೆಲ್ಲ ಮಾಡುತ್ತಿದ್ದೀರಿ ಎಂದು ಇಮ್ರಾನ್​ ಖಾನ್​ ವಿರುದ್ಧ ಹರಿಹಾಯ್ದಿದ್ದಾರೆ.

Opposition leaders accuse Pak PM of staging conspiracy drama ahead of no-confidence motion
ಅವಿಶ್ವಾಸ ಗೊತ್ತುವಳಿ ತಪ್ಪಿಸಿಕೊಳ್ಳಲು ಬೆದರಿಕೆ ಪತ್ರದ ನಾಟಕ: ಇಮ್ರಾನ್​ ವಿರುದ್ಧ ಷರೀಫ್​​​​​ ಆಕ್ರೋಶ

ಇಸ್ಲಾಮಾಬಾದ್​( ಪಾಕಿಸ್ತಾನ):ಇದು ಅಂತಾರಾಷ್ಟ್ರೀಯ ಷಡಂತ್ರ್ಯ ಎನ್ನುವ ಮೂಲಕ ಪ್ರಧಾನಿ ಇಮ್ರಾನ್​ ಖಾನ್​ ನಾಟಕ ಮಾಡುತ್ತಿದ್ದಾರೆ ಎಂದು ಪಾಕಿಸ್ತಾನ ಮುಸ್ಲೀಂ ಲೀಗ್​​​​​( ಪಿಎಂಎಲ್​​ಎನ್​​​​​​​​​) ಅಧ್ಯಕ್ಷ ಷಹನಾಜ್​​​ ಶರೀಫ್​​ ಆರೋಪಿಸಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಇದೆ ಎಂಬ ನೆಪದಲ್ಲಿ ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯದಿಂದ ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದು, ಅಮೆರಿಕದಿಂದ ಬೆದರಿಕೆ ಪತ್ರ ಬಂದಿದೆ ಎಂದಿರುವ ಇಮ್ರಾನ್​ ಖಾನ್ ಇದು ನನ್ನ ಕೊನೆಯ ಪ್ರಯತ್ನ ಎಂದು ಹೇಳಿದ್ದಾರೆ ಎಂದು ಅಲ್ಲಿನ ಪತ್ರಿಕೆ ವರದಿ ಮಾಡಿದೆ.

ಅವಿಶ್ವಾಸ ನಿರ್ಣಯ ಸಂಬಂಧ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಷರೀಫ್​. ಭಾನುವಾರ ನಿಮ್ಮ ಸೋಲು ಸನ್ನಿಹಿತವಾಗಿದೆ. ಇದು ಗೋಡೆ ಮೇಲಿನ ಬರಹದಷ್ಟೇ ಸತ್ಯ. ಹಾಗಾಗಿಯೇ ನೀವು ಇದನ್ನೆಲ್ಲ ಮಾಡುತ್ತಿದ್ದೀರಿ ಎಂದು ಇಮ್ರಾನ್​ ಖಾನ್​ ವಿರುದ್ಧ ಹರಿಹಾಯ್ದಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಬೇರೆಯವರ ಸಹಕಾರದೊಂದಿಗೆ ಹಾಗೂ ಭಾರಿ ಸದ್ದಿನೊಂದಿಗೆ ಅಧಿಕಾರಕ್ಕೆ ಬಂದಿತ್ತು ಎಂದು PML-N ಅಧ್ಯಕ್ಷರು ಹೇಳಿದ್ದಾರೆ.

ಇದೀಗ ಇಮ್ರಾನ್​ ಖಾನ್​ ಅವರನ್ನು ಪದಚ್ಯುತಗೊಳಿಸಲು ಪ್ರತಿ ಪಕ್ಷಗಳು ಜಂಟಿಯಾಗಿ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಮಾರ್ಗವನ್ನು ಆರಿಸಿಕೊಂಡಿವೆ ಎಂದು ಡಾನ್​ ವರದಿ ಮಾಡಿದೆ. ಮಾರ್ಚ್ 27 ರಂದು ಸಾರ್ವಜನಿಕ ರ‍್ಯಾಲಿಯಲ್ಲಿ ಬೆದರಿಕೆ ಪತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ತಕ್ಷಣವೇ ಪ್ರತಿಕ್ರಿಸದಿರಲು ಕಾರಣ ಏನೆಂದು ಇಮ್ರಾನ್​ ಖಾನ್​ ಅವರನ್ನು ಷರೀಫ್​ ಪ್ರಶ್ನಿಸಿದ್ದಾರೆ.

ನಿಮಗೆ ಅಮೆರಿಕದಿಂದ ಬೆದರಿಕೆ ಪತ್ರ ಬಂದಿದ್ದರೆ, ಒಐಸಿ ಸಭೆಗೆ ಅಮೆರಿಕದ ನಿಯೋಗವನ್ನು ಕರೆದಿದ್ದಾದರೂ ಏಕೆ ಎಂದು ಕೇಳಿರುವ ಪಿಎಂಎಲ್​ ಎನ್​​​​​ ಪಕ್ಷದ ಅಧ್ಯಕ್ಷರು, ಪಾಕಿಸ್ತಾನ - ಅಮೆರಿಕ ರಾಜತಾಂತ್ರಿಕ ಸಂಬಂಧದ 75 ವರ್ಷಗಳ ಆಚರಣೆಯ ಸಭೆಯಲ್ಲಿ ಭಾಗವಹಿಸಿದ ಪಾಕಿಸ್ತಾನ ವಿದೇಶಾಂಗ ಸಚಿವರು ಅಲ್ಲಿ ಮಾತನಾಡಿದ್ದಾದರೂ ಏಕೆ ಎಂದು ಇಮ್ರಾನ್​ ಖಾನ್​ಗೆ ಷರೀಪ್​ ಪ್ರಶ್ನಿಸಿದ್ದಾರೆ

ಇಮ್ರಾನ್​ ಖಾನ್​ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚೀನಾ, ಸೌದಿ ಅರೇಬಿಯಾ ಮತ್ತು ಟರ್ಕಿಯೊಂದಿಗೆ ಸಂಬಂಧಗಳನ್ನು ಹಾಳುಗಡೆವಿದೆ ಎಂದು ಪಿಎಂಎಲ್​ಎನ್​​ ಪಕ್ಷದ ಅಧ್ಯಕ್ಷ ಶಹನಾಜ್​ ಷರೀಫ್​ ಆರೋಪಿಸಿದ್ದಾರೆ ಎಂದು ಡಾನ್​ ವರದಿ ಮಾಡಿದೆ. ಇದೇ ವೇಳೆ ಮಾತನಾಡಿರುವ ಷರೀಫ್​, ಇಮ್ರಾನ್ ಖಾನ್ ಮುಂದೆ ಮೂರು ಆಯ್ಕೆಗಳನ್ನು ಇರಿಸಿದ್ದಾರೆ.

ಅವಿಶ್ವಾಸ ಗೊತ್ತುವಳಿ ಎದುರಿಸುವುದು ಇಲ್ಲವೇ ಅವಧಿ ಪೂರ್ವ ಚುನಾವಣೆ ಘೋಷಣೆ ಮಾಡುವ ಮಾರ್ಗಗಳು ಇಮ್ರಾನ್​ ಖಾನ್ ಮುಂದಿದ್ದು, ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನು ಓದಿ:ಅಚ್ಚರಿ..! ಒಂದೇ ಪಪ್ಪಾಯಿ ಮರ, 15 ಟಿಸಿಲು, 200 ಹಣ್ಣುಗಳು!!

ABOUT THE AUTHOR

...view details