ಕರ್ನಾಟಕ

karnataka

ಭಾರತ-ಅಮೆರಿಕ ರಕ್ಷಣಾ ಒಪ್ಪಂದಗಳು ಮಹತ್ವಾಕಾಂಕ್ಷೆಯ ಹಾದಿಯಲ್ಲಿವೆ : ಅಮೆರಿಕ ರಕ್ಷಣಾ ಇಲಾಖೆ

By

Published : Apr 8, 2022, 10:58 AM IST

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಸಂಬಂಧವು ಸಾಮಾನ್ಯ ಮೌಲ್ಯಗಳು ಮತ್ತು ಚೇತರಿಸಿಕೊಳ್ಳುವ ಪ್ರಜಾಪ್ರಭುತ್ವ ಸಂಸ್ಥೆಗಳ ಅಡಿಪಾಯದ ಮೇಲೆ ನಿರ್ಮಿಸಲ್ಪಟ್ಟಿದೆ. ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವ, ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಎರಡೂ ರಾಷ್ಟ್ರಗಳು ಮಾಡುತ್ತಿವೆ..

ಭಾರತ-ಅಮೆರಿಕ ರಕ್ಷಣಾ ಒಪ್ಪಂದಗಳು ಮಹತ್ವಾಕಾಂಕ್ಷೆಯ ಹಾದಿಯಲ್ಲಿವೆ: ಅಮೆರಿಕ ರಕ್ಷಣಾ ಇಲಾಖೆ

ವಾಷಿಂಗ್ಟನ್, ಅಮೆರಿಕ :ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ರಕ್ಷಣಾ ಪಾಲುದಾರಿಕೆಯಲ್ಲಿನ ಸಹಕಾರವನ್ನು ಮುಂದುವರೆಸುತ್ತವೆ. ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶಕ್ಕಾಗಿ ಮೌಲ್ಯಗಳು ಮತ್ತು ಉದ್ದೇಶವನ್ನು ಹಂಚಿಕೊಳ್ಳುತ್ತವೆ ಎಂದು ಅಮೆರಿಕ ರಕ್ಷಣಾ ಸಚಿವಾಲಯ ಗುರುವಾರ ಹೇಳಿದೆ. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಅಮೆರಿಕ ತೆರಳುವ ಹಿನ್ನೆಲೆಯಲ್ಲಿ ಅಮೆರಿಕ ರಕ್ಷಣಾ ಸಚಿವಾಲಯ ಈ ಪ್ರತಿಕ್ರಿಯೆ ನೀಡಿದೆ.

ಏಪ್ರಿಲ್ 11ರಂದು ರಾಜನಾಥ್ ಸಿಂಗ್ ಮತ್ತು ಎಸ್ ಜೈಶಂಕರ್ ಅವರು ಅಮೆರಿಕಕ್ಕೆ ತೆರಳಲಿದ್ದು, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರ ಜೊತೆಗೆ 2+2 ಮಾತುಕತೆ ನಡೆಸಲಿದ್ದಾರೆ. 2018ರಿಂದ ಈ ರೀತಿಯ ಮಾತುಕತೆಗಳು ನಡೆಯುತ್ತಿವೆ.

ಅಮೆರಿಕ ಮತ್ತು ಭಾರತ ಸುಧಾರಿತ, ಸಮಗ್ರ ರಕ್ಷಣಾ ಪಾಲುದಾರಿಕೆಯನ್ನು ನಿರ್ಮಿಸಲು ಕೆಲಸವನ್ನು ಮಾಡುತ್ತಿವೆ. ಈಗ 2+2 ಮಾತುಕತೆ 21ನೇ ಶತಮಾನದ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದೆ ಎಂದು ಅಮೆರಿಕ ರಕ್ಷಣಾ ಸಚಿವಾಲಯ ಹೇಳಿದೆ. ಈ ವರ್ಷದ 2+2 ಸಚಿವರ ಮಾತುಕತೆ ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ, ಹವಾಮಾನ, ಸಾರ್ವಜನಿಕ ಆರೋಗ್ಯ ಮುಂತಾದವುಗಳ ಬಗ್ಗೆ ಚರ್ಚಿಸಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಅಮೆರಿಕ ವಿದೇಶಾಂಗ ಇಲಾಖೆಯ ಪ್ರಕಾರ ಅಮೆರಿಕ ಮತ್ತು ಭಾರತದ ರಾಜತಾಂತ್ರಿಕ ಸಂಬಂಧಕ್ಕೆ 75 ವರ್ಷ ಸಂದಿದೆ. ಮುಕ್ತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶಕ್ಕಾಗಿ ಪಾಲುದಾರಿಕೆಯ ಜೊತೆಗೆ ಹವಾಮಾನ ಕ್ರಮ ಮತ್ತು ಸಾರ್ವಜನಿಕ ಆರೋಗ್ಯ ಸಹಕಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಸಂಬಂಧವು ಸಾಮಾನ್ಯ ಮೌಲ್ಯಗಳು ಮತ್ತು ಚೇತರಿಸಿಕೊಳ್ಳುವ ಪ್ರಜಾಪ್ರಭುತ್ವ ಸಂಸ್ಥೆಗಳ ಅಡಿಪಾಯದ ಮೇಲೆ ನಿರ್ಮಿಸಲ್ಪಟ್ಟಿದೆ. ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವ, ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಎರಡೂ ರಾಷ್ಟ್ರಗಳು ಮಾಡುತ್ತಿವೆ.

ಇದನ್ನೂ ಓದಿ:ಇಸ್ರೇಲ್​ನಲ್ಲಿ ಭಯೋತ್ಪಾದನಾ ದಾಳಿ : ಇಬ್ಬರು ಮೃತ, 8 ಮಂದಿಗೆ ಗಾಯ

ABOUT THE AUTHOR

...view details