ಕರ್ನಾಟಕ

karnataka

ETV Bharat / international

ಎಲಾನ್​ ಮಸ್ಕ್​ ಟ್ವಿಟರ್​ನಿಂದ ಇಬ್ಬರು ಮ್ಯಾನೇಜರ್​ಗಳು ವಜಾ - ಸಿಇಒ ಪರಾಗ್ ಅಗರವಾಲ್ ಸರಣಿ ಟ್ವೀಟ್​

ಟ್ವಿಟರ್ ಜನರಲ್ ಮ್ಯಾನೇಜರ್ ಕೇವೊನ್ ಬೇಕ್‌ಪೂರ್ 7 ವರ್ಷಗಳ ನಂತರ ನಿರ್ಗಮಿಸುತ್ತಿದ್ದಾರೆ. ಸಂಸ್ಥೆಯ ಆದಾಯ ಮತ್ತು ಉತ್ಪನ್ನದ ಪ್ರಮುಖರಾದ ಬ್ರೂಸ್ ಫಾಲ್ಕ್​ರನ್ನು ಸಹ ವಜಾಗೊಳಿಸಲಾಗಿದೆ.

Managers fired from Twitter  internal turmoil amid Musks buyout  Twitter pausing most hiring  ಇಬ್ಬರನ್ನು ವಜಾಗೊಳಿಸಿದ ಟ್ವಿಟ್ಟರ್​ ಟ್ವಿಟ್ಟರ್ ಜನರಲ್ ಮ್ಯಾನೇಜರ್ ಕೇವೊನ್ ಬೇಕ್‌ಪೂರ್ ವಜಾ  ಸಿಇಒ ಪರಾಗ್ ಅಗರವಾಲ್ ಸರಣಿ ಟ್ವೀಟ್​ ಟ್ವಿಟರ್‌ನ ಆದಾಯ ಮತ್ತು ಉತ್ಪನ್ನದ ಪ್ರಮುಖರಾದ ಬ್ರೂಸ್ ಫಾಲ್ಕ್​ ವಜಾ
ಎಲಾನ್​ ಮಸ್ಕ್​ ಟ್ವಿಟ್ಟರ್​ನಿಂದ ಇಬ್ಬರು ಮ್ಯಾನೇಜರ್​ಗಳು ವಜಾ

By

Published : May 13, 2022, 11:40 AM IST

ಟ್ವಿಟರ್ ಗುರುವಾರ ತನ್ನ ಇಬ್ಬರು ಉನ್ನತ ವ್ಯವಸ್ಥಾಪಕರನ್ನು ಕೆಲಸದಿಂದ ವಜಾಗೊಳಿಸಿದೆ. ಇದು ಟೆಸ್ಲಾ ಬಿಲಿಯನೇರ್ ಎಲೋನ್ ಮಸ್ಕ್ ಕಂಪನಿಯ ಯೋಜಿತ ಖರೀದಿಯ ಮಧ್ಯೆ ಇತ್ತೀಚಿನ ಮಹತ್ವದ ನಡೆಯಾಗಿದೆ. ಟ್ವಿಟರ್ ಜನರಲ್ ಮ್ಯಾನೇಜರ್ ಕೇವೊನ್ ಬೇಕ್‌ಪೂರ್ 7 ವರ್ಷಗಳ ನಂತರ ​ಕಂಪನಿಯಿಂದ ನಿರ್ಗಮಿಸುತ್ತಿದ್ದಾರೆ.

ಗುರುವಾರ ಮಾಡಿದ ಸರಣಿ ಟ್ವೀಟ್‌ಗಳಲ್ಲಿ, ಸಿಇಒ ಪರಾಗ್ ಅಗರವಾಲ್ ಅವರು ತಂಡವನ್ನು ಬೇರೆ ದಿಕ್ಕಿನಲ್ಲಿ ಕೊಂಡೊಯ್ಯಲು ಬಯಸುತ್ತಾರೆ ಎಂದು ನನಗೆ ತಿಳಿಸಿ, ನನ್ನನ್ನು ತೊರೆಯುವಂತೆ ಕೇಳಿಕೊಂಡರು ಎಂದು ಬೇಕ್‌ಪೂರ್ ಟ್ವೀಟ್​ ಮಾಡಿದ್ದಾರೆ. ಟ್ವಿಟರ್‌ನ ಆದಾಯ ಮತ್ತು ಉತ್ಪನ್ನದ ಪ್ರಮುಖರಾದ ಬ್ರೂಸ್ ಫಾಲ್ಕ್​ರನ್ನು ಸಹ ವಜಾಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂಓದಿ:2007ರಲ್ಲಿ ತಾಜ್‌ ಮಹಲ್‌ ನೋಡಿದ್ದೆ, ಅದು ನಿಜಕ್ಕೂ ವಿಶ್ವದ ಅದ್ಭುತ: ಎಲಾನ್‌ ಮಸ್ಕ್‌

ABOUT THE AUTHOR

...view details