ಚೆರ್ನೋಬಿಲ್ (ಉಕ್ರೇನ್): ಯುದ್ಧ ಪೀಡಿತ ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ (ಎನ್‌ಪಿಪಿ) ಮಾಹಿತಿ ಸಂಪರ್ಕವನ್ನು ಕಳೆದುಕೊಂಡಿದೆ. ರಕ್ಷಣಾ ಮಾನಿಟರಿಂಗ್ ಸಿಸ್ಟಮ್‌ಗಳಿಂದ ಡೇಟಾವನ್ನು ರವಾನಿಸುತ್ತಿಲ್ಲ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ಮಹಾನಿರ್ದೇಶಕ ರಾಫೆಲ್ ಗ್ರಾಸ್ಸಿ ತಿಳಿಸಿದ್ದಾರೆ.
ಚೆರ್ನೋಬಿಲ್ ಅಣು ಸ್ಥಾವರದಲ್ಲಿ ಸ್ಥಾಪಿಸಲಾದ ಸೇಫ್‌ಗಾರ್ಡ್ ಮಾನಿಟರಿಂಗ್ ಸಿಸ್ಟಮ್‌ಗಳಿಂದ ರಿಮೋಟ್ ಡೇಟಾ ಟ್ರಾನ್ಸ್‌ಮಿಷನ್ ಕಳೆದುಹೋಗಿದೆ. ಉಕ್ರೇನ್‌ನ ಇತರ ಸ್ಥಳಗಳಲ್ಲಿನ ರಕ್ಷಣಾ ಮಾನಿಟರಿಂಗ್ ಸಿಸ್ಟಮ್ ಪರಿಸ್ಥಿತಿ ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
1986ರಲ್ಲಿ ನಡೆದ ವಿಶ್ವದ ಅತ್ಯಂತ ಭೀಕರ ಪರಮಾಣು ದುರಂತದ ಸ್ಥಳವಾದ ಚೆರ್ನೋಬಿಲ್ನಲ್ಲಿ ಈ ಸ್ಥಾವರ ಇದೆ. ಇಲ್ಲಿನ ಸಿಬ್ಬಂದಿ ಎದುರಿಸುತ್ತಿರುವ ಒತ್ತಡದ ಪರಿಸ್ಥಿತಿ ಮತ್ತು ಪರಮಾಣು ಸುರಕ್ಷತೆಗೆ ಕಳವಳ ಇದೆ ಎಂದು ಹೇಳಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾವು ಕಳೆದ ವಾರ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ವಶಕ್ಕೆ ಪಡೆದಿದೆ. ಈ ಮೊದಲು ರಷ್ಯಾದ ಪಡೆಗಳು ಕೆಲ ಮೊಬೈಲ್ ನೆಟ್‌ವರ್ಕ್‌ಗಳು ಮತ್ತು ಇಂಟರ್ನೆಟ್ ಸೌಲಭ್ಯವನ್ನು ಸ್ಥಗಿತಗೊಳಿಸಿವೆ. ಇದರಿಂದಾಗಿ ಸ್ಥಾವರದಿಂದ ವಿಶ್ವಾಸಾರ್ಹ ಮಾಹಿತಿಯನ್ನು ಪಡೆಯಲಾಗುವುದಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ:14ನೇ ದಿನಕ್ಕೆ ಕಾಲಿಟ್ಟ ರಷ್ಯಾ - ಉಕ್ರೇನ್ ಯುದ್ಧ.. ಬೀದಿ - ಬೀದಿಗಳಲ್ಲಿ ಬಿದ್ದ ಶವಗಳು, ನೀರು - ಆಹಾರವಿಲ್ಲದೇ ಪ್ರಜೆಗಳ ನರಳಾಟ