ಲಂಡನ್:ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್-II ತಮ್ಮ 96 ನೇ ವಯಸ್ಸಿನಲ್ಲಿ ಗುರುವಾರ ರಾತ್ರಿ ಸ್ಕಾಟ್ಲೆಂಡ್‌ನ ಅರಮನೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಇಲ್ಲಿನ ಬಲ್‌ಮೋರಾಲ್‌ನಲ್ಲಿ ಅವರು ತೀವ್ರ ವೈದ್ಯಕೀಯ ನಿಗಾದಲ್ಲಿದ್ದರು. ರಾಣಿಯ ಪಾರ್ಥಿವ ಶರೀರವನ್ನು ಇದೀಗ ಬಾಲ್ಮೊರಲ್ ಎಸ್ಟೇಟ್ನಲ್ಲಿ ಇಡಲಾಗಿದೆ. ಇಂದು ಲಂಡನ್ಗೆ ರವಾನಿಸಲಾಗುತ್ತದೆ. ಹಿರಿಯ ಮಗ ಚಾರ್ಲ್ಸ್ ತಕ್ಷಣದಿಂದಲೇ ರಾಜನಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
1. 10 ದಿನ ಶೋಕಾಚರಣೆ: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ ರಾಣಿ ಈ ವಾರದ ಆರಂಭದಲ್ಲಿ ದೇಶದ ಹೊಸ ಪ್ರಧಾನಿ ಲಿಜ್ ಟ್ರಸ್ ನೇಮಕ ಸೇರಿದಂತೆ ತಮ್ಮ ಹಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರು. ಇದೀಗ ಅವರು ಕೊನೆಯುಸಿರೆಳೆದಿದ್ದು ಬ್ರಿಟನ್‌ನಲ್ಲಿ ಮುಂದಿನ 10 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.
1953 ರಿಂದಲೂ ಬ್ರಿಟನ್ ರಾಣಿಯಾಗಿದ್ದು ಏಳು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ತಮ್ಮ ತಂದೆ ಕಿಂಗ್ ಜಾರ್ಜ್ VI ನಿಧನದ ನಂತರ ರಾಣಿ ಪಟ್ಟ ಅಲಂಕರಿಸಿದ್ದ ಇವರು, 1952ರಲ್ಲಿ ಬ್ರಿಟನ್ ಗದ್ದುಗೆ ಏರಿದ್ದರು. ಇವರಿಗೆ ನಾಲ್ವರು ಮಕ್ಕಳಿದ್ದಾರೆ. 8 ಮೊಮ್ಮಕ್ಕಳು ಮತ್ತು 12 ಮರಿ ಮಕ್ಕಳಿದ್ದಾರೆ.
2. ಜಾಗತಿಕ ಮಟ್ಟದ ಪ್ರಭಾವಿ: ಜಾಗತಿಕ ಮಟ್ಟದಲ್ಲಿ ಪ್ರಭಾವಿ ನಾಯಕಿ ಎಂದೇ ರಾಣಿ ಮನ್ನಣೆ ಗಳಿಸಿದ್ದರು. 2ನೇ ವಿಶ್ವಯುದ್ಧ, ಶೀತಲ ಸಮರ, ಕಮ್ಯುನಿಸಂ ಆಡಳಿತ ಪತನ ಮತ್ತು ಅಂತರ್ಜಾಲ ಯುಗಾರಂಭದ ಗುರುತರ ಜಾಗತಿಕ ಬದಲಾವಣೆಗಳಿಗೆ ಇವರು ಸಾಕ್ಷಿಯಾಗಿದ್ದಾರೆ. ರಾಣಿ ಎಲಿಜಬೆತ್ II 1947ರಲ್ಲಿ ಪ್ರಿನ್ಸ್ ಫಿಲಿಪ್, ಡ್ಯೂಕ್ ಆಫ್ ಎಡಿನ್ಬರ್ಗ್ ಅವರನ್ನು ವಿವಾಹವಾಗಿದ್ದರು. ಬ್ರಿಟನ್ ರಾಣಿಯಾಗುವ ಐದು ವರ್ಷಗಳ ಮೊದಲು ಪ್ರಿನ್ಸ್ ಫಿಲಿಪ್ ಏಪ್ರಿಲ್ 9, 2021 ರಂದು 99 ನೇ ವಯಸ್ಸಿನಲ್ಲಿ ನಿಧನರಾಗಿದ್ದರು.