ಕರ್ನಾಟಕ

karnataka

ETV Bharat / international

ರಾಜಧಾನಿ ಕೀವ್ ಪರಿಸ್ಥಿತಿ ಕಠಿಣವಾಗಿದ್ದು, ನಮ್ಮ ನಿಯಂತ್ರಣದಲ್ಲಿದೆ: ಉಕ್ರೇನ್‌ - ರಷ್ಯಾ ಉಕ್ರೇನ್‌ ಯುದ್ಧ

ಕ್ಷಿಪಣಿ, ರಾಕೆಟ್ ದಾಳಿಗಳಿಂದ ಉಕ್ರೇನ್‌ನ ಪ್ರಮುಖ ನಗರಗಳನ್ನು ರಷ್ಯಾ ಪಡೆಗಳು ಸುತ್ತುವರೆದಿವೆ. ಈ ಆಕ್ರಮಣಕಾರಿ ನಡೆಗೆ ರಷ್ಯಾ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.

Ukraine Says Kyiv Situation Difficult But Under Control
ಕೀವ್ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ. ಆದರೂ ನಿಯಂತ್ರಣದಲ್ಲಿದೆ - ಉಕ್ರೇನ್‌ ಸರ್ಕಾರ

By

Published : Mar 3, 2022, 5:22 PM IST

ಕೀವ್‌(ಉಕ್ರೇನ್): ಉಕ್ರೇನ್‌ ರಾಜಧಾನಿ ಕೀವ್‌ ಪರಿಸ್ಥಿತಿ ತುಂಬಾ ಕಠಿಣವಾಗಿದ್ದು, ನಮ್ಮ ನಿಯಂತ್ರಣದಲ್ಲೇ ಇದೆ ಎಂದು ಅಲ್ಲಿನ ಮೇಯರ್ ವಿಟಾಲಿ ಕ್ಲಿಟೊಸ್ಕಿ ಹೇಳಿದ್ದಾರೆ.

ರಾತ್ರಿ ಸಮಯದಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ರಾತ್ರಿ ನಡೆದ ಹೋರಾಟದಲ್ಲಿ ರಷ್ಯಾದ ಕ್ಷಿಪಣಿಗಳನ್ನು ನಮ್ಮ ಸೇನೆ ಹೊಡೆದುರುಳಿಸಿದೆ ಎಂದು ಅಲ್ಲಿನ ವಾಯುಸೇನೆ ತಿಳಿಸಿದೆ.

ಬೃಹತ್ ಕ್ಷಿಪಣಿ ಮತ್ತು ರಾಕೆಟ್ ದಾಳಿಗಳಿಂದ ಉಕ್ರೇನ್‌ನ ಪ್ರಮುಖ ನಗರಗಳನ್ನು ಸುತ್ತುವರೆದಿರುವ ರಷ್ಯಾದ ಪಡೆಗಳು ನಮ್ಮ ದೇಶ ಮೇಲೆ ಆಕ್ರಮಣ ಮಾಡುತ್ತಿವೆ. ಇದಕ್ಕೆ ರಷ್ಯಾ ಬೆಲೆ ತೆರಬೇಕಾಗುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಪುಟಿನ್‌ ಸರ್ಕಾರ ವಿರುದ್ಧ ಮತ್ತೆ ಗುಡುಗಿದ್ದಾರೆ.

ನಮ್ಮ ಸ್ವಾತಂತ್ರ್ಯವನ್ನು ಹೊರತುಪಡಿಸಿ ನಾವು ಕಳೆದುಕೊಳ್ಳಲು ಏನೂ ಇಲ್ಲ. ಉಕ್ರೇನ್ ತನ್ನ ಅಂತಾರಾಷ್ಟ್ರೀಯ ಮಿತ್ರರಾಷ್ಟ್ರಗಳಿಂದ ದಿನನಿತ್ಯ ಶಸ್ತ್ರಾಸ್ತ್ರಗಳನ್ನು ಪಡೆಯುತ್ತಲೇ ಇದೆ ಎಂದು ತಿಳಿಸಿದ್ದಾರೆ.

ನಾವು ಪ್ರತಿ ಮನೆ, ಪ್ರತಿ ಬೀದಿ, ಪ್ರತಿ ನಗರವನ್ನು ಪುನಃಸ್ಥಾಪಿಸುತ್ತೇವೆ. ನಮ್ಮ ದೇಶದ ವಿರುದ್ಧ, ಪ್ರತಿ ಉಕ್ರೇನಿಗಳ ವಿರುದ್ಧ ನೀವು ಮಾಡಿದ ಎಲ್ಲದಕ್ಕೂ ಬೆಲೆ ತೆರವುವಂತೆ ಮಾಡುತ್ತೇವೆ ಎಂದು ಶಪಥ ಮಾಡಿದ್ದಾರೆ.

ಇದನ್ನೂ ಓದಿ:ರಷ್ಯಾ ಸೈನಿಕರ ತಾಯಂದಿರೇ ಕೀವ್‌ಗೆ ಬಂದು ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ: ಉಕ್ರೇನ್‌

ABOUT THE AUTHOR

...view details