ಕರ್ನಾಟಕ

karnataka

ETV Bharat / international

ಪಶ್ಚಿಮ ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಎರಡು ಭೂಕಂಪಗಳು; 320 ಜನರ ಸಾವು? - earthquakes in Afghanistan

ಅಫ್ಘಾನಿಸ್ತಾನದಲ್ಲಿ ಎರಡೆರಡು ಪ್ರಬಲ ಭೂಕಂಪಗಳು ಸಂಭವಿಸಿ, ನೂರಾರು ಜನರು ಸಾವಿಗೆ ಕಾರಣವಾಗಿದೆ.

ಭೂಕಂಪಗಳು
ಭೂಕಂಪಗಳು

By ETV Bharat Karnataka Team

Published : Oct 7, 2023, 11:06 PM IST

ಇಸ್ಲಾಮಾಬಾದ್:ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತದಿಂದ ನಲುಗಿರುವ ಅಲ್ಲಿನ ಜನರಿಗೆ ಶನಿವಾರ ಸಂಭವಿಸಿದ ಭಾರಿ ಭೂಕಂಪನ ದಿಕ್ಕು ತೋಚದಂತೆ ಮಾಡಿದೆ. ಭೂರಮೆಯ ತಲ್ಲಣದಿಂದ ಕನಿಷ್ಠ 320 ಜನರ ಪ್ರಾಣಪಕ್ಷಿ ಹಾರಿಹೋಗಿದೆ. ಪಶ್ಚಿಮ ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಎರಡು ಭೂಕಂಪಗಳಲ್ಲಿ 320 ಮಂದಿ ಸಾವನ್ನಪ್ಪಿದ್ದರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ದೇಶದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರರು ಮಾಹಿತಿ ನೀಡಿದ್ದಾರೆ. ಹೆರಾತ್‌ನ ಝೆಂಡಾ ಜಾನ್ ಜಿಲ್ಲೆಯ ನಾಲ್ಕು ಗ್ರಾಮಗಳು ಭೂಕಂಪನ ಮತ್ತು ಬಳಿಕ ನಡೆದ ಆಘಾತಗಳಿಂದಾಗಿ ಅಕ್ಷರಶಃ ನಲುಗಿವೆ ವಕ್ತಾರ ಮೊಹಮ್ಮದ್ ಅಬ್ದುಲ್ಲಾ ಜಾನ್ ಹೇಳಿದರು.

ಐದು ಸಣ್ಣ, ದೊಡ್ಡ ಭೂಕಂಪನಗಳು:ವಿಶ್ವಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪಗಳಿಂದ ಮೃತಪಟ್ಟವರ ಸಂಖ್ಯೆ 320 ಕ್ಕೆ ಏರಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿದೆ, ರಿಕ್ಟರ್​ ಮಾಪಕದಲ್ಲಿ 6.3 ತೀವ್ರತೆಯ ಕಂಪನಗಳು ದಾಖಲಾಗಿವೆ. ಹೆರಾತ್ ನಗರದ ವಾಯುವ್ಯಕ್ಕೆ 40 ಕಿಲೋಮೀಟರ್ (24.8 ಮೈಲಿ) ದೂರದಲ್ಲಿ ಭೂಕಂಪನದ ಕೇಂದ್ರಬಿಂದುವಿದೆ ಎಂದು ಅದು ಹೇಳಿದೆ.

5.5 ತೀವ್ರತೆಯ ನಂತರದ ಕಂಪನ ಸಂಭವಿಸಿದೆ. USGS ವೆಬ್‌ಸೈಟ್‌ನಲ್ಲಿನ ನಕ್ಷೆಯು ಪ್ರದೇಶದಲ್ಲಿ ಏಳು ಭೂಕಂಪಗಳನ್ನು ಸೂಚಿಸುತ್ತದೆ. ನಗರದಲ್ಲಿ ಮಧ್ಯಾಹ್ನದ ವೇಳೆಗೆ ಕನಿಷ್ಠ ಐದು ಪ್ರಬಲ ಭೂಕಂಪಗಳು ಸಂಭವಿಸಿವೆ ಎಂದು ಹೆರಾತ್ ನಗರದ ನಿವಾಸಿ ಅಬ್ದುಲ್ ಶಕೋರ್ ಎಂಬುವರು ಹೇಳಿದ್ದಾರೆ.

