ಲಂಡನ್: ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ತಮ್ಮ ತಾಯಿ ರಾಣಿ ಎಲಿಜಬೆತ್ II ನಿಧನರಾದ ಬಳಿಕ ಬ್ರಿಟಿಷ್ ಸಿಂಹಾಸನಕ್ಕೇರಿದ್ದ ಕಿಂಗ್ ಚಾರ್ಲ್ಸ್ III ಅವರಿಗೆ ಲಂಡನ್ ನ ವೆಸ್ಟ್ಮಿನ್ಸ್ಟರ್ ಅಬ್ಬೆಯಲ್ಲಿ ನಡೆಯುವ ಸಮಾರಂಭದಲ್ಲಿ ಔಪಚಾರಿಕವಾಗಿ ಪಟ್ಟಾಭಿಷೇಕ ನಡೆಯಲಿದೆ. 70 ವರ್ಷಗಳ ಹಿಂದೆ ಕಿಂಗ್ ಚಾರ್ಲ್ಸ್ III ತಾಯಿ ರಾಣಿ ಎಲಿಜಬೆತ್ II ಪಟ್ಟಾಭಿಷೇಕಗೊಂಡಾಗ ಬ್ರಿಟಿಷ್ ಸಾಮ್ರಾಜ್ಯ ಕೊನೆಯ ಬಾರಿಗೆ ಸಾಕ್ಷಿಯಾಗಿತ್ತು.
ಕಿಂಗ್ ಚಾರ್ಲ್ಸ್ ಪಟ್ಟಾಭಿಷೇಕದ ಸಂಪೂರ್ಣ ವಿವರ ಇಲ್ಲಿದೆ:
ಗೋಲ್ಡ್ ಕೋಚ್:ಶನಿವಾರ ಬೆಳಗ್ಗೆ, ಕಿಂಗ್ ಚಾರ್ಲ್ಸ್ ಹಾಗೂ ರಾಣಿ ಬಕಿಂಗ್ ಹ್ಯಾಮ್ ಅರಮನೆಯಿಂದ ಅಬ್ಬೆಗೆ ರಾಣಿ ಎಲಿಜಬೆತ್ II ಅವರಿಗಾಗಿ 2012 ರಲ್ಲಿ ಅವರ ಆಳ್ವಿಕೆಯ 60ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ರಚಿಸಲಾದ ಡೈಮಂಡ್ ಜುಬಿಲಿ ಸ್ಟೇಟ್ ಕೋಚ್‌ನಲ್ಲಿ ತೆರಳಲಿದ್ದಾರೆ. ಈ ಕುದುರೆ ಸಾರೋಟು ಹವಾನಿಯಂತ್ರಿತವಾಗಿದ್ದು, ಶಾಕ್ ಅಬ್ಸಾರ್ಬರ್‌ಗಳನ್ನು ಒಳಗೊಂಡಂತೆ ದ್ವಿಮುಖ ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲು ಆರಾಮದಾಯಕವಾಗಿದೆ. ಕಡಿಮೆ ಆರಾಮದಾಯಕ ರಾಯಲ್ ಕ್ಯಾರೇಜ್, ಪುರಾತನ ಗೋಲ್ಡ್ ಸ್ಟೇಟ್ ಕೋಚ್ ಅನ್ನು ಅಬ್ಬೆಯಿಂದ ಅರಮನೆಗೆ ಹಿಂತಿರುಗುವ ಪ್ರಯಾಣಕ್ಕಾಗಿ ಬಳಸಲಾಗುತ್ತದೆ. ಗೋಲ್ಡ್ ಸ್ಟೇಟ್ ಕೋಚ್ ಅನ್ನು ಜೂನ್ 2022ರಲ್ಲಿ ಕ್ವೀನ್ ಎಲಿಜಬೆತ್ II ರ ಪ್ಲಾಟಿನಂ ಜುಬಿಲಿಯಲ್ಲಿ ಕೊನೆಯ ಬಾರಿಗೆ ಲಂಡನ್ ಜನತೆ ಕಣ್ತುಂಬಿಸಿಕೊಂಡಿದ್ದರು.
ಆಭರಣಗಳು: ಕಿರೀಟ ಪಟ್ಟಾಭಿಷೇಕದ ಕೇಂದ್ರ ಬಿಂದುವಾಗಿದೆ. ಹಾಗೂ ಇತರ ಆಭರಣಗಳು ಸಮಾರಂಭದಲ್ಲಿ ಗಮನ ಸೆಳೆಯಲಿವೆ. ಸೇಂಟ್ ಎಡ್ವರ್ಡ್ಸ್ ಕಿರೀಟವನ್ನು ಅವರ ತಲೆಯ ಮೇಲೆ ಇರಿಸಿ, ಚಾರ್ಲ್ಸ್ ರಾಜನ ಪಟ್ಟಾಭಿಷೇಕ ಮಾಡಲಾಗುತ್ತದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಇಂಗ್ಲೆಂಡ್ ಕಾತರವಾಗಿರುತ್ತದೆ. ರಾಣಿಯ ಪಟ್ಟಾಭಿಷೇಕ: ರಾಣಿಯ ಮೇಲೆ ಪವಿತ್ರ ತೈಲವನ್ನು ಸಿಂಪಡಿಸಲಾಗುತ್ತದೆ. ಅದೇ ವೇಳೆ ಬಟ್ಟೆಯ ಪರದೆಯ ಹಿಂದೆ ಚಾರ್ಲ್ಸ್ ಅವರಿಗೆ ಪವಿತ್ರ ತೈಲದಿಂದ ಅಭಿಷೇಕ ಮಾಡಲಾಗುತ್ತದೆ.