ಗ್ಲಾಸ್ಗೋ (ಸ್ಕಾಟ್ಲೆಂಡ್): ಜಾಗತಿಕ ತಾಪಮಾನ ಏರಿಕೆ (Climate change summit) ಕುರಿತಂತೆ ನಡೆಯುತ್ತಿರುವ ಗ್ಲಾಸ್ಗೋ ಸಮ್ಮೇಳನವು (COP-26) ನಿಗದಿತ ಸಮಯಕ್ಕಿಂತಲೂ ಹೆಚ್ಚು ಕಾಲದ ಚರ್ಚೆಗೆ ಸಾಕ್ಷಿಯಾಗಿದೆ. ಸುಮಾರು ಸಂಜೆ 6 ಗಂಟೆಗೂ ಹೆಚ್ಚು ಹೊತ್ತು ಸದಸ್ಯರು ತಾಪಮಾನ ಏರಿಕೆ ಕುರಿತ ಚರ್ಚೆಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ತಾಪಮಾನ ಏರಿಕೆ ವಿರುದ್ಧದ ಹೋರಾಟಕ್ಕಾಗಿ ಬಡ ರಾಷ್ಟ್ರಗಳಿಗೆ ನೀಡಲಾಗುವ ಅನುದಾನ ಹಾಗೂ ನೆರವಿನ ಕುರಿತಂತೆ ಸುದೀರ್ಘ ಚರ್ಚೆ ನಡೆದಿದೆ (Over timed summit). ಇದರ ಜೊತೆ ಮುಗಿದು ಹೋಗುವ ಇಂಧನ ಮೂಲಗಳ ಕುರಿತು ಸಹ ಸಂವಾದ ನಡೆದಿದೆ.
ಆದರೆ, ನಿಗದಿಗೂ ಹೆಚ್ಚು ಅವಧಿ ಚರ್ಚೆ ನಡೆದಿರುವುದು ಇದು ಮೊದಲೇನಲ್ಲ. ಈ ಮೊದಲು 2019ರಲ್ಲಿ ಸ್ಪ್ಯಾನಿಷ್ನಲ್ಲಿ ನಡೆದ ಸಮ್ಮೇಳನವೂ ಸಹ ಸಮಯಮೀರಿ ಚರ್ಚೆಗಳು ನಡೆದಿದ್ದವು. ಇದೀಗ ಗ್ಲಾಸ್ಗೋ ಸಮ್ಮೇಳನದಲ್ಲೂ ಸಹ ಸದಸ್ಯರು ಸಂಜೆ ಕಳೆದು ಚರ್ಚೆ ನಡೆಸಿದ್ದಾರೆ.
ಈ ಮೊದಲು ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆ, ಜಾಗತಿಕ ಕನಿಷ್ಠ ಕಾರ್ಪೋರೇಟ್ ತೆರಿಗೆ ದರ, ಕೊವಿಡ್ ಸಾಂಕ್ರಾಮಿಕ ಚೇತರಿಕೆ, ಜಾಗತಿಕ ಅಭಿವೃದ್ಧಿ ಇತ್ಯಾದಿ ವಿಚಾರಗಳನ್ನು ಕುರಿತ ಚರ್ಚೆ ನಡೆದಿದೆ. ಭಾರತದಿಂದ ಪ್ರಧಾನಿ ಮೋದಿ (PM Modi in Glasgow) ಸಹ ಶೃಂಗಸಭೆಯಲ್ಲಿ ಭಾಗಿಯಾಗಿ ಭಾಷಣ (Modi speech in Glasgow summit) ಮಾಡಿದ್ದಾರೆ.
ಓದಿ:ಕೇವಲ 21 ವಾರಕ್ಕೆ ಜನನ.. ವಿಶ್ವದ ಅತ್ಯಂತ ಅಕಾಲಿಕ ಶಿಶು ಎಂಬ ಹೆಗ್ಗಳಿಕೆ!