ಲಂಡನ್:ಎರಡನೇ ಮಹಾಯುದ್ಧ(1939-45)ದ ಸಂದರ್ಭದಲ್ಲಿ ನಾಜಿ ಜರ್ಮನಿಯನ್ನು ಸೋಲಿಸಲು ಅಂತಿಮವಾಗಿ ಫ್ರಾನ್ಸ್ ಕೈಗೊಂಡ ಸಿದ್ಧತೆಗಳ ಬಗೆಗಿನ ನೆನಪಿಗಾಗಿ ಫ್ರಾನ್ಸ್ನಲ್ಲಿ 'ಡಿ-ಡೇ' ಆಚರಿಸಲಾಗುತ್ತದೆ. ಆದರೆ ಈಗ ಬ್ರಿಟನ್ನಲ್ಲಿ ಕೊರೊನಾ ವಿರುದ್ಧ ಹೋರಾಡಲು ಫೈಝರ್ ಕೊರೊನಾ ಲಸಿಕೆ ತಯಾರಾಗಿದೆ. ಈ ಹಿನ್ನೆಲೆಯಲ್ಲಿ 'ವಿ-ಡೇ'ಯನ್ನು ಆಚರಿಸಲಾಗುತ್ತಿದೆ.
ಸದ್ಯ ದೇಶದಲ್ಲಿ 8 ಲಕ್ಷ ಕೊರೊನಾ ವ್ಯಾಕ್ಸಿನ್ ತಯಾರಾಗಿದ್ದು, ಯಾರಿಗೆ ಲಸಿಕೆ ನೀಡಬೇಕು ಎಂಬುದನ್ನು ನಿರ್ಧರಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಗಂಭೀರ ಚರ್ಚೆ ನಡೆಸುತ್ತಿದ್ದಾರೆ. ಸಾರ್ವಜನಿಕರಿಗೆ ಈ ಸಂಬಂಧ ಮಾಹಿತಿ ರವಾನಿಸಿರುವ ಅಧಿಕಾರಿಗಳು, "ನಮಗೆ ಕರೆ ಮಾಡಬೇಡಿ, ನಾವು ನಿಮ್ಮನ್ನು ಕರೆಯುತ್ತೇವೆ. ಅಪಾಯಿಂಟ್ಮೆಂಟ್ ವ್ಯವಸ್ಥೆ ಮಾಡಲು ಎನ್ಎಚ್ಎಸ್ ಸಿದ್ಧತೆ ನಡೆಸುತ್ತಿದೆ" ಎಂದಿದ್ದಾರೆ.