ಸಂಪರ್ಕ ಕಡಿತ, ಸಂದಿಗ್ಧದಲ್ಲಿ ಜನರು:ಎಲ್ಲಾ ಜನರು ತಮ್ಮ ಮನೆಗಳಿಂದ ಹೊರಗಿದ್ದಾರೆ ಎಂದು ಸಮದಿ ಹೇಳಿದರು. ಮನೆ, ಕಚೇರಿ, ಅಂಗಡಿ ಮುಂಗಟ್ಟುಗಳು ಖಾಲಿಯಾಗಿದ್ದು, ಇನ್ನು ಭೂಕಂಪನದ ಭೀತಿ ಎದುರಾಗಿದೆ. ನನ್ನ ಕುಟುಂಬ ಮತ್ತು ನಾನು ನಮ್ಮ ಮನೆಯೊಳಗೆ ಇದ್ದೆವು, ನಾನು ಭೂಕಂಪವನ್ನು ಅನುಭವಿಸಿದೆ. ಅವರ ಕುಟುಂಬವು ಕೂಗಲು ಪ್ರಾರಂಭಿಸಿತು ಮತ್ತು ಮನೆಯೊಳಗೆ ಮರಳಲು ಹೆದರಿ ಹೊರಗೆ ಓಡಿದರು. ದೂರವಾಣಿ ಸಂಪರ್ಕ ಕಡಿತಗೊಂಡಿದ್ದು, ಪೀಡಿತ ಪ್ರದೇಶಗಳಿಂದ ವಿವರಗಳನ್ನು ಪಡೆಯುವುದು ಕಷ್ಟಕರವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿನ ವಿಡಿಯೋಗಳು ಹೆರಾತ್ ನಗರದಲ್ಲಿ ನೂರಾರು ಜನರು ತಮ್ಮ ಮನೆಗಳು ಮತ್ತು ಕಚೇರಿಗಳ ಹೊರಗೆ ಬೀದಿಗಳಲ್ಲಿ ಇರುವುದು ಕಂಡುಬಂದಿದೆ.

ಹೆರಾತ್ ಪ್ರಾಂತ್ಯವು ಇರಾನ್‌ನ ಗಡಿಯಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಹತ್ತಿರದ ಪ್ರಾಂತ್ಯಗಳಾದ ಫರಾಹ್ ಮತ್ತು ಬದ್ಗಿಸ್‌ನಲ್ಲಿಯೂ ಭೂಕಂಪದ ಅನುಭವವಾಗಿದೆ. ತಾಲಿಬಾನ್ ನಿಂದ ನೇಮಕಗೊಂಡ ಆರ್ಥಿಕ ವ್ಯವಹಾರಗಳ ಉಪಪ್ರಧಾನಿ ಅಬ್ದುಲ್ ಘನಿ ಬರಾದಾರ್ ಅವರು ಹೆರಾತ್ ಮತ್ತು ಬದ್ಘಿಗಳಲ್ಲಿ ಮೃತರು ಮತ್ತು ಗಾಯಗೊಂಡವರಿಗೆ ಸಂತಾಪ ಸೂಚಿಸಿದರು. ಜೂನ್ 2022 ರಲ್ಲಿ, ಪ್ರಬಲ ಭೂಕಂಪವು ಪೂರ್ವ ಅಫ್ಘಾನಿಸ್ತಾನದ ಕಡಿದಾದ, ಪರ್ವತ ಪ್ರದೇಶವನ್ನು ಅಪ್ಪಳಿಸಿತು, ಕಲ್ಲು ಮತ್ತು ಮಣ್ಣಿನ ಇಟ್ಟಿಗೆ ಮನೆಗಳನ್ನು ಚಪ್ಪಟೆಗೊಳಿಸಿತು. ಎರಡು ದಶಕಗಳಲ್ಲಿ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪವಾಗಿದ್ದು, ಕನಿಷ್ಠ 1,000 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 1,500 ಜನರು ಗಾಯಗೊಂಡಿದ್ದಾರೆ.

ಇದನ್ನೂ ಓದಿ:ಇಸ್ರೇಲ್ ಮೇಲೆ ಪ್ಯಾಲೆಸ್ಟೀನ್ ಉಗ್ರಗಾಮಿ ಪಡೆಯ ಹಠಾತ್ ದಾಳಿ.. 'ಯುದ್ಧ' ಘೋಷಿಸಿದ​ ಪ್ರಧಾನಿ ನೆತನ್ಯಾಹು

ABOUT THE AUTHOR

...view details