ಕರ್ನಾಟಕ

karnataka

ETV Bharat / international

ಧಗಧಗನೇ ಹೊತ್ತಿ ಉರಿದ ನೋಟ್ರೆ ಡಮ್​ನ ವಿಶೇಷತೆ ಏನು? - ಚರ್ಚ್

ಚರ್ಚ್​ಗೆ ಹೊತ್ತಿಕೊಂಡ ಬೆಂಕಿ ನಂದಿಸಲು 400 ಅಗ್ನಿಶಾಮಕ ಸಿಬ್ಬಂದಿ ಹಗಲಿರಳು ಶ್ರಮಿಸಿ, ಇನ್ನುಳಿದ ಭಾಗಕ್ಕೆ ಬೆಂಕಿ ಹರಡದಂತೆ ಹರಸಾಹಸ ಪಡುತ್ತಿದ್ದಾರೆ. 12 ಹಾಗೂ 13ನೇ ಶತಮಾನದಲ್ಲಿ ನೋಟ್ರೆ ಡಮ್​​​ ಕೆಥೆಡ್ರೆಲ್​  ನಿರ್ಮಾಣ ಮಾಡಲಾಗಿತ್ತು.

ನೋಟ್ರೆ ಡಮ್

By

Published : Apr 16, 2019, 4:24 PM IST

ಪ್ಯಾರಿಸ್​: ಕೆಥೆಡ್ರಲ್ ನೋಟ್ರೆ ಡಮ್​... ಸುಮಾರು 850 ವರ್ಷ ಇತಿಹಾಸ ಇರುವ ಅತ್ಯಂತ ಹಳೆಯ ಚರ್ಚ್​. ಫ್ಯಾಷನ್​ ನಗರಿ ಎಂದೇ ಕರೆಯಿಸಿಕೊಳ್ಳುವ ಪ್ಯಾರಿಸ್​ನ ಲ್ಯಾಂಡ್​ ಮಾರ್ಕ್​. ಸೋಮವಾರ ಇಂತಹ ಐತಿಹಾಸಿಕ ಹಾಗೂ ಪ್ರಸಿದ್ಧ ಚರ್ಚ್​ ಬೆಂಕಿಗಾಹುತಿ ಆಗಿತ್ತು.

ಚರ್ಚ್​ಗೆ ಹೊತ್ತಿಕೊಂಡ ಬೆಂಕಿ ನಂದಿಸಲು 400 ಅಗ್ನಿಶಾಮಕ ಸಿಬ್ಬಂದಿ ಹಗಲಿರಳು ಶ್ರಮಿಸಿ, ಇನ್ನುಳಿದ ಭಾಗಕ್ಕೆ ಬೆಂಕಿ ಹರಡದಂತೆ ಹರಸಾಹಸ ಪಡುತ್ತಿದೆ. 12 ಹಾಗೂ 13ನೇ ಶತಮಾನದಲ್ಲಿ ನೋಟ್ರೆ ಡಮ್​​​ ಕೆಥೆಡ್ರೆಲ್​ ನಿರ್ಮಾಣ ಮಾಡಲಾಗಿತ್ತು.1160 ಬಿಶಪ್​​ ಮುರೆಡೆಸುಲ್ಲಿ ಈ ಚರ್ಚ್​ ನಿರ್ಮಾಣ ಆರಂಭಿಸಿದ್ದರು.1160 ರಲ್ಲಿ ಆರಂಭವಾದ ಕಟ್ಟಡ ಕಾಮಗಾರಿ ಮರಿದಿದ್ದು 1260 ರಲ್ಲಿ ಅಂದರೆ ಸುಮಾರು 100 ವರ್ಷಗಳ ಕಾಲ ಈ ಪ್ರತಿಷ್ಠಿತ ಚರ್ಚ್​ ನಿರ್ಮಾಣ ಮಾಡಲಾಗಿತ್ತು.

ಹೊತ್ತಿ ಉರಿದ ನೊಟ್ರೆ ಡಮ್ ಚರ್ಚ್​

ಫ್ರೆಂಚ್​ ಕ್ರಾಂತಿ ವೇಳೆ ಈ ಚರ್ಚ್​ ಭಾರಿ ಸಂಕಷ್ಟಕ್ಕೆ ಸಿಲುಕಿತ್ತು. 1804 ರಲ್ಲಿ ಈ ಚರ್ಚ್​ನ ಅಂಗಳ ನೆಪೋಲಿಯನ್​ ಬೊನ್​ಪಾರ್ಟ್​ ಪಟ್ಟಾಭಿಷೇಕಕ್ಕೆ ಸಾಕ್ಷಿ ಆಯಿತು. 19ನೇ ಶತಮಾನದಲ್ಲಿ ಈ ಚರ್ಚ್​ನ ಗೋಪುರವನ್ನ ನಿರ್ಮಾಣ ಮಾಡಲಾಗಿತ್ತು.

ಚರ್ಚ್​ ವಿಶೇಷತೆಗಳು

ಇದರಲ್ಲಿ ಎರಡು ಗೋಪುರಗಳ ಎತ್ತರ 68 ಮೀಟರ್​​. ಕೆಥೆಡ್ರೆಲ್​ ಸುಮಾರು 10 ಅತಿದೊಡ್ಡ ಗಂಟೆಗಳನ್ನ ಹೊಂದಿದೆ. ಇದರಲ್ಲಿ ಇಮ್ಯಾನುವೆಲ್​​ ಅತ್ಯಂತ ದೊಡ್ಡ ಗಂಟೆ ಎಂಬ ಹಿರಿಮೆ ಹೊಂದಿದೆ. 23 ಟನ್​ ಭಾರ ತೂಗುವ ಈ ಗಂಟೆ ಭಾರಿ ಪ್ರಸಿದ್ಧಿಯನ್ನೂ ಪಡೆದಿದೆ.

ಬೆಂಕಿಗಾಹುತಿಯಾದ ನೋಟ್ರೆ ಡಮ್ ಚರ್ಚ್​

ಪ್ರತಿವರ್ಷ ಇಲ್ಲಿಗೆ ಸುಮಾರು 13 ಮಿಲಿಯನ್​ ಅಂದರೆ 1 ಕೋಟಿ 30 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ.

ABOUT THE AUTHOR

...view details