ಮಾಸ್ಕೋ:ಸಿರಿಯಾ ಯೋಧರ ಮೇಲೆ ನಡೆದ ಟರ್ಕಿಯಿಂದ ನಡೆದ ವೈಮಾನಿಕ ದಾಳಿಯಲ್ಲಿ ಅನೇಕ ಯೋಧರು ಹತರಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ರಷ್ಯಾ ಟರ್ಕಿ ದೇಶಕ್ಕೆ ವಾರ್ನ್ ಮಾಡಿದೆ.
ಸಿರಿಯಾ ಮೇಲೆ ಟರ್ಕಿ ವೈಮಾನಿಕ ದಾಳಿ: ಟರ್ಕಿಗೆ ಎಚ್ಚರಿಕೆ ನೀಡಿದ ರಷ್ಯಾ!
ಸಿರಿಯಾ ಮೇಲೆ ಏಕಾಏಕಿ ದಾಳಿ ನಡೆಸಿರುವ ಟರ್ಕಿ ನಡೆ ವಿರುದ್ದ ವಿಶ್ವವೇ ಹರಿಹಾಯುತ್ತಿದ್ದು, ಇದೀಗ ರಷ್ಯಾ ಕೂಡ ಟರ್ಕಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ.
ಈಶಾನ್ಯ ಸಿರಿಯಾ ಪ್ರಾಂತ್ಯದ ಮೇಲೆ ಟರ್ಕಿ ಏಕಪಕ್ಷೀಯವಾಗಿ ಮಿಲಿಟರಿ ದಾಳಿ ನಡೆಸಿರುವುದಕ್ಕೆ ಭಾರತ ಈಗಾಗಲೇ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಈ ಬೆಳವಣಿಗೆ ಆ ಭಾಗದಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಲಿದೆ ಎಂದಿತ್ತು. ಇದೀಗ ಟರ್ಕಿ ತೆಗೆದುಕೊಂಡಿರುವ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಷ್ಯಾ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಲು ನಾವು ಸಿದ್ದರಿದ್ದೇವೆ ಎಂದಿದೆ.
ಇನ್ನು ಸಿರಿಯಾ ಮೇಲಿನ ದಾಳಿಗಾಗಿ ಇಡೀ ವಿಶ್ವ ಟರ್ಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಪಾಕಿಸ್ತಾನ ಮಾತ್ರ ಒಳ್ಳೆ ಕೆಲಸ ಎಂದು ಟರ್ಕಿ ಬೆನ್ನು ತಟ್ಟಿರುವ ಕೆಲಸ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.