ಕರ್ನಾಟಕ

karnataka

ETV Bharat / international

ರೆಕ್ಕೆಯಲ್ಲಿ ಪ್ರಯಾಣಿಕರನ್ನು ಹೊತ್ತಯ್ಯಬಲ್ಲ ವಿಮಾನ: ಸಂಚಲನ ಸೃಷ್ಟಿಸಿದ 'ಫ್ಲೈ-ವಿ' - ಹೈದರಾಬಾದ್​

ಜರ್ಮನಿ ನಿರ್ಮಿತ 'ಫ್ಲೈ-ವಿ' ವಿಮಾನ ಯಶಸ್ವಿ ಹಾರಾಟ ನಡೆಸಿದೆ. ಈ ವಿಮಾನವು ತನ್ನ ರೆಕ್ಕೆಯ ಮುಂಭಾಗದಲ್ಲಿ ಪ್ರಯಾಣಿಕರು ಕೂರುವ ಕ್ಯಾಬಿನ್​ ಇದೆ. ಅಷ್ಟೇ ಅಲ್ಲದೆ ಸರಕು ತುಂಬುವ ಸ್ಥಳ ಮತ್ತು ಇಂಧನ ಟ್ಯಾಂಕ್‌ ಕೂಡ ಇದರ ರೆಕ್ಕೆಯಲ್ಲಿ ಇರಲಿದೆ.

ಫ್ಲೈ-ವಿ ವಿಮಾನ
ಫ್ಲೈ-ವಿ ವಿಮಾನ

By

Published : Sep 7, 2020, 9:18 AM IST

ಹೈದರಾಬಾದ್​:ಇಂಧನ ಮಿತವ್ಯಯ ಹಾಗೂ ಸುಖಕರ ಪ್ರಯಾಣಕ್ಕೆ ಸೂಕ್ತ ಮಾದರಿ ಎಂದೇ ಬಿಂಬಿತವಾಗಿರುವ ಜರ್ಮನಿ ನಿರ್ಮಿತ 'ಫ್ಲೈ-ವಿ' ವಿಮಾನ ಭಾನುವಾರ ಯಶಸ್ವಿ ಹಾರಾಟ ನಡೆಸಿದೆ.

ವಿಮಾನದ ವಿಶೇಷತೆ: ಈ ವಿಮಾನವು ತನ್ನ ರೆಕ್ಕೆಯ ಮುಂಭಾಗದಲ್ಲಿ ಪ್ರಯಾಣಿಕರು ಕೂರುವ ಕ್ಯಾಬಿನ್​ ಇದೆ. ಅಷ್ಟೇ ಅಲ್ಲದೆ ಸರಕು ತುಂಬುವ ಸ್ಥಳ ಮತ್ತು ಇಂಧನ ಟ್ಯಾಂಕ್‌ ಕೂಡ ಇದರ ರೆಕ್ಕೆಯಲ್ಲಿ ಇರಲಿದೆ. ಗಾಳಿಯಲ್ಲಿ ಸುಲಭವಾಗಿ ಹಾರಾಡಬಲ್ಲ ಈ ವಿಮಾನ ಇಂಧನ ಉಳಿತಾಯ ಮಾಡಲಿದೆ. ಇನ್ನು ಬೇರೆ ವಿಮಾನಗಳಿಗೆ ಹೋಲಿಸಿದರೆ ಶೇ. 20ರಷ್ಟು ಇಂಧನ ಉಳಿತಾಯವಾಗಲಿದೆ.

'ವಿ' ಆಕೃತಿಯ ಈ ವಿಮಾನ ಜರ್ಮನಿಯ ವಾಯುನೆಲೆಯಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದೆ. ಇದನ್ನು ಡಚ್‌ ಏರ್‌ಲೈನ್ಸ್‌ ಕೆಎಲ್‌ಎಂ ಸಹಯೋಗದಲ್ಲಿ ನೆದರ್‌ಲೆಂಡ್‌ನ ಡೆಲ್ಫ್​​ ಯುನಿವರ್ಸಿಟಿಯ ತಂತ್ರಜ್ಞಾನ ವಿಭಾಗ ಅಭಿವೃದ್ಧಿ ಮಾಡಿದೆ.

ಕುರಿತು ಡೆಲ್ಫ್​​ ಯುನಿವರ್ಸಿಟಿಯ ಪ್ರೊ. ರಾಲೋಫ್‌ ವೋಸ್‌ ಮಾತನಾಡಿದ್ದು, 'ಈ ವಿಮಾನದ ಹಾರಾಟದಲ್ಲಿ ಕೆಲ ಸಮಸ್ಯೆಗಳು ಕಂಡು ಬಂದಿವೆ. ಟರ್ನಿಂಗ್​ ಹಂತದಲ್ಲಿ ಸ್ವಲ್ವ ಮಟ್ಟಿನ ಸಮಸ್ಯೆ ಕಂಡು ಬಂದಿದೆ. ಹಾಗೆಯೇ ರೆಕ್ಕೆಗಳೇ ವಿಮಾನದ ದೇಹಾಕೃತಿಯಾಗಿರುವುದರಿಮದ ರನ್​ ವೇನಲ್ಲಿ ಭೂ ಸ್ಪರ್ಶ ಮಾಡುವಾಗ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ. ಮುಂದಿನ ಹಂತದಲ್ಲಿ ಸಮಸ್ಯೆಗಳನ್ನು ಪರಿಹರಿಸಲಾಗುವುದು' ಎಂದು ಹೇಳಿದ್ದಾರೆ.

ಈ ವಿಮಾನ 22.5 ಕೆಜಿ ತೂಕವಿದ್ದು, 3 ಮೀಟರ್​ ಉದ್ದವಿದೆ.

ABOUT THE AUTHOR

...view details