ನವದೆಹಲಿ:ಯುದ್ಧಪೀಡಿತ ಉಕ್ರೇನ್‌ನ ಖಾರ್ಕಿವ್, ಸುಮಿ ಮತ್ತು ಇತರ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ರಷ್ಯಾದ ಪ್ರದೇಶಕ್ಕೆ ತಲುಪಿಸಲು 'ಮಾನವೀಯ ಕಾರಿಡಾರ್' (Humanitarian Corridor) ಅನ್ನು ರಚಿಸಲು ನಾವು ಕೆಲಸ ಮಾಡುತ್ತಿದೆ ಎಂದು ರಷ್ಯಾ ಬುಧವಾರ ಹೇಳಿದೆ.
ಸುದ್ದಿಗೋಷ್ಟಿಯೊಂದರಲ್ಲಿ ಮಾತನಾಡಿದ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್, ಉಕ್ರೇನ್ನಲ್ಲಿರುವ ಭಾರತೀಯರ ಸುರಕ್ಷತೆಯ ವಿಷಯದಲ್ಲಿ ರಷ್ಯಾ ಭಾರತ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ. ಭಾರತೀಯರಿಗೆ ಸುರಕ್ಷಿತ ಮಾರ್ಗವನ್ನು ಆದಷ್ಟು ಬೇಗ ರಚಿಸಲಾಗುತ್ತದೆ ಎಂದು ಹೇಳಿದ್ದಾರೆ.
ಉಕ್ರೇನ್‌ನಲ್ಲಿನ ಸಂಘರ್ಷಪೀಡಿತ ಪ್ರದೇಶಗಳಿಂದ ಭಾರತೀಯರನ್ನು ರಷ್ಯಾದ ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗುತ್ತದೆ. ಈ ಕುರಿತು ಕೆಲವು ಕ್ರಮಗಳ ತೆಗೆದುಕೊಳ್ಳುವ ನಿಟ್ಟಿನಲ್ಲಿ ರಷ್ಯಾ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ಡೆನಿಸ್ ಅಲಿಪೋವ್ ಹೇಳಿದ್ದಾರೆ.
S-400 ಕುರಿತು..: ಕೆಲವು ಯುದ್ಧ ಸಾಮಗ್ರಿಗಳನ್ನು ರಷ್ಯಾ ಭಾರತಕ್ಕೆ ಪೂರೈಸಿದೆ. ಇತ್ತೀಚೆಗಷ್ಟೇ ಒಂದು ಯುನಿಟ್ ಕ್ಷಿಪಣಿ ನಿರೋಧಕ ವ್ಯವಸ್ಥೆಯಾದ ಎಸ್-400 ಅನ್ನು ಭಾರತಕ್ಕೆ ಪೂರೈಸಿದ್ದು, ಇನ್ನೂ ಹಲವು ಯುನಿಟ್ಗಳನ್ನು ರಷ್ಯಾ ಭಾರತಕ್ಕೆ ಪೂರೈಸಬೇಕಿದೆ. ರಷ್ಯಾದ ಮೇಲೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ನಿರ್ಬಂಧ ಹೇರಿರುವ ಕಾರಣದಿಂದ ಎಸ್-400 ಪೂರೈಕೆಗೆ ಅಡೆತಡೆಯುಂಟಾಗಬಹುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅಲಿಪೋವ್ ಅಂತಹ ಯಾವುದೇ ಅಡೆತಡೆ ಎದುರಾಗುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಉಕ್ರೇನ್-ರಷ್ಯಾ ಯುದ್ಧ: ಕ್ರಿಮಿಯಾ ಸಮೀಪದ ಖೆರ್ಸನ್ ನಗರ ವಶಕ್ಕೆ ಪಡೆದ ರಷ್ಯಾ ಸೇನೆ
ಉಕ್ರೇನ್ ಮತ್ತು ರಷ್ಯಾ ವಿಚಾರದಲ್ಲಿ ಭಾರತ ನಿಷ್ಪಕ್ಷಪಾತ ಧೋರಣೆಯನ್ನು ಅನುಸರಿಸಿದೆ. ಉಕ್ರೇನ್ನಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಚಾರವನ್ನು ಭಾರತಕ್ಕೆ ಸಾಧ್ಯವಾದಷ್ಟೂ ತಿಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಅಲಿಪೋವ್ ಸ್ಪಷ್ಟನೆ ನೀಡಿದ್ದಾರೆ.