ಕರ್ನಾಟಕ

karnataka

ETV Bharat / international

ಫ್ಲೋರಿಡಾದ ಗಲ್ಫ್ ಕರಾವಳಿಗೆ ಅಪ್ಪಳಿಸಿದ ಇಡಾಲಿಯಾ ಚಂಡಮಾರುತ: ಜಾರ್ಜಿಯಾ, ಸೌತ್ ಕೆರೊಲಿನಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ..

ಇಡಾಲಿಯಾ ಚಂಡಮಾರುತವು ಫ್ಲೋರಿಡಾದ ಗಲ್ಫ್ ಕರಾವಳಿಗೆ ಅಪ್ಪಳಿಸಿದೆ. ಚಂಡಮಾರುತದ ತೀವ್ರತೆ ಹಿನ್ನೆಲೆ ಜಾರ್ಜಿಯಾ, ಸೌತ್ ಕೆರೊಲಿನಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

Hurricane Idalia
ಫ್ಲೋರಿಡಾದ ಗಲ್ಫ್ ಕರಾವಳಿಗೆ ಅಪ್ಪಳಿಸಿದ ಇಡಾಲಿಯಾ ಚಂಡಮಾರುತ: ಜಾರ್ಜಿಯಾ, ಸೌತ್ ಕೆರೊಲಿನಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ...

By ETV Bharat Karnataka Team

Published : Aug 30, 2023, 7:14 AM IST

Updated : Aug 30, 2023, 10:01 AM IST

ಸೆಡರ್ ಕೀ (ಅಮೆರಿಕ):ಇಡಾಲಿಯಾ ಚಂಡಮಾರುತವು ಮಂಗಳವಾರ 100 ಎಂಪಿಎಚ್ (155 ಕಿಮೀ) ವೇಗವಾಗಿ ಫ್ಲೋರಿಡಾದ ಗಲ್ಫ್ ಕರಾವಳಿಯ ಕಡೆಗೆ ನುಗ್ಗಿತು. ಮಿಯಾಮಿಯ ರಾಷ್ಟ್ರೀಯ ಚಂಡಮಾರುತ ಕೇಂದ್ರದ ಹಾವಾಮಾನ ಮುನ್ಸೂಚಕರ ಪ್ರಕಾರ, ಮಂಗಳವಾರ ರಾತ್ರಿ ಇಡಾಲಿಯಾ ಬಿಗ್ ಬೆಂಡ್ ಅನ್ನು ತಲುಪುವ ಮೊದಲು ಇದು ದೊಡ್ಡ ಚಂಡಮಾರುತವಾಗುವ ನಿರೀಕ್ಷೆಯಿದೆ. ಫ್ಲೋರಿಡಾ ಪ್ಯಾನ್‌ಹ್ಯಾಂಡಲ್ ಪರ್ಯಾಯ ದ್ವೀಪಕ್ಕೆ ವಕ್ರವಾಗಿ ಚಲಿಸಲಿದೆ. ಮತ್ತು ಬುಧವಾರ ದಕ್ಷಿಣ ಜಾರ್ಜಿಯಾಕ್ಕೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ.

ನಿವಾಸಿಗಳ ಸ್ಥಳಾಂತರಕ್ಕೆ ಎಚ್ಚರಿಕೆ:ಹೆಚ್ಚಿನ ಗಾಳಿ ಮತ್ತು ವಿನಾಶಕಾರಿ ಪ್ರವಾಹದಿಂದ ತಪ್ಪಿಸಿಕೊಳ್ಳಲು ಗಲ್ಫ್ ಕರಾವಳಿ ಉದ್ದಕ್ಕೂ ಸೂಕ್ಷ್ಮ ಪ್ರದೇಶಗಳ ನಿವಾಸಿಗಳ ಸ್ಥಳಾಂತರಕ್ಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕಳೆದ ವರ್ಷದ ಚಂಡಮಾರುತ ಇಯಾನ್‌ನಿಂದ ಹಾನಿಗೊಳಗಾದ ರಾಜ್ಯಕ್ಕೆ ಚಂಡಮಾರುತವು ದೊಡ್ಡ ಹೊಡೆತ ನೀಡುವ ಸಾಧ್ಯತೆ ಹೆಚ್ಚಿದೆ. ತಲ್ಲಹಸ್ಸಿಯ ರಾಷ್ಟ್ರೀಯ ಹವಾಮಾನ ಇಲಾಖೆಯು ಇಡಾಲಿಯಾವನ್ನು "ಅಭೂತಪೂರ್ವ ಘಟನೆ" ಎಂದು ಕರೆದಿದೆ. ಈ ಚಂಡಮಾರುತವು, ಮಂಗಳವಾರ ಸಂಜೆ 5 ಗಂಟೆಗೆ ಇಡಾಲಿಯಾ ಟ್ಯಾಂಪಾದಿಂದ ನೈಋತ್ಯಕ್ಕೆ 310 ಕಿಲೋಮೀಟರ್ ದೂರದಲ್ಲಿತ್ತು. ಇದು ಉತ್ತರಕ್ಕೆ 26 ಕಿ.ಮೀ. ವೇಗದಲ್ಲಿ ಚಲಿಸುತ್ತಿತ್ತು ಎಂದು ರಾಷ್ಟ್ರೀಯ ಚಂಡಮಾರುತ ಕೇಂದ್ರ ತಿಳಿಸಿದೆ.

