ಜರ್ಮನಿ :ನವದೆಹಲಿಯಲ್ಲಿ ರಹಸ್ಯ ಸೇವೆಗಾಗಿ ಸಿಖ್ ಮತ್ತು ಕಾಶ್ಮೀರಿ ಸಮುದಾಯಗಳ ಮೇಲೆ ಬೇಹುಗಾರಿಕೆ ನಡೆಸಿದ ಆರೋಪದಡಿ ಜರ್ಮನಿಯಲ್ಲಿ ಭಾರತೀಯ ಪ್ರಜೆಯೊಬ್ಬರು ವಿಚಾರಣೆಗೆ ಒಳಗಾಗಲಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
ಬೇಹುಗಾರಿಕೆ ಆರೋಪದಡಿ ಜರ್ಮನಿಯಲ್ಲಿ ವಿಚಾರಣೆಗೆ ಒಳಗಾಗಲಿರುವ ಭಾರತೀಯ ಪ್ರಜೆ!! - ಭಾರತೀಯ ವಿದೇಶಿ ಗುಪ್ತಚರ ಸಂಸ್ಥೆ ರಿಸರ್ಚ್ & ಅನಾಲಿಸಿಸ್ ವಿಂಗ್
ಬೇಹುಗಾರಿಕೆ ನಡೆಸಿದ ಆರೋಪದಡಿ ಜರ್ಮನಿಯಲ್ಲಿ ಭಾರತೀಯ ಪ್ರಜೆಯೊಬ್ಬರು ವಿಚಾರಣೆಗೆ ಒಳಗಾಗಲಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ. ಆಗಸ್ಟ್ 25ರಂದು ವಿಚಾರಣೆ ಪ್ರಾರಂಭವಾಗಲಿದೆ.
spy
ಬಲ್ವೀರ್ ಎಂದು ಗುರುತಿಸಲ್ಪಟ್ಟಿರುವ 54 ವರ್ಷದ ಶಂಕಿತ 2015ರಿಂದ ಭಾರತೀಯ ವಿದೇಶಿ ಗುಪ್ತಚರ ಸಂಸ್ಥೆ ರೀಸರ್ಚ್ & ಅನಾಲಿಸಿಸ್ ವಿಂಗ್‌ನೊಂದಿಗೆ ಕೆಲಸ ಮಾಡುತ್ತಿದ್ದಾನೆ ಎಂದು ಫೆಡರಲ್ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.
ಜರ್ಮನಿಯ ಫ್ರಾಂಕ್ಫರ್ಟ್ನ ನ್ಯಾಯಾಲಯದಲ್ಲಿ ಅಗಸ್ಟ್ 25ರಂದು ವಿಚಾರಣೆ ಪ್ರಾರಂಭವಾಗಲಿದೆ. ಕಳೆದ ಡಿಸೆಂಬರ್ನಲ್ಲಿ ಇದೇ ನ್ಯಾಯಾಲಯ ಬೇಹುಗಾರಿಕೆ ನಡೆಸಿದ ಆರೋಪದಡಿ ಭಾರತೀಯ ದಂಪತಿಗೆ ಶಿಕ್ಷೆ ವಿಧಿಸಿತ್ತು.