ಕರ್ನಾಟಕ

karnataka

ETV Bharat / international

ಜಪಾನ್​ನಲ್ಲಿ ಪತ್ತೆಯಾದ ವೈರಸ್ ಅಷ್ಟೇನು ಪರಿಣಾಮಕಾರಿಯಲ್ಲ : ಡಬ್ಲ್ಯುಹೆಚ್​ಒ

ಕೋವಿಡ್ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಇಲ್ಲವಾದಲ್ಲಿ, ಕೋವಿಡ್ ಹೊಸ ರೂಪಾಂತರ ಹುಟ್ಟಿಕೊಳ್ಳುವ ಸಾಧ್ಯತೆಯಿದೆ. ಜಪಾನ್​ನ ಹೊಸ ವೈರಸ್ ರೂಪಾಂತರವು, ಡಿಸೆಂಬರ್​ನಲ್ಲಿ ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ವೈರಾಣುವಿನಂತೆಯೇ ಎಂದು ಅಂದಾಜಿಸಲಾಗಿದೆ..

ggressive
ಡಬ್ಲ್ಯುಹೆಚ್​ಒ

By

Published : Jan 12, 2021, 5:04 PM IST

ಜಿನೆವಾ: ಜಪಾನಿನಲ್ಲಿ ಹೊಸದಾಗಿ ಪತ್ತೆಯಾದ ರೂಪಾಂತರ ಕೊರೊನಾ ಆಕ್ರಮಣಕಾರಿ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಹೇಳಿದ್ದಾರೆ.

ಭಾನುವಾರ (ಜನವರಿ 10), ಜಪಾನ್​ನ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆ ಬ್ರೆಜಿಲ್​ನಿಂದ ಆಗಮಿಸಿದ ನಾಲ್ವರಲ್ಲಿ ಕೋವಿಡ್​​​ ಹೊಸ ರೂಪಾಂತರವನ್ನು ಪತ್ತೆ ಹಚ್ಚಿತ್ತು. ಈ ಬಗ್ಗೆ ಜಪಾನ್​​​​, ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ರವಾನಿಸಿತು.

ಈ ಕುರಿತು ಪರೀಕ್ಷೆ ನಡೆಸಿದ ಡಬ್ಲ್ಯುಹೆಚ್​ಒ, ವೈರಸ್ ಹರಡುವ ವೇಗ ಹೆಚ್ಚಿರುತ್ತದೆ, ರೋಗ ಲಕ್ಷಣಗಳು ಬದಲಾಗಿವೆ. ಆದರೆ, ಈ ವೈರಸ್ ಅಂಥ ಪರಿಣಾಮಕಾರಿಯೇನಲ್ಲ ಎಂದು ಸ್ಪಷ್ಟಪಡಿಸಿತು.

ಅದಾಗ್ಯೂ, ಜನತೆ ಕೋವಿಡ್ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಇಲ್ಲವಾದಲ್ಲಿ, ಕೋವಿಡ್ ಹೊಸ ರೂಪಾಂತರ ಹುಟ್ಟಿಕೊಳ್ಳುವ ಸಾಧ್ಯತೆಯಿದೆ ಎಂದು ಟೆಡ್ರೊಸ್ ಅಭಿಪ್ರಾಯ ಪಟ್ಟಿದ್ದಾರೆ. ಜಪಾನ್​ನ ಹೊಸ ವೈರಸ್ ರೂಪಾಂತರವು, ಡಿಸೆಂಬರ್​ನಲ್ಲಿ ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ವೈರಾಣುವಿನಂತೆಯೇ ಎಂದು ಅಂದಾಜಿಸಲಾಗಿದೆ.

ABOUT THE AUTHOR

...view details