ಸೀಡರ್ ಕೀ ದ್ವೀಪದಲ್ಲಿ, ಕಮಿಷನರ್ ಸ್ಯೂ ಕಾಲ್ಸನ್ ಸಿಟಿ ಹಾಲ್‌ನಲ್ಲಿ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಸ್ಥಳಾಂತರಿಸಲು ಇತರ ನಗರ ಅಧಿಕಾರಿಗಳೊಂದಿಗೆ ಕೈಜೋಡಿಸಿದರು. ಬಿಗ್ ಬೆಂಡ್ ಪ್ರದೇಶದ ಕರಾವಳಿಯ ಸಮೀಪವಿರುವ ದ್ವೀಪದಿಂದ ಸುಮಾರು 900 ನಿವಾಸಿಗಳನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ. ಚಂಡಮಾರುತದ ಉಲ್ಬಣವು 4.5 ಮೀಟರ್‌ಗಳಷ್ಟು ಹೆಚ್ಚಾಗಬಹುದು ಎಂದು ರಾಜ್ಯ ಸೈನಿಕರು ಮನೆ ಮನೆಗೆ ತೆರಳಿ ನಿವಾಸಿಗಳಿಗೆ ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಗಾರ್ಡ್ ಪಡೆಗಳು ಸಕ್ರಿಯ:ಅಪಾಯದ ಪ್ರದೇಶದಿಂದ ಹೆದ್ದಾರಿಗಳಲ್ಲಿ ಟೋಲ್‌ಗಳನ್ನು ವಸೂಲಿ ಬಂದ್​ ಮಾಡಲಾಗಿದೆ. ಜೊತೆಗೆ ಆಶ್ರಯವನ್ನು ತೆರೆಯಲಾಗಿದೆ. ಇನ್ನೂ ಹಲವು ಜನರನ್ನು ಸ್ಥಳಾಂತರಿಸಲು ಹೋಟೆಲ್‌ಗಳು ಸಿದ್ಧವಾಗಿವೆ. ಚಂಡಮಾರುತದ ಹಿನ್ನೆಲೆಯಲ್ಲಿ 30,000ಕ್ಕೂ ಹೆಚ್ಚು ಯುಟಿಲಿಟಿ ಕಾರ್ಮಿಕರು ಸೇರಿದ್ದಾರೆ. ಸುಮಾರು 5,500 ರಾಷ್ಟ್ರೀಯ ಗಾರ್ಡ್ ಪಡೆಗಳ ಸಿಬ್ಬಂದಿ ಸಕ್ರಿಯವಾಗಿದ್ದಾರೆ.

ಟ್ಯಾಂಪಾದ ವಾಯುವ್ಯದಲ್ಲಿರುವ ಕರಾವಳಿ ಸಮುದಾಯವಾದ ಟಾರ್ಪನ್ ಸ್ಪ್ರಿಂಗ್ಸ್‌ನಲ್ಲಿ, 2.1 ಮೀಟರ್ ಚಂಡಮಾರುತದ ಉಲ್ಬಣವಾಗುವ ಆತಂಕದಿಂದ 60 ರೋಗಿಗಳನ್ನು ಆಸ್ಪತ್ರೆಯಿಂದ ಸ್ಥಳಾಂತರಿಸಲಾಯಿತು. "ನೀವು ರಾಜ್ಯವನ್ನು ತೊರೆಯಬೇಕಾಗಿಲ್ಲ. ನೀವು ನೂರಾರು ಮೈಲಿಗಳನ್ನು ಓಡಿಸಬೇಕಾಗಿಲ್ಲ. ನೀವು ಸುರಕ್ಷಿತವಾದ ಎತ್ತರದ ನೆಲಕ್ಕೆ ಹೋಗಬೇಕು. ಚಂಡಮಾರುತ ಅಬ್ಬರ ಕಡಿಮೆಯಾದ ನಂತರ ನಿಮ್ಮ ಮನೆಗೆ ಹಿಂತಿರುಗಿ" ಎಂದು ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಮಂಗಳವಾರ ಬೆಳಗ್ಗೆ ರಾಜ್ಯದ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ ಹೇಳಿದರು.

ತುರ್ತು ಪರಿಸ್ಥಿತಿ ಘೋಷಣೆ:ಕ್ಲಿಯರ್‌ವಾಟರ್ ಬೀಚ್ ಸೇರಿದಂತೆ ಫ್ಲೋರಿಡಾ ಕೀಸ್ ಮತ್ತು ಫ್ಲೋರಿಡಾದ ನೈಋತ್ಯ ಕರಾವಳಿಯಲ್ಲಿ ಮಂಗಳವಾರ ಮಧ್ಯಾಹ್ನ ಇಡಾಲಿಯಾದ ಎಫೆಕ್ಟ್​ ಕಂಡುಬಂದಿದೆ. ಬಿಗ್ ಬೆಂಡ್ ಪ್ರದೇಶದ ಪ್ರವೇಶದ ನಂತರ, ಇಡಾಲಿಯಾ ಚಂಡಮಾರುತ ಫ್ಲೋರಿಡಾ ಪರ್ಯಾಯ ದ್ವೀಪವನ್ನು ದಾಟಿ, ದಕ್ಷಿಣ ಜಾರ್ಜಿಯಾ ಮತ್ತು ಕೆರೊಲಿನಾಸ್ ಪ್ರದೇಶಕ್ಕೆ ಗುರುವಾರ ತಲುಪಲಿದೆ. ಜಾರ್ಜಿಯಾ ಗವರ್ನರ್ ಬ್ರಿಯಾನ್ ಕೆಂಪ್ ಮತ್ತು ಸೌತ್ ಕೆರೊಲಿನಾ ಗವರ್ನರ್ ಹೆನ್ರಿ ಮ್ಯಾಕ್ ಮಾಸ್ಟರ್ ಇಬ್ಬರೂ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ನೂರಾರು ರಾಷ್ಟ್ರೀಯ ಗಾರ್ಡ್ ಪಡೆಗಳು ಸೇರಿದಂತೆ ರಾಜ್ಯದ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಇಡಾಲಿಯಾದ ಭಾರಿ ಮಳೆಯೊಂದಿಗೆ ಕ್ಯೂಬಾವನ್ನು ತತ್ತರವಾಗಿದೆ. ವಿಶೇಷವಾಗಿ ದ್ವೀಪದ ಪಶ್ಚಿಮ ಭಾಗದಲ್ಲಿ, ತಂಬಾಕು-ಉತ್ಪಾದಿಸುವ ಪ್ರಾಂತ್ಯದ ಪಿನಾರ್ ಡೆಲ್ ರಿಯೊ ಚಂಡಮಾರುತದಿಂದ ಚೇತರಿಸಿಕೊಳ್ಳುತ್ತಿದೆ. ಈ ಭಾಗದಲ್ಲಿ 10 ಸೆಂಟಿ ಮೀಟರ್‌ಗಳಷ್ಟು ಮಳೆ ಬಿದ್ದಿದ್ದರಿಂದ 10,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಯಿತು. ಕೆಲವು ಜನರ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಜೊತೆಗೆ ಆಶ್ರಯ ಪಡೆದರು. ಈ ಪ್ರಾಂತ್ಯದ ಅರ್ಧಕ್ಕಿಂತ ಹೆಚ್ಚು ಭಾಗದಲ್ಲಿ ವಿದ್ಯುತ್ ಕಡಿತಗೊಂಡಿದೆ. 84 ವರ್ಷಗಳ ನಂತರ ಕ್ಯಾಲಿಫೋರ್ನಿಯಾವನ್ನು ಅಪ್ಪಳಿಸಿದ ಮೊದಲ ಉಷ್ಣವಲಯದ ಚಂಡಮಾರುತ ಇದಾಗಿದೆ. ಇದು ವರ್ಮೊಂಟ್‌ನಲ್ಲಿ ವಿನಾಶಕಾರಿ ಪ್ರವಾಹವನ್ನು ಉಂಟುಮಾಡಿದೆ. (ಎಪಿ)

ಇದನ್ನೂ ಓದಿ:ಇಂಡೋನೇಷ್ಯಾದ ಬಾಲಿ, ಜಾವಾ ದ್ವೀಪಗಳಲ್ಲಿ ಪ್ರಬಲ ಭೂಕಂಪ: ಯಾವುದೇ ಸಾವು- ನೋವುಗಳು ವರದಿಯಾಗಿಲ್ಲ

Last Updated : Aug 30, 2023, 10:01 AM IST

ABOUT THE AUTHOR

...view details