ಕರ್ನಾಟಕ

karnataka

ETV Bharat / international

ಬಿಸಿ ಗಾಳಿಯಿಂದ ಭಾರೀ ಹಿಮಪಾತಕ್ಕೆ ಸಾಕ್ಷಿಯಾದ ವಿಶ್ವದ ಅತಿದೊಡ್ಡ ದ್ವೀಪರಾಷ್ಟ್ರ!

ವಿಶ್ವದ ಅತಿದೊಡ್ಡ ದ್ವೀಪವಾಗಿರುವ ಗ್ರೀನ್​ಲ್ಯಾಂಡ್ ಭಾರೀ ಪ್ರಮಾಣದ ಹಿಮ ಕರಗುವಿಕೆಗೆ ಸಾಕ್ಷಿಯಾಗಿದೆ. ದಿನದಿಂದ ದಿನಕ್ಕೆ ಹಿಮಪದರ ಕರಗುವಿಕೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಈ ವರ್ಷ ಶೇ. 56.5 ರಷ್ಟು ಕರಗುವಿಕೆ ದಾಖಲಾಗಿದೆ.

greenland

By

Published : Aug 3, 2019, 6:19 PM IST

ಗ್ರೀನ್​ಲ್ಯಾಂಡ್ : ಯುರೋಪ್​ನ ಐದು ರಾಷ್ಟ್ರಗಳಲ್ಲಿ ಕಳೆದೊಂದು ವಾರದಲ್ಲಿ ಜೋರಾಗಿ ಬೀಸುತ್ತಿರುವ ಬಿಸಿಗಾಳಿಯಿಂದಾಗಿ ತಾಪಮಾನದಲ್ಲಿ ಭಾರೀ ಏರಿಕೆ ಕಂಡಿದೆ. ಇನ್ನೊಂದೆಡೆ ವಿಶ್ವದ ಅತಿದೊಡ್ಡ ದ್ವೀಪವಾಗಿರುವ ಗ್ರೀನ್​ಲ್ಯಾಂಡ್​ನ ಹಿಮಪದರ ಭಾರೀ ಪ್ರಮಾಣದಲ್ಲಿ ಕರಗಿದೆ.

ಗ್ರೀನ್​ಲ್ಯಾಂಡ್, ವಿಶ್ವದ ಅತಿದೊಡ್ಡ ದ್ವೀಪರಾಷ್ಟ್ರ. ಇದು ಅಟ್ಲಾಂಟಿಕ್ ಮತ್ತು ಆರ್ಕಟಿಕ್​ ಸಾಗರಗಳ ನಡುವೆ ಇದೆ. ಈ ದ್ವೀಪದ ಮೇಲ್ಪದರದ 82 ಶೇ. ಭಾಗ ಹಿಮದಿಂದಲೇ ತುಂಬಿದೆ. ಸದ್ಯ ಗ್ರೀನ್​ಲ್ಯಾಂಡ್ ಹಾಗೂ ಸುತ್ತಮುತ್ತಲ ರಾಷ್ಟ್ರಗಳಲ್ಲಿ ಜೋರಾಗಿ ಬೀಸುತ್ತಿರುವ ಬಿಸಿಗಾಳಿಯಿಂದಾಗಿ ಭಾರೀ ಪ್ರಮಾಣದಲ್ಲಿ ಹಿಮಪದರ ಕರಗಿ ನೀರಾಗುತ್ತಿದೆ.

ದಿನದಿಂದ ದಿನಕ್ಕೆ ಹಿಮಪದರ ಕರಗುವಿಕೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಈ ವರ್ಷ ಶೇ. 56.5 ರಷ್ಟು ದಾಖಲೆಯ ಕರಗುವಿಕೆ ದಾಖಲಾಗಿದೆ. ಕಳೆದ ಬುಧವಾರ ಒಂದರಲ್ಲೇ ಸುಮಾರು ಒಂದು ಸಾವಿರ ಕೋಟಿ ಟನ್​ನಷ್ಟು ಮಂಜು ಕರಗಿ ನೀರಾಗಿ ಹೋಗಿದೆ. ಅಲ್ಲದೆ ಕಳೆದ ಜುಲೈನಿಂದ 19700 ಕೋಟಿ ಟನ್​ನಷ್ಟು ಹಿಮ ಕರಗಿ ನೀರಾಗಿದೆ ಎಂದು ಡ್ಯಾನಿಶ್ ಹವಾಮಾನ ಸಂಸ್ಥೆಯ ಹವಾಮಾನ ವಿಜ್ಞಾನಿ ರುತ್ ಮೊಟ್ರಾಮ್ ಹೇಳಿದ್ದಾರೆ.

ಇದೇ ರೀತಿಯ ವಾತಾವರಣ ಇನ್ನೂ ಮುಂದುವರಿಯುವ ಸಾಧ್ಯತೆಯಿದ್ದು, ಹಿಮಪದರದ ಕರಗುವಿಕೆ ಇದೇ ರೀತಿ ಮುಂದುವರಿಯಲಿದೆ ಎಂದು ರುತ್ ಮೊಟ್ರಾಮ್ ತಿಳಿಸಿದ್ದಾರೆ.

ABOUT THE AUTHOR

...view details