ಚಿಕಾಗೋ( ಅಮೆರಿಕ):ಕ್ಯಾನ್ಸರ್ ಮತ್ತು ಆಟೋಇಮ್ಯೂನ್ ಅಸ್ವಸ್ಥತೆಗಳ ಬೆಳವಣಿಗೆಯಲ್ಲಿ ನಿರ್ಣಾಯಕವಾದ ರೋಗನಿರೋಧಕ ಪ್ರಕ್ರಿಯೆ ನಿಯಂತ್ರಿಸಬಲ್ಲ ಅಣುವೊಂದನ್ನು ಚಿಕಾಗೋದ ಇಲಿನಾಯ್ಸ್ ವಿಶ್ವವಿದ್ಯಾಲಯ ಸಂಶೋಧಕರು ಕಂಡು ಹಿಡಿದಿದ್ದಾರೆ.
ಆಂಜೆವಾಂಡ್ಟೆ ಕೆಮಿ ಪೇಪರ್‌ನಲ್ಲಿ ಈ ಸಂಶೋಧನೆ ಬಗ್ಗೆ ವರದಿಯೊಂದು ಪ್ರಕಟವಾಗಿದೆ. ಪ್ರತಿರಕ್ಷಣಾ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಕಿಣ್ವದ ಪ್ರತಿರೋಧಕವಾದ ಅಣು ಕಂಡುಹಿಡಿಯುವ ಮೊದಲು ಕೆಲವು ರೋಗಗಳು ಚಿಕಿತ್ಸೆಗಳಿಗೆ ಏಕೆ ನಿರೋಧಕವಾಗಿರುತ್ತವೆ ಎಂಬುದರ ಬಗ್ಗೆ ಈ ಸಂಶೋಧಕರು ಅಧ್ಯಯನ ಮಾಡಿದ್ದಾರೆ.
ಟ್ಯೂಮರ್‌ಗಳು ಜೀವಕೋಶದ ಮೇಲ್ಮೈ ಗುರುತುಗಳನ್ನು ನಾನ್-ಸೆಲ್ಫ್ ಪೆಪ್ಟೈಡ್ ಆಂಟಿಜೆನ್‌ಗಳು ಅಥವಾ ನಿಯೋ ಆಂಟಿಜೆನ್‌ಗಳ ರೂಪದಲ್ಲಿ ಪ್ರಸ್ತುತಪಡಿಸುವ ಸಾಮರ್ಥ್ಯ ಹೊಂದಿವೆ ಎಂಬುದು ಅಧ್ಯಯನದ ವೇಳೆ ಗೊತ್ತಾಗಿದೆ. ಇದು ಟಿ-ಕೋಶಗಳಿಂದ ಗುರುತಿಸುವಿಕೆ ಮತ್ತು ವೈರಸ್ಗಳ ನಿರ್ಮೂಲನೆಗೆ ಸೂಕ್ಷ್ಮವಾಗಿ ಕಾರ್ಯ ಚಟುವಟಿಕೆ ಮಾಡುತ್ತದೆ. ಪ್ರತಿರಕ್ಷಣಾ ಕೋಶಗಳ ರೂಪವನ್ನು ಗುರುತಿಸಿದ ನಂತರ ಗೆಡ್ಡೆಯ ಕೋಶಗಳನ್ನು ಕೊಲ್ಲುತ್ತದೆ. ಇದನ್ನೇ ನಿಯೋ ಆಂಟಿಜೆನ್ಸ್ ಎಂದು ಕರೆಯಲಾಗಿದೆ ಎಂದು ಲೇಖಕ ಮರ್ಲೀನ್ ಬೌವಿಯರ್ ಹೇಳಿದರು.
ಇದನ್ನೂ ಓದಿ:ಶ್ವಾಸಕೋಶದ ಕ್ಯಾನ್ಸರ್: ರೋಗ ಲಕ್ಷಣಗಳೇನು? ಪರಿಹಾರವೇನು? ಸಂಪೂರ್ಣ ವಿವರ
ಕಾಲೇಜ್ ಆಫ್ ಮೆಡಿಸಿನ್‌ನಲ್ಲಿ ಮೈಕ್ರೋಬಯಾಲಜಿ ಮತ್ತು ಇಮ್ಯುನೊಲಾಜಿಯ UIC ಪ್ರಾಧ್ಯಾಪಕರಾಗಿ ಬೌವಿಯರ್ ಸೇವೆ ಸಲ್ಲಿಸುತ್ತಿದ್ದಾರೆ. ಟಿ-ಸೆಲ್‌ಗಳಿಗೆ ಗೆಡ್ಡೆಯ ಗೋಚರತೆಯಿಂದಾಗಿ ಟಿ-ಸೆಲ್ ಆಧಾರಿತ ಇಮ್ಯುನೊಥೆರಪಿ ಚಿಕಿತ್ಸೆಯು ಯಶಸ್ವಿಗಿದೆ ಎಂಬುದೇ ಇಲ್ಲಿ ನಿರ್ಣಾಯಕ ಅಂಶ.