ಕೋಪನ್ ಹ್ಯಾಗನ್ (ಡೆನ್ಮಾರ್ಕ್):ಅಕ್ಟೋಬರ್ ಆರಂಭ ಎಂದರೆ ನೊಬೆಲ್ ಪ್ರಶಸ್ತಿಯ ಅವಧಿ ಆರಂಭವಾಯಿತು ಎಂದರ್ಥ. ಈ ತಿಂಗಳಿನ ಆರು ದಿನಗಳಲ್ಲಿ ಆರು ನೊಬೆಲ್ ಬಹುಮಾನಗಳನ್ನು ಘೋಷಿಸಲಾಗುತ್ತದೆ. ಪ್ರಪಂಚದಾದ್ಯಂತದ ವಿಜ್ಞಾನಿಗಳು, ಬರಹಗಾರರು, ಅರ್ಥಶಾಸ್ತ್ರಜ್ಞರು ಮತ್ತು ಮಾನವ ಹಕ್ಕುಗಳ ನಾಯಕರನ್ನು ವಿಶ್ವದ ಅತ್ಯಂತ ಗಣ್ಯರ ಪಟ್ಟಿಗೆ ಈ ಅವಧಿಯಲ್ಲಿ ಸೇರಿಸಲಾಗುತ್ತದೆ. ಈ ವರ್ಷದ ನೊಬೆಲ್ ಸೀಸನ್ ಸೋಮವಾರದಂದು ವೈದ್ಯಕೀಯ ಕ್ಷೇತ್ರದ ಪ್ರಶಸ್ತಿಯೊಂದಿಗೆ ಪ್ರಾರಂಭವಾಗಲಿದೆ. ನಂತರ ಮಂಗಳವಾರ ಭೌತಶಾಸ್ತ್ರ, ಬುಧವಾರ ರಸಾಯನಶಾಸ್ತ್ರ ಮತ್ತು ಗುರುವಾರ ಸಾಹಿತ್ಯ ಕ್ಷೇತ್ರದ ಪ್ರಶಸ್ತಿಗಳು ಪ್ರಕಟವಾಗಲಿವೆ.
2022 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಮತ್ತು ಅರ್ಥಶಾಸ್ತ್ರ ಪ್ರಶಸ್ತಿಯನ್ನು ಅಕ್ಟೋಬರ್ 10 ರಂದು ಪ್ರಕಟಿಸಲಾಗುವುದು. ಆಸ್ಕರ್ ಬಹುಮಾನಗಳ ನೀವು ತಿಳಿಯಬೇಕಾದ ಮಹತ್ವದ ಐದು ವಿಷಯಗಳು ಇಲ್ಲಿವೆ
ನೊಬೆಲ್ ಪ್ರಶಸ್ತಿಗಳನ್ನು ಆರಂಭಿಸಿದ್ದು ಯಾರು?: ವೈದ್ಯಕೀಯಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ ಮತ್ತು ಶಾಂತಿಗಾಗಿ ನೀಡಲಾಗುವ ನೊಬೆಲ್ ಬಹುಮಾನಗಳನ್ನು ಶ್ರೀಮಂತ ಸ್ವೀಡಿಷ್ ಕೈಗಾರಿಕೋದ್ಯಮಿ ಮತ್ತು ಡೈನಮೈಟ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯಿಂದ ಸ್ಥಾಪಿಸಲಾಯಿತು. ನೊಬೆಲ್ ಅವರ ಮರಣದ ಐದು ವರ್ಷಗಳ ನಂತರ 1901 ರಲ್ಲಿ ಪ್ರಥಮ ಬಾರಿಗೆ ಪ್ರಶಸ್ತಿಗಳನ್ನು ನೀಡಲಾಗಿತ್ತು. ಪ್ರತಿಯೊಂದು ನೊಬೆಲ್ ಬಹುಮಾನವು 10 ಮಿಲಿಯನ್ ಕ್ರೋನರ್ ಅಂದರೆ ಸುಮಾರು 9 ಲಕ್ಷ ಡಾಲರ್ ಮೌಲ್ಯದ್ದಾಗಿದೆ. ಡಿಪ್ಲೊಮಾ ಪದವಿ ಮತ್ತು ಚಿನ್ನದ ಪದಕದೊಂದಿಗೆ ಡಿಸೆಂಬರ್ 10 ರಂದು ಪ್ರಶಸ್ತಿಯನ್ನು ಹಸ್ತಾಂತರಿಸಲಾತ್ತದೆ. 1896 ರಲ್ಲಿ ನೊಬೆಲ್ ನಿಧನರಾದ ದಿನಾಂಕವಾಗಿದೆ ಡಿಸೆಂಬರ್ 10.
ನೊಬೆಲ್ ಪ್ರಶಸ್ತಿ ಯಾರಿಗೆ ಸಿಗುತ್ತದೆ ಎಂದು ಯಾರಿಗೆ ಗೊತ್ತಿರುತ್ತದೆ?: ನೊಬೆಲ್ ಪ್ರಶಸ್ತಿಗಳನ್ನು ನಿರ್ಧರಿಸಿದ ತೀರ್ಪುಗಾರರು ತಮ್ಮ ನಿರ್ಧಾರಗಳ ಬಗ್ಗೆ ಮುಂದಿನ 50 ವರ್ಷಗಳ ಬಗ್ಗೆ ಎಲ್ಲಿಯೂ ಚರ್ಚಿಸುವಂತಿಲ್ಲ ಎಂದು ನೊಬೆಲ್ ಫೌಂಡೇಶನ್ ಕಾನೂನಿನಲ್ಲಿದೆ. ಆದ್ದರಿಂದ 2022 ರಲ್ಲಿ ತೀರ್ಪುಗಾರರು ತಮ್ಮ ಆಯ್ಕೆಗಳನ್ನು ಹೇಗೆ ಮಾಡಿದ್ದಾರೆ ಮತ್ತು ಅವರ ಪಟ್ಟಿಗಳಲ್ಲಿ ಯಾರ ಹೆಸರಿವೆ ಎಂಬುದು ತಿಳಿಯಲು ಸಮಯ ತೆಗೆದುಕೊಳ್ಳುತ್ತದೆ. ನೊಬೆಲ್ ತೀರ್ಪುಗಾರರು ತಮ್ಮ ನಿರ್ಣಯಗಳ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗದಂತೆ ತುಂಬಾ ಜಾಗರೂಕರಾಗಿರುತ್ತಾರೆ. ಆದರೂ ಕೆಲವೊಮ್ಮೆ ಸಣ್ಣ ಮಾಹಿತಿಗಳು ಬಹಿರಂಗವಾಗುತ್ತವೆ. ಯುರೋಪ್ನಲ್ಲಿರುವ ಬುಕ್ಕಿಗಳು ಕೆಲ ಬಾರಿ ಸಂಭವನೀಯ ವಿಜೇತರ ಹೆಸರಿನ ಮೇಲೆ ಬೆಟ್ಟಿಂಗ್ ಕೂಡ ಮಾಡುತ್ತಾರೆ.