ಲಂಡನ್:ದಿ ಓವಲ್ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಭಾರತ-ಆಸ್ಟ್ರೇಲಿಯಾ ಪಂದ್ಯ ವೀಕ್ಷಿಸಲು ದೇಶಭ್ರಷ್ಟ ಆರ್ಥಿಕ ಅಪರಾಧಿ ವಿಜಯ್ ಮಲ್ಯ ಆಗಮಿಸಿದ್ದಾರೆ.
ತೆಳು ನೀಲಿ ಬಣ್ಣದ ಸೂಟ್, ಬಿಳಿ ಶರ್ಟ್ ಹಾಗೂ ಕೊರಳಿಗೆ ವಿಐಪಿ ಬ್ಯಾಡ್ಜ್ ಧರಿಸಿ ವಿಜಯ್ ಮಲ್ಯ ಅವರು ಕ್ರೀಡಾಂಗಣ ಪ್ರವೇಶ ದ್ವಾರದಲ್ಲಿ ಸ್ವಯಂ ಸೇವಕರಿಗೆ ಪಂದ್ಯ ವೀಕ್ಷಣೆಯ ಟಿಕೆಟ್ ತೋರಿಸಿ ಒಳ ಪ್ರವೇಶಿಸಿ ಪಂದ್ಯ ವೀಕ್ಷಿಸುತ್ತಿದ್ದಾರೆ.