ಲಂಡನ್ (ಯು.ಕೆ):ಎರಡು ದಶಕಗಳ ಸೇನಾ ಕಾರ್ಯಚರಣೆಯ ಬಳಿಕ ಅಫ್ಘನ್ ನೆಲದಿಂದ ಯುಕೆ ಸೇನೆಯು ತವರಿಗೆ ಮರಳಿತು. ಈ ಬಗ್ಗೆ ಪ್ರಧಾನಿ ಬೋರಿಸ್ ಜಾನ್ಸನ್ ಪ್ರತಿಕ್ರಿಯಿಸಿದ್ದು, ಎಲ್ಲಾ ನಾಗರಿಕರನ್ನು ಅಲ್ಲಿಂದ ಕರೆತರಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಅಫ್ಘನ್ ನೆಲದಿಂದ ಯುಕೆಯ ಕೊನೆಯ ಏರ್ಲಿಫ್ಟ್ ನಡೆದಿದ್ದು, ವಿಮಾನದಲ್ಲಿ ಸಾವಿರ ಮಂದಿ ಸ್ವದೇಶಕ್ಕೆ ಮರಳಿದ್ದಾರೆ. ಈ ವಿಮಾನದಲ್ಲಿ ಯುಕೆ ಹಾಗೂ ಅಫ್ಘನ್ ಪ್ರಜೆಗಳಿದ್ದಾರೆ ಎಂದು ಅಫ್ಘನ್ನಲ್ಲಿರುವ ಯುಕೆ ರಾಯಭಾರಿ ಲೌರಿ ಬ್ರಿಸ್ಟೋ ತಿಳಿಸಿದರು. ಈ ಕಾರ್ಯಾಚರಣೆ ಇಲ್ಲಿಗೆ ಕೊನೆಯಾಗುತ್ತಿದೆ ಎಂದು ಕಾಬೂಲ್ ವಿಮಾನ ನಿಲ್ದಾಣದಲ್ಲಿ ತಾಯ್ನಾಡಿಗೆ ಮರಳುವ ಮುನ್ನ ಅವರು ಹೇಳಿದ್ದಾರೆ.