ಕಾಬೂಲ್ :ಅಫ್ಘಾನಿಸ್ತಾನದ ನಂಗರ್ಹರ್ ಪ್ರಾಂತ್ಯದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ 13 ತಾಲಿಬಾನ್ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪ್ರಾಂತೀಯ ಪತ್ರಿಕಾ ಕಚೇರಿ ತಿಳಿಸಿದೆ.
ಹತ್ಯೆಯಾದ ಭಯೋತ್ಪಾದಕರ ಪೈಕಿ, ಇತ್ತೀಚೆಗೆ ಯುಎಸ್ ಮಧ್ಯಸ್ಥಿಕೆಯಲ್ಲಿ ನಡೆದ ಅಫ್ಘಾನ್ ಸರ್ಕಾರ ಮತ್ತು ತಾಲಿಬಾನ್ ಶಾಂತಿ ಒಪ್ಪಂದದಲ್ಲಿ ಬಿಡುಗಡೆಯಾದವನೂ ಸೇರಿದ್ದಾನೆ ಎಂದು ಅಫ್ಘಾನ್ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ ಖಚಿತಪಡಿಸಿದೆ.
ಓದಿ : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ತಿರಂಗಾ ಧ್ವಜ!
ಕಳೆದ ಫೆಬ್ರವರಿಯಲ್ಲಿ, ಕತಾರ್ ರಾಜಧಾನಿ ದೋಹಾದಲ್ಲಿ ತಾಲಿಬಾನ್ ಮತ್ತು ಅಫ್ಘಾನ್ ಸರ್ಕಾರ ನಡುವೆ ಶಾಂತಿ ಒಪ್ಪಂದ ನಡೆದಿತ್ತು. ಅಮೆರಿಕ ಅದರ ಮಧ್ಯಸ್ಥಿಕೆ ವಹಿಸಿತ್ತು. ಶಾಂತಿ ಒಪ್ಪಂದದಲ್ಲಿ ಎರಡೂ ಕಡೆಯ ಬಂಧಿತರನ್ನು ಬಿಡುಗಡೆ ಮಾಡುವ ಬಗ್ಗೆ ಮಾತುಕತೆಯಾಗಿತ್ತು, ಕಾಬೂಲ್ನಿಂದ 5 ಸಾವಿರ ತಾಲಿಬಾನಿಗಳು ಮತ್ತು ತಾಲಿಬಾನಿಗಳ ವಶದಲ್ಲಿರುವ 1 ಸಾವಿರ ಸರ್ಕಾರಿ ಸಿಬ್ಬಂದಿಯನ್ನು ಬಿಡುಗಡೆ ಮಾಡುವುದಾಗಿ